
ನವದೆಹಲಿ[ಮೇ.14]: ಸಾಮಾಜಿಕ ಮಾಧ್ಯಮಗಳು ಯಾರನ್ನು, ಎಷ್ಟುಬೇಗ ಬೇಕಿದ್ದರೂ ಸೆಲಬ್ರಿಟಿ ಮಾಡುತ್ತವೆ, ಅಷ್ಟೇ ಬೇಗ ಸಮಸ್ಯೆಯನ್ನೂ ತಂದೊಡ್ಡುತ್ತವೆ. ಇತ್ತೀಚೆಗಷ್ಟೆಐಪಿಎಲ್ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿದ್ದ ಯುವತಿ, ಮಾಡೆಲ್ ದೀಪಿಕಾ ಘೋಷ್‌ರನ್ನು ಟೀವಿ ಪರದೆ ಮೇಲೆ ಪದೇ ಪದೇ ತೋರಿಸಲಾಗಿತ್ತು.
RCB ಪಂದ್ಯದ ವೇಳೆ ಹೃದಯ ಕದ್ದ ಸ್ಟೇಟ್ ಕ್ರಶ್, ಯಾರೀಕೆ?
ಆಕೆ ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದರು. ಅವರ ಇನ್‌ಸ್ಟಾಗ್ರಾಂ ಖಾತೆ ಅಧಿಕೃತಗೊಂಡಿತ್ತು. ಹಲವು ವರ್ಷಗಳಿಂದ ಕ್ರೀಡಾಂಗಣಕ್ಕೆ ತೆರಳಿ ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದ ದೀಪಿಕಾ ಪಾಲಿಗೆ ಆರ್‌ಸಿಬಿ-ಸನ್‌ರೈಸರ್ಸ್ ನಡುವಿನ ಪಂದ್ಯ, ಮತ್ತೊಂದು ಪಂದ್ಯವಾಗಿತ್ತು ಅಷ್ಟೆ. ಆದರೆ ಟೀವಿಯಲ್ಲಿ ಬಂದಿದ್ದೇ ಬಂದಿದ್ದು, ಆಕೆಯ ಜೀವನ ಬದಲಾಗಿದೆ.
ಸಾಮಾಜಿಕ ತಾಣಗಳಿಂದ ಪಡೆದ ಜನಪ್ರಿಯತೆಯೇ ಆಕೆಗೀಗ ಮುಳುವಾಗಿದೆ. ಐಪಿಎಲ್‌ನಿಂದ ಸೆಲೆಬ್ರಿಟಿ ಪಟ್ಟಪಡೆದ ಬಳಿಕ ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ವಿವರವಾಗಿ ಬರೆದುಕೊಂಡಿದ್ದಾರೆ. ‘ನನ್ನ ಹೆಸರು ದೀಪಕಾ ಘೋಷ್. ನನ್ನ ಬಗ್ಗೆ ಹೇಳಲಾಗುತ್ತಿರುವ ವಿಚಾರಗಳ ಪೈಕಿ ಬಹುಶಃ ಇದೊಂದೇ 100ರಷ್ಟುಸತ್ಯ. ನನಗೆ ಯಾವ ಜನಪ್ರಿಯತೆಯೂ ಬೇಕಿರಲಿಲ್ಲ. ನಾನು ಸೆಲೆಬ್ರಿಟಿ ಅಲ್ಲ, ಸಾಮಾನ್ಯ ಅಭಿಮಾನಿಯಷ್ಟೆ. ಸಾಮಾಜಿಕ ತಾಣಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಪ್ರಚಾರವಾಗುತ್ತಿದೆ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದೇನೆ. ಪುರುಷರು ನನಗೆ ಕೀಳು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಮಹಿಳೆಯರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನಾನು ಅವರೊಬ್ಬಳು ಎನ್ನುವುದನ್ನು ಮರೆತಿದ್ದಾರೆ’ ಎಂದು ಬರೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.