
ನವದೆಹಲಿ(ಜು.20): ಟೀಂ ಇಂಡಿಯಾ ನೂತನ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ವಾರ್ಷಿಕ 8 ಕೋಟಿ ರುಪಾಯಿ ವೇತನ ಪಡೆಯುತ್ತಿದ್ದು, ಈ ಮೊದಲಿನ ಕೋಚ್ ಅನಿಲ್ ಕುಂಬ್ಳೆಗಿಂತ ಶಾಸ್ತ್ರಿ ಹೆಚ್ಚಿಗೆ ಸಂಪಾದನೆ ಮಾಡಲಿದ್ದಾರೆ.
ಕಳೆದ 17 ವರ್ಷಗಳಲ್ಲಿ ಭಾರತ ತಂಡದ ಪ್ರಧಾನ ಕೋಚ್ ವೇತನ 10 ಪಟ್ಟು ಹೆಚ್ಚಾಗಿದೆ. 2000-2005ರವರೆಗೂ ಕೋಚ್ ಆಗಿದ್ದ ಜಾನ್ ರೈಟ್ ವೇತನ ವರ್ಷಕ್ಕೆ 80 ಲಕ್ಷ ರುಪಾಯಿ ಇತ್ತು ಎನ್ನಲಾಗಿದೆ. ಆ ಬಳಿಕ 2005-07ರವರೆಗೆ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ ವಾರ್ಷಿಕ 1 ಕೋಟಿ ರುಪಾಯಿ ಪಡೆಯುತ್ತಿದ್ದರು.
ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಕೋಚ್ ಎಂದೇ ಕರೆಸಿಕೊಳ್ಳುವ ಗ್ಯಾರಿ ಕರ್ಸ್ಟನ್ 3.8 ಕೋಟಿ ರುಪಾಯಿ ವಾರ್ಷಿಕ ವೇತನ ಪಡೆದರೆ, ಡಂಕನ್ ಪ್ಲೇಚರ್ 4.2 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದರು.
ಇನ್ನು 2016-17ರ ಒಂದು ವರ್ಷದ ಅವಧಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ಕನ್ನಡಿಗ ಅನಿಲ್ ಕುಂಬ್ಳೆ 6.5 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.