27ನೇ ವಿಶ್ವ ಬಿಲಿಯರ್ಡ್ಸ್‌ ಪ್ರಶಸ್ತಿ ಜಯಿಸಿದ ಪಂಕಜ್‌ ಪಂಕಜ್‌ ಅಡ್ವಾಣಿ

By Kannadaprabha News  |  First Published Nov 26, 2023, 9:50 AM IST

ಕೆಲ ದಿನಗಳ ಹಿಂದಷ್ಟೇ ಲಾಂಗ್‌ ಫಾರ್ಮ್ಯಾಟ್‌ನಲ್ಲಿ ಕೊಠಾರಿ ವಿರುದ್ಧವೇ ಗೆಲ್ಲುವ ಮೂಲಕ ಪಂಕಜ್‌ 26ನೇ ವಿಶ್ವ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಒಟ್ಟಾರೆ ಪಂಕಜ್‌ ಬಿಲಿಯರ್ಡ್ಸ್‌ನ ಲಾಂಗ್‌ ಫಾರ್ಮ್ಯಾಟ್‌ನಲ್ಲಿ 9 ಬಾರಿ, ಪಾಯಿಂಟ್‌ ಫಾರ್ಮ್ಯಾಟ್‌ನಲ್ಲಿ 9, ಟೀಂ ಚಾಂಪಿಯನ್‌ಶಿಪ್‌ನಲ್ಲಿ 1 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.


ದೋಹಾ(ನ.26): ಭಾರತದ ತಾರಾ ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ವಿಶ್ವ ಕಿರೀಟದ ಗಳಿಕೆಯನ್ನು 27ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಶುಕ್ರವಾರ ದೋಹಾದಲ್ಲಿ ನಡೆದ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್‌(ಪಾಯಿಂಟ್‌ ಫಾರ್ಮ್ಯಾಟ್‌)ನಲ್ಲಿ ಭಾರತದವರೇ ಆದ ಸೌರವ್‌ ಕೊಠಾರಿ ವಿರುದ್ಧ 5-0 ಅಂತರದಲ್ಲಿ ಜಯಭೇರಿ ಬಾರಿಸಿದರು. ಇದು ಪಾಯಿಂಟ್‌ ಫಾರ್ಮ್ಯಾಟ್‌ನಲ್ಲಿ ಪಂಕಜ್‌ ಗೆದ್ದ 9ನೇ ವಿಶ್ವ ಕಿರೀಟ.

ಕೆಲ ದಿನಗಳ ಹಿಂದಷ್ಟೇ ಲಾಂಗ್‌ ಫಾರ್ಮ್ಯಾಟ್‌ನಲ್ಲಿ ಕೊಠಾರಿ ವಿರುದ್ಧವೇ ಗೆಲ್ಲುವ ಮೂಲಕ ಪಂಕಜ್‌ 26ನೇ ವಿಶ್ವ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಒಟ್ಟಾರೆ ಪಂಕಜ್‌ ಬಿಲಿಯರ್ಡ್ಸ್‌ನ ಲಾಂಗ್‌ ಫಾರ್ಮ್ಯಾಟ್‌ನಲ್ಲಿ 9 ಬಾರಿ, ಪಾಯಿಂಟ್‌ ಫಾರ್ಮ್ಯಾಟ್‌ನಲ್ಲಿ 9, ಟೀಂ ಚಾಂಪಿಯನ್‌ಶಿಪ್‌ನಲ್ಲಿ 1 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಉಳಿದ 8 ವಿಶ್ವ ಕಿರೀಟ ಸ್ನೂಕರ್‌ನಲ್ಲಿ ಗೆದ್ದಿದ್ದಾರೆ.

Latest Videos

undefined

ಭಾರತದ ವಿದ್ಯಾ ಪಿಳ್ಳೈ ವಿಶ್ವ ಸ್ನೂಕರ್‌ ಚಾಂಪಿಯನ್‌

ಸಿಂಗಾಪೂರ ಸಿಟಿ(ಸಿಂಗಾಪೂರ): ಭಾರತದ ತಾರಾ ಸ್ನೂಕರ್‌ ಪಟು ವಿದ್ಯಾ ಪಿಳ್ಳೈ ವಿಶ್ವ ಮಹಿಳೆಯರ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ವಿದ್ಯಾ, ಭಾರತದವರೇ ಆದ ಅನುಪಮಾ ರಾಮಚಂದ್ರ ವಿರುದ್ಧ 4-1 ಅಂತರದಲ್ಲಿ ಜಯಭೇರಿ ಬಾರಿಸಿದರು.

ರಾಜ್ ಕಪ್ ಸೀಸನ್-6 ಜರ್ಸಿ ಬಿಡುಗಡೆ; ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಅವರು ಚೀನಾದ ಬಾಯಿ ಯುಲು ವಿರುದ್ಧ 4-3ರಿಂದ ಜಯಗಳಿಸಿದ್ದರು. ಇದು ವಿದ್ಯಾಗೆ ವೈಯಕ್ತಿಕ ವಿಭಾಗದಲ್ಲಿ ದೊರೆತ ಮೊದಲ ವಿಶ್ವ ಕಿರೀಟ. ಈ ಮೊದಲು 2015, 2016, 2017ರಲ್ಲಿ ರನ್ನರ್‌-ಅಪ್‌ ಆಗಿದ್ದರು. ತಂಡ ವಿಭಾಗದಲ್ಲಿ ಅವರು 2013ರಲ್ಲಿ ಚಾಂಪಿಯನ್‌ ಆಗಿದ್ದರು. 13 ಬಾರಿ ಅವರು ರಾಷ್ಟ್ರೀಯ ಚಾಂಪಿಯನ್‌ ಎನಿಸಿಕೊಂಡಿದ್ದಾರೆ.

ಐಟಿಎಫ್‌ ಮಹಿಳಾ ವಿಶ್ವ ಟೆನಿಸ್ ಟೂರ್ನಿ: ಫೈನಲ್‌ನಲ್ಲಿ ಜೀಲ್‌ vs ರಶ್ಮಿಕಾ ಫೈಟ್

ಬೆಂಗಳೂರು: ಶ್ರೇಯಾಂಕ ರಹಿತ ಭಾರತದ ಟೆನಿಸ್‌ ಆಟಗಾರ್ತಿ ಜೀಲ್‌ ದೇಸಾಯಿ ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸಿದ್ದು, ಐಟಿಎಫ್‌ ಮಹಿಳಾ ವಿಶ್ವ ಟೆನಿಸ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಶ್ರೀವಳ್ಳಿ ರಶ್ಮಿಕಾ ಕೂಡಾ ಪ್ರಶಸ್ತಿ ಸುತ್ತಿಗೇರಿದ್ದು, ಭಾನುವಾರ ಟ್ರೋಫಿಗಾಗಿ ಪರಸ್ಪರ ಸೆಣಸಾಡಲಿದ್ದಾರೆ.

ಶನಿವಾರ ಇಲ್ಲಿ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಜೀಲ್‌, ಏಷ್ಯನ್‌ ಗೇಮ್ಸ್‌ ಮಿಶ್ರ ಡಬಲ್ಸ್‌ ಚಿನ್ನ ವಿಜೇತ ಋತುಜಾ ಭೋಸ್ಲೆ ವಿರುದ್ಧ 3-6, 6-4, 7-5 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಇದೇ ವೇಳೆ ಮತ್ತೊಂದು ಸೆಮೀಸ್‌ನಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್‌ ರಶ್ಮಿಕಾ, ಥಾಯ್ಲೆಂಡ್‌ನ ಲಾನ್‌ಲನಾ ವಿರುದ್ಧ 6-2, 6-1 ಸುಲಭ ಜಯಗಳಿಸಿದರು.

Vijay Hazare Trophy: ಪಡಿಕ್ಕಲ್ ಶತಕ, ಕರ್ನಾಟಕಕ್ಕೆ ಸತತ ಎರಡನೇ ಜಯ

ಡಬಲ್ಸ್‌ನಲ್ಲಿ ಇಟಲಿಯ ಡಿಲೆಟ್ಟಾ ಚೆರುಬಿನಿ-ಜರ್ಮನಿಯ ಅಂಥೋನಿಯಾ ಸ್ಮಿತ್‌ ಜೋಡಿ ಚಾಂಪಿಯನ್‌ ಎನಿಸಿಕೊಂಡಿತು. ಫೈನಲ್‌ನಲ್ಲಿ ಈ ಜೋಡಿ ಥಾಯ್ಲೆಂಡ್‌ನ ಪುನ್ನಿನ್‌-ರಷ್ಯಾದ ಅನ್ನಾ ಉರೆಕೆ ವಿರುದ್ಧ 4-6, 7-5, 10-4ರಲ್ಲಿ ಜಯಗಳಿಸಿತು.

click me!