ಭಾರತೀಯ ಹಾಕಿ ತಂಡದ ಪ್ರಮುಖ ಆಟಾಗರ, ಕೊಡಗಿನ ನಿತಿನ್ ತಿಮ್ಮಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿತಿನ್ ಮದುವೆ ಸಮಾರಂಭ ಹೇಗಿತ್ತು. ಇಲ್ಲಿದೆ ವಿವರ.
ವಿರಾಜಪೇಟೆ(ಡಿ.25): ಅಂತಾರಾಷ್ಟ್ಪೀಯ ಹಾಕಿ ಪಟು, ಕೊಡಗಿನ ನಿತಿನ್ ತಿಮ್ಮಯ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಳುಗೋಡುವಿನಲ್ಲಿ ಕೊಡವ ಸಂಪ್ರದಾಯಂತೆ ನಡೆದ ವಿವಾಹ ಮಹೋತ್ಸವದಲ್ಲಿ ತಿಮ್ಮಯ್ಯ, ಕೊಡಗಿನ ಕುವರಿ, ಅಡ್ವೋಕೇಟ್ ವೀಶ್ಮಾ ದೇಚಮ್ಮ ಅವರ ಕೈಹಿಡಿದಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಗುಣಗಾನ ಮಾಡಿದ ಆಸಿಸ್ ಮಾರಕ ವೇಗಿ..!
ವಿವಾಹ ಕಾರ್ಯಕ್ರಮದಲ್ಲಿ ನಿತಿನ್ -ವೀಶ್ಮಾ ಅವರ ಕುಟುಂಬಸ್ಥರು, ಆಪ್ತರು, ಗೆಳಯರು ಹಾಗೂ ಅಂತಾರಾಷ್ಟ್ರೀಯ ಹಾಕಿ ಪಟುಗಳು ಪಾಲ್ಗೊಂಡಿದ್ದರು. ಡಿಸೆಂಬರ್ 8 ರಂದು 30ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ನಿತಿನ್ ತಿಮ್ಮಯ್ಯ ಇದೀಗ ಹೊಸ ಬದುಕಿಗೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ: ಮಾರ್ಚ್’ನಲ್ಲಿ ಪಾಕ್ ವಿರುದ್ಧ ಸ್ಮಿತ್, ವಾರ್ನರ್ ಕಣಕ್ಕೆ?
ಜೂನ್ 18 ರಂದು ನಿತಿನ್ ತಿಮ್ಮಯ್ಯ ಹಾಗೂ ವೀಶ್ಮಾ ದೇಚಮ್ಮ ನಿಶ್ಚಿತಾರ್ಥ ನಡೆದಿತ್ತು. ವೀಶ್ಮಾ ಬೆಂಗಳೂರಿನಲ್ಲಿ ಅಡ್ವೋಕೇಟ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿತಿನ್ ಜನವರಿಯಲ್ಲಿ ಹಾಕಿ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಮೆಲ್ಬರ್ನ್ ಟೆಸ್ಟ್’ಗೆ ಟೀಂ ಇಂಡಿಯಾ ಪ್ರಕಟ: 2 ಬದಲಾವಣೆ