ಐಸಿಸಿ ಮಹಿಳಾ ಏಕದಿನ, ಟಿ20 ತಂಡ ಪ್ರಕಟ- ಹರ್ಮನ್‌ಪ್ರೀತ್‍ ನಾಯಕಿ!

Published : Dec 31, 2018, 06:28 PM IST
ಐಸಿಸಿ ಮಹಿಳಾ ಏಕದಿನ, ಟಿ20 ತಂಡ ಪ್ರಕಟ- ಹರ್ಮನ್‌ಪ್ರೀತ್‍ ನಾಯಕಿ!

ಸಾರಾಂಶ

ಐಸಿಸಿ ಮಹಿಳಾ ತಂಡವನ್ನ ಪ್ರಕಟಿಸಿದೆ. ಏಕದಿನ ಹಾಗೂ ಟಿ20 ತಂಡ ಪ್ರಕಟ ಮಾಡಿರುವ ಐಸಿಸಿ, ಟೀಂ ಇಂಡಿಯಾ ಸ್ಫೋಟಕ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್‌ಗೆ ನಾಯಕ ಪಟ್ಟ ನೀಡಲಾಗಿದೆ.

ದುಬೈ(ಡಿ.31): ಐಸಿಸಿ ಮಹಿಳಾ ಏಕದಿನ ಹಾಗೂ ಟಿ20 ತಂಡ ಪ್ರಕಟಿಸಲಾಗಿದೆ. ನ್ಯೂಜಿಲೆಂಡ್ ಸುಜಿ ಬೇಟ್ಸ್‌ಗೆ ಏಕದಿನ ನಾಯಕ ಪಟ್ಟ ನೀಡಿದರೆ, ಐಸಿಸಿ ಮಹಿಳಾ ಟಿ20 ತಂಡಕ್ಕೆ ಟೀಂ ಇಂಡಿಯಾದ ಹರ್ಮನ್‌ಪ್ರೀತ್ ಕೌರ್‌ಗೆ ನಾಯಕತ್ವ ನೀಡಲಾಗಿದೆ. 

ಇದನ್ನೂ ಓದಿ: ಗುಡ್ ಬೈ 2018: ಟೀಂ ಇಂಡಿಯಾ ಜಯಿಸಿದ ಟಾಪ್ 5 ಸರಣಿಗಳಿವು

2018ರಲ್ಲಿ ಆಡಿದ 7 ಏಕದಿನ ಪಂದ್ಯದಿಂದ ಬೇಟ್ಸ್ 438 ರನ್ ಸಿಡಿಸಿದ್ದಾರೆ. 2 ಶತಕ ಹಾಗೂ 1 ಅರ್ಧಶತಕ ಸಿಡಿಸಿದ್ದಾರೆ. ಇನ್ನು ಏಕದಿನ ರ್ಯಾಕಿಂಗ್‌ನಲ್ಲಿ ಬೇಟ್ಸ್ 7ನೇ ಸ್ಥಾನ ಪಡೆದಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡಿರುವ ಬೇಟ್ಸ್‌ಗೆ ಐಸಿಸಿ ಏಕದಿನ ತಂಡದ ನಾಯಕತ್ವ ನೀಡಲಾಗಿದೆ.

ಇದನ್ನೂ ಓದಿ: ಗುಡ್ ನ್ಯೂಸ್: ತಂದೆಯಾದ ರೋಹಿತ್ ಶರ್ಮಾ

ಟಿ20 ಮಾದರಿಯಲ್ಲಿ ಯಶಸ್ವಿ ನಾಯಕಿಯಾಗಿ ಮಿಂಚಿರುವ ಹರ್ಮನ್‌ಪ್ರೀತ್ ಕೌರ್, 2018ರಲ್ಲಿ25 ಪಂದ್ಯಗಳಿಂದ 663 ರನ್ ಸಿಡಿಸಿದ್ದಾರೆ. ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಸೆಮಿಫೈನಲ್ ವರೆಗೆ ಕೊಂಡೊಯ್ದ ಹೆಗ್ಗಳಿಕೆಗೆ ಕೌರ್ ಪಾತ್ರರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!