
ಬೆಂಗಳೂರು(ಜು.20): ಕರ್ನಾಟಕರಾಜ್ಯ ಕ್ರೀಡಾ ಇಲಾಖೆ ನಿರ್ಲಕ್ಷ್ಯಕ್ಕೆ ಕಬಡ್ಡಿ ಬಲಿಯಾಗಿದೆ. ಪ್ರೊ ಕಬಡ್ಡಿ 5ನೇ ಆವೃತ್ತಿಯ ಬೆಂಗಳೂರು ಚರಣದ ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರಗೊಂಡಿದ್ದು, ಈ ವರ್ಷ ಬೆಂಗಳೂರು ಬುಲ್ಸ್'ಗೆ ನಾಗ್ಪುರ ತವರಾಗಲಿದೆ.
'ಬೆಂಗಳೂರು ಚರಣ ಅತಂತ್ರ' ಎಂದು 'ಕನ್ನಡಪ್ರಭ' ಪತ್ರಿಕೆ ಜುಲೈ 15ರಂದೇ ವರದಿ ಪ್ರಕಟಿಸಿತ್ತು. ಬೆಂಗಳೂರಿನ ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರಗೊಂಡಿದ್ದು, ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿದೆ. ವೇಳಾಪಟ್ಟಿಯಂತೆ ಆಗಸ್ಟ್ 4ರಿಂದ 10ರವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಬೇಕಿತ್ತು. ಒಟ್ಟು 11 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಬೇಕಿತ್ತು.
ಕ್ರೀಡಾಂಗಣ ಬಳಕೆಗೆ ಅನುಮತಿ ನೀಡದಿದ್ದಕ್ಕೆ ಬೆಂಗಳೂರು ಬುಲ್ಸ್ ತಂಡ ಬೇಸರ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ತಂಡದ ಮಾಲೀಕರಾದ ಉದಯ್ ಸಿನ್ಹವಾಲಾ ' ಬೆಂಗಳೂರಿನಲ್ಲಿ ತಂಡ ಆಡುತ್ತಿಲ್ಲ ಎನ್ನುವುದು ಭಾರೀ ಬೇಸರ ಉಂಟು ಮಾಡಿದೆ. ತವರಿನಲ್ಲಿ ಆಡದಿದ್ದರೂ ಬುಲ್ಸ್ ಅಭಿಮಾನಿಗಳು ಎಂದಿನಂತೆ ತಂಡವನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.
ವರದಿ: ಸ್ಪಂದನ್ ಕಣಿಯಾರ್/ ಧನಂಜಯ್ ಎಸ್. ಹಕಾರಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.