
ಸಿಡ್ನಿ(ಮೇ.12): ‘ಒಂದು ವೇಳೆ ನನ್ನ ನಾಯಕ ಅಲನ್ ಬಾರ್ಡರ್, ನನಗೆ ಚೆಂಡು ವಿರೂಪಗೊಳಿಸಲು ಹೇಳಿದ್ದರೆ ಹಾಗೇ ಮಾಡುತ್ತಿದ್ದೆ’ ಎಂದು ಆಸ್ಟ್ರೇಲಿಯಾ ನೂತನ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ನಾಯಕ ಬಾರ್ಡರ್ ಹೇಳಿದ್ದರೆ, ಚೆಂಡು ವಿರೂಪಗೊಳಿಸಲು ನಾನು ಅಂಜುತ್ತಿರಲಿಲ್ಲ. ಆದರೆ ಬಾರ್ಡರ್ ನನಗೆ ಅಂತಹ ಕ್ಷುಲ್ಲಕ ಕೃತ್ಯಗಳಿಗೆ ಪ್ರೇರೇಪಿಸಲಿಲ್ಲ’ ಎಂದು ಲ್ಯಾಂಗರ್ ಹೇಳಿದ್ದಾರೆ. ನಾಯಕ ಸ್ಟೀವ್ ಸ್ಮಿತ್ ಸಲಹೆಯಂತೆ ಕ್ಯಾಮರೂನ್ ಬೆನ್’ಕ್ರಾಫ್ಟ್, ಸಾಂದರ್ಭಿಕ ಒತ್ತಡಕ್ಕೆ ಸಿಲುಕಿ ಚೆಂಡು ವಿರೂಪಗೊಳಿಸಿದ್ದಾರೆ. ಆಟದ ನಡುವೆ ಇಂತಹ ಒತ್ತಡಕ್ಕೆ ಸಿಲುಕುವುದು ಸಹಜ’ ಎಂದು ಲ್ಯಾಂಗರ್ ಕಳಂಕಿತ ಕ್ರಿಕೆಟಿಗರನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೋನ್ ಬೆನ್’ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಆ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ವಾರ್ನರ್’ರನ್ನು ಒಂದು ವರ್ಷದ ಮಟ್ಟಿಗೆ ನಿಷೇಧ ಹೇರಿದ್ದರೆ, ಬೆನ್’ಕ್ರಾಪ್ಟ್ ಅವರ ಮೇಲೆ 9 ತಿಂಗಳ ನಿಷೇಧ ಹೇರಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.