
ಇಂದೋರ್(ಮೇ.12): ಮುಂಬೈ ಇಂಡಿಯನ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿನ ಆಘಾತದಿಂದ ಹೊರಬರಲು ಕೋಲ್ಕತಾ ನೈಟ್‌ರೈಡರ್ಸ್ ಚಡಪಡಿಸುತ್ತಿದ್ದು, ಇಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ಸವಾಲು ಎದುರಾಗಲಿದೆ.
11 ಪಂದ್ಯಗಳಿಂದ 10 ಅಂಕ ಪಡೆದಿರುವ ಕೆಕೆಆರ್‌ಗಿದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರಷ್ಟೇ ಪ್ಲೇ-ಆಫ್ ಆಸೆ ಜೀವಂತವಾಗಿರಲಿದೆ. ಕಿಂಗ್ಸ್ ಇಲೆವೆನ್ ಕಳೆದ ಪಂದ್ಯದಲ್ಲಿ ಅನಗತ್ಯ ಪ್ರಯೋಗಗಳನ್ನು ಮಾಡಿ, ರಾಜಸ್ಥಾನ ವಿರುದ್ಧ ಸೋಲುಂಡಿತ್ತು. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ 159 ರನ್ ಗುರಿ ಬೆನ್ನಟ್ಟಲು ವಿಫಲವಾಗಿದ್ದು, ಕಿಂಗ್ಸ್ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿತ್ತು. ತಂಡ 10 ಪಂದ್ಯಗಳಿಂದ 12 ಅಂಕ ಗಳಿಸಿದ್ದು ಗೆಲುವು ಕೈಜಾರದಂತೆ ಎಚ್ಚರಿಕೆ ವಹಿಸಬೇಕಿದೆ. ಮುಂಬೈ ಅಬ್ಬರ ಹೆಚ್ಚುತ್ತಿದ್ದು, ಕಿಂಗ್ಸ್ ಸೋಲು ಹಾಲಿ ಚಾಂಪಿಯನ್ಸ್'ಗೆ ಲಾಭವಾಗಲಿದೆ.
ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಇದುವರೆಗೆ 22 ಬಾರಿ ಮುಖಾಮುಖಿಯಾಗಿದ್ದು, KKR ತಂಡ 14 ಬಾರಿ ಗೆದ್ದಿದ್ದರೆ, KXIP 8 ಬಾರಿ ಗೆಲುವಿನ ಸಿಹಿ ಸವಿದಿದೆ.
ಸಂಭಾವ್ಯ ತಂಡ ಹೀಗಿದೆ:
KXIP: ರಾಹುಲ್, ಗೇಲ್, ಕರುಣ್, ಅಕ್ಷ್'ದೀಪ್, ತಿವಾರಿ, ಅಕ್ಷರ್, ಸ್ಟೋಯ್ನಿಸ್, ಅಶ್ವಿನ್ (ನಾಯಕ), ಆ್ಯಂಡ್ರೂ ಟೈ, ಮೋಹಿತ್ ಶರ್ಮಾ, ಮುಜೀಬ್ ರಹಮಾನ್
KKR: ನರೈನ್, ಲಿನ್, ಉತ್ತಪ್ಪ, ರಾಣಾ, ಆ್ಯಂಡ್ರೆ ರಸೆಲ್, ಕಾರ್ತಿಕ್(ನಾಯಕ), ರಿಂಕು ಸಿಂಗ್, ಟಾಮ್ ಕುರ್ರಾನ್, ಪಿಯೂಷ್ ಚಾವ್ಲಾ, ಕುಲ್ದೀಪ್, ಪ್ರಸಿದ್ಧ್ ಕೃಷ್ಣ
ಸ್ಥಳ: ಇಂದೋರ್, ಪಂದ್ಯ ಆರಂಭ: ಸಂಜೆ 4ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.