
ಬೆಂಗಳೂರು[ಜೂ.16]: ಭಾರತ-ಆಫ್ಘಾನಿಸ್ತಾನ ಟೆಸ್ಟ್ ಎರಡೇ ದಿನಕ್ಕೆ ಮುಕ್ತಾಯಗೊಂಡಿದ್ದರಿಂದ ಉಳಿದ 3 ದಿನಗಳ ಟಿಕೆಟ್ ಖರೀದಿಸಿದವರಿಗೆ, ಟಿಕೆಟ್ ಮೊತ್ತವನ್ನು ವಾಪಸ್ ನೀಡಲು ಕೆಎಸ್‌ಸಿಎ ನಿರ್ಧರಿಸಿದೆ.
www.insider.in ಮತ್ತು www.ticketgenie.in ತಾಣಗಳ ಮೂಲಕ ಆನ್‌ಲೈನ್ ಟಿಕೆಟ್ ಖರೀದಿಸಿದ್ದವರು ಅದೇ ತಾಣಗಳಿಗೆ ಭೇಟಿ ನೀಡಿ ಹಣ ಹಿಂಪಡೆಯಬಹುದಾಗಿದೆ. ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸಿದ್ದವರಿಗೆ ಜೂ.20ರಂದು ಬೆಳಗ್ಗೆ 11ರಿಂದ ರಾತ್ರಿ 8 ರವರೆಗೆ ಚಿನ್ನಸ್ವಾಮಿಯ ಗೇಟ್ ನಂ.2ರ ಕೌಂಟರ್‌ನಲ್ಲಿ ಹಣ ಮರುಪಾವತಿಸಲಾಗುವುದು.
ಭಾರತ-ಆಫ್ಘಾನ್ ನಡುವಿನ ಐತಿಹಾಸಿಕ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 262 ರನ್’ಗಳ ಭರ್ಜರಿ ಜಯ ಸಾಧಿಸಿತ್ತು. ಭಾರತ ತಂಡ ಆಫ್ಘಾನ್ ಪಡೆಯನ್ನು ಕೇವಲ ಒಂದೇ ದಿನದಲ್ಲಿ ಎರಡು ಬಾರಿ ಆಲೌಟ್ ಮಾಡಿ ಸ್ಮರಣೀಯ ಜಯ ಸಾಧಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.