ಲಂಕಾ ಸವಾಲಿಗೆ ಹರಿಣಗಳ ಪಡೆ ಸಜ್ಜು

Published : Dec 25, 2016, 04:52 PM ISTUpdated : Apr 11, 2018, 12:55 PM IST
ಲಂಕಾ ಸವಾಲಿಗೆ ಹರಿಣಗಳ ಪಡೆ ಸಜ್ಜು

ಸಾರಾಂಶ

ಪ್ರಮುಖ ಆಟಗಾರರಾದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇಯ್ನ್ ಹಾಗೂ ಮೊರ್ನೆ ಮಾರ್ಕೆಲ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದ್ದರೂ ಸರಣಿ ಗೆಲ್ಲುವ ಉತ್ಸಾಹದಲ್ಲಿ ದಕ್ಷಿಣ ಆಫ್ರಿಕಾ ಪಡೆಯಿದೆ.

ಕೇಪ್‌'ಟೌನ್(ಡಿ.25): ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂ ಪಡೆಯನ್ನು ಸದೆಬಡಿದಿದ್ದ ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ತಂಡ, ಡಿ. 26ರಿಂದ ಆರಂಭಗೊಳ್ಳುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಪ್ರಭಾವಿ ಪ್ರದರ್ಶನ ತೋರಿ ಸರಣಿ ಗೆಲ್ಲುವ ಉತ್ಸಾಹದಲ್ಲಿದೆ.

ಪ್ರಮುಖ ಆಟಗಾರರಾದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇಯ್ನ್ ಹಾಗೂ ಮೊರ್ನೆ ಮಾರ್ಕೆಲ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದ್ದರೂ ಸರಣಿ ಗೆಲ್ಲುವ ಉತ್ಸಾಹದಲ್ಲಿ ದಕ್ಷಿಣ ಆಫ್ರಿಕಾ ಪಡೆಯಿದೆ. ಕಳೆದ ತಿಂಗಳು ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದಿತ್ತು ಹರಿಣಗಳ ಪಡೆ. ಇದೇ ತಂಡದಲ್ಲಿ ಹೊಸತೊಂದು ಆತ್ಮವಿಶ್ವಾಸಕ್ಕೆ ಕಾರಣವಾಗಿದೆ.

ಗಾಯದ ಸಮಸ್ಯೆಗೆ ಸಿಲುಕಿರುವ ಎಬಿ ಡಿವಿಲಿಯರ್ಸ್, ಸತತವಾಗಿ ಟೆಸ್ಟ್ ಸರಣಿಗಳಿಂದ ಗೈರಾದ ಹಿನ್ನೆಲೆಯಲ್ಲಿ ಫಾಫ್ ಡು ಪ್ಲೆಸಿಸ್ ಅವರಿಗೆ ತಂಡದ ನಾಯಕತ್ವ ವಹಿಸಿದ್ದಾರೆ. ಅವರ ನಾಯಕತ್ವದಲ್ಲೇ ಆಸೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದಿದೆ. ಅದೇ ಮಾದರಿಯಲ್ಲಿ ಶ್ರೀಲಂಕಾವನ್ನೂ ಮಣಿಸುವ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾ ಇದೆ.

ಇತ್ತ, ಶ್ರೀಲಂಕಾಕ್ಕೂ ಇದು ಸವಾಲಿನ ಸರಣಿ. ದಕ್ಷಿಣ ಆಫ್ರಿಕಾದಲ್ಲಿ ಲಂಕಾದ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿಲ್ಲ. ಈವರೆಗೆ ಹರಿಣಗಳ ನೆಲದಲ್ಲಿ ಆಡಿರುವ 10 ಪಂದ್ಯಗಳಲ್ಲಿ 8ರಲ್ಲಿ ಸೋಲು ಕಂಡಿದೆ. ಅದಲ್ಲದೆ, ಧಮ್ಮಿಕಾ ಪ್ರಸಾದ್ ಸೇರಿದಂತೆ ಈ ಬಾರಿಯ ಸರಣಿಗಾಗಿ ಆಯ್ಕೆಯಾಗಬೇಕಿದ್ದ ಕೆಲವಾರು ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಆದರೂ, ಕಳೆದ ತಿಂಗಳು ನಡೆದಿದ್ದ ಜಿಂಬಾಬ್ವೆ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆದ್ದಿರುವುದು ತಂಡಕ್ಕೆ ಹೊಸ ವಿಶ್ವಾಸ ತುಂಬಿದೆ.

ಇದಲ್ಲದೆ, ಗಾಯಗೊಂಡು ಕೆಲಕಾಲ ತಂಡದಿಂದ ದೂರ ಉಳಿದಿದ್ದ ನಾಯಕ ಏಂಜಲೋ ಮ್ಯಾಥ್ಯೂಸ್ ಹಾಗೂ ಉಪನಾಯಕ ದಿನೇಶ್ ಚಾಂದಿಮಾಲ್ ತಂಡಕ್ಕೆ ಮರಳಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ರಂಗನಾ ಹೆರಾತ್ ಪ್ರಮುಖ ಅಸ್ತ್ರ. ವೇಗಿಗಳ ವಿಚಾರದಲ್ಲಿ ಲಂಕಾ ಹಿಂದೆ ಬಿದ್ದಿಲ್ಲ. ಈ ವಿಭಾಗದಲ್ಲಿ ಲಾಹಿರು ತಿರಿಮಾನ್ನೆ, ಸುರಂಗಾ ಲಕ್ಮಲ್, ನುವಾನ್ ಪ್ರದೀಪ್ ಅವರು ಪ್ರಮುಖರು.

ತಂಡಗಳು:

ದಕ್ಷಿಣ ಆಫ್ರಿಕಾ:

ಫಾಫ್ ಡು ಪ್ಲೆಸಿಸ್ (ನಾಯಕ), ಡೀನ್ ಎಲ್ಗಾರ್, ಸ್ಟೀಫನ್ ಕುಕ್, ಹಶೀಂ ಆಮ್ಲಾ, ಜೆಪಿ ಡುಮಿನಿ, ತೆಂಬಾ ಬವುಮಾ, ಖ್ವಿಂಟಾನ್ ಡಿ ಕಾಕ್, ವೆರ್ನಾನ್ ಫಿಲ್ಯಾಂಡರ್, ಕೈಲ್ ಅಬ್ಬೊಟ್, ಕೇಶವ್ ಮಹಾರಾಜ್, ಕಾಗಿಸೊ ಕಬಾಡಾ.

ಶ್ರೀಲಂಕಾ:

ಏಂಜೆಲೊ ಮ್ಯಾಥ್ಯೂಸ್ (ನಾಯಕ), ಕೌಶಲ್ ಸಿಲ್ವಾ, ದಿಮುತ್ ಕರುಣಾರತ್ನೆ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್, ದಿನೇಶ್ ಚಂಡಿಮಲ್, ಧನಂಜಯ ಡಿ ಸಿಲ್ವಾ, ರಂಗನಾ ಹೆರಾತ್, ದುಷ್ಮಂತಾ ಚಮೀರಾ, ಸುರಂಗಾ ಲಕ್ಮಲ್, ನುವಾನ್ ಪ್ರದೀಪ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದ್ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಅನುಭವಿಸೋ ಕಷ್ಟ ಒಂದೆರಡಲ್ಲ! ಭಾರೀ ಬೆಲೆ ತೆರಬೇಕು
ಆ ತಪ್ಪು ಮಾಡಿದರೆ RCB ಅಡಿಪಾಯವೇ ಅಲುಗಾಡಲಿದೆ; ಇದಂತೂ ಶತ ಸಿದ್ಧ..!