ಒಂದೂವರೆ ಕೋಟಿಯ ಜಾಬ್‌ ಆಫರ್‌ ತಿರಸ್ಕರಿಸಿದ ನೀರಜ್‌ ಚೋಪ್ರಾ ಪತ್ನಿ ಹಿಮಾನಿ ಮೋರ್‌!

Published : Aug 16, 2025, 05:13 PM IST
himani mor education career

ಸಾರಾಂಶ

ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಮೋರ್, ವೃತ್ತಿಪರ ಟೆನಿಸ್‌ನಿಂದ ಕ್ರೀಡಾ ವ್ಯವಹಾರ ಉದ್ಯಮಕ್ಕೆ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಸ್ವಂತ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಅಮೆರಿಕದ ಲಾಭದಾಯಕ ಉದ್ಯೋಗದ ಪ್ರಸ್ತಾಪವನ್ನು ನಿರಾಕರಿಸಿ ಸುದ್ದಿಯಾಗಿದ್ದಾರೆ. 

ನವದೆಹಲಿ (ಆ.16): ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಮೋರ್, ಟೆನಿಸ್‌ನಿಂದ ದೂರ ಸರಿದು ಕ್ರೀಡಾ ವ್ಯವಹಾರದಲ್ಲಿ ವೃತ್ತಿಜೀವನ ಮುಂದುವರಿಸುವ ಮೂಲಕ ತಮ್ಮ ವೃತ್ತಿಪರ ಪ್ರಯಾಣದಲ್ಲಿ ಹೊಸ ಹಾದಿ ಹಿಡಿದಿದ್ದಾರೆ. ಮಾಜಿ ವೃತ್ತಿಪರ ಟೆನಿಸ್ ಆಟಗಾರ್ತಿ ಹಿಮಾನಿ, ಸ್ವಂತ ಉದ್ಯಮವನ್ನು ನಿರ್ಮಿಸುವತ್ತ ಗಮನಹರಿಸುವ ದೃಷ್ಟಿಯಲ್ಲಿ ತಮ್ಮ ಕ್ರೀಡಾ ಜೀವನದ ಅಧ್ಯಾಯವನ್ನು ಮುಗಿಸಲು ತೀರ್ಮಾನ ಮಾಡಿದ್ದಾರೆ.

ದೈನಿಕ್ ಭಾಸ್ಕರ್ ಜೊತೆಗಿನ ಮಾತುಕತೆಯ ವೇಳೆ, ಆಕೆಯ ತಂದೆ ಚಂದ್ ಮೋರ್, ವಿದೇಶದಲ್ಲಿ ಬಂದ ಒಳ್ಳೆಯ ಜಾಬ್‌ ಆಫರ್‌ಅನ್ನೂ ಕೂಡ ತಮ್ಮ ಉದ್ಯಮದ ವಿಚಾರವಾಗಿ ಅವರು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಮರಿಕದಲ್ಲಿ ಕ್ರೀಡೆಗೆ ಸಂಬಂಧಪಟ್ಟ ಸಂಸ್ಥೆಯಿಂದ ಆಕೆಗೆ ಒಂದೂವರೆ ಕೋಟಿಯ ಜಾಬ್‌ ಆಫರ್‌ ಬಂದಿತ್ತು. ಆದರೆ, ಇದನ್ನು ಆಕೆ ನಿರಾಕರಿಸಿದ್ದು, ತಮ್ಮ ಸ್ವಂತ ಉದ್ಯಮದತ್ತ ಗಮನಹರಿಸಲು ತೀರ್ಮಾನ ಮಾಡಿದ್ದಾರೆ' ಎಂದು ಹೇಳಿದ್ದಾರೆ.

ದೆಹಲಿ ವಿವಿಯ ಮಾಜಿ ವಿದ್ಯಾರ್ಥಿಯಾಗಿರುವ ಹಿಮಾನಿ, ರಾಜಕೀಯ ವಿಜ್ಞಾನದಲ್ಲಿ ಪದಕವಿ ಪಡೆದಿದ್ದಾರೆ. ಅದರೊಂದಿಗೆ ಅಮೆರಿಕದ ಫ್ರಾಂಕ್ಲಿನ್‌ ಪೀಯರ್ಸ್‌ ವಿವಿಯಿಂದ ಕ್ರೀಡಾ ಮತ್ತು ಫಿಟ್‌ನೆಸ್‌ ಮ್ಯಾನೇಜ್‌ಮೆಂಟ್‌ನಲ್ಲೂ ಪದವಿ ಪಡೆದುಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನೀರಜ್‌ ಚೋಪ್ರಾ ಹಾಗೂ ಹಿಮಾನಿ ಮೋರ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ತಮ್ಮ ವಿವಾಹವನ್ನು ಈ ಜೋಡಿ ಘೋಷಿಸಿಕೊಂಡ ಬೆನ್ನಲ್ಲಿಯೇ, ದಂಪತಿಗಳು ಅಮೆರಿಕಕ್ಕೆ ಹಾರಿದ್ದರು. ನೀರಜ್‌ ಚೋಪ್ರಾ ನಿರಂತರ ವೇಳಾಪಟ್ಟಿ ಹಾಗೂ ಅಭ್ಯಾಸದ ಕಾರಣದಿಂದಾಗಿ ಅವರ ಕುಟುಂಬಕ್ಕೆ ಸಣ್ಣ ಆರತಕ್ಷತೆ ಕಾರ್ಯಕ್ರಮ ಇರಿಸಿಕೊಳ್ಳಲು ಅವಕಾಶ ಇಲ್ಲದಂತಾಗಿದೆ.

ಈ ನಡುವೆ, ನೀರಜ್ ಪೋಲೆಂಡ್‌ನಲ್ಲಿ ನಡೆಯಲಿರುವ ಸಿಲೇಸಿಯಾ ಡೈಮಂಡ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ, ಈ ಮುಖಾಮುಖಿಯನ್ನು ಅವರು ಮತ್ತು ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ ನಡುವಿನ ಪ್ರಮುಖ ಮುಖಾಮುಖಿ ಎಂದು ಬಿಂಬಿಸಲಾಗಿತ್ತು. ಅಂತಿಮ ಪ್ರವೇಶ ಪಟ್ಟಿಯಲ್ಲಿ ಇಬ್ಬರೂ ಹೆಸರುಗಳು ಇಲ್ಲದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಬದಲಾಗಿ, ನೀರಜ್ ತನ್ನ ಶಕ್ತಿಯನ್ನು ಸಂರಕ್ಷಿಸಿಕೊಳ್ಳುತ್ತಿದ್ದಾರೆ ಮತ್ತು ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ ತನ್ನ ಸಿದ್ಧತೆಗಳನ್ನು ಮಾಡುತ್ತಿದ್ದಾರೆ ಎಂದು ನಂಬಲಾಗಿದೆ. ಪುರುಷರ ಜಾವೆಲಿನ್ ಥ್ರೋ ಸೆಪ್ಟೆಂಬರ್ 17 ಮತ್ತು 18 ರಂದು ನಡೆಯಲಿದ್ದು, ನೀರಜ್ ತಮ್ಮ ಗಮನಾರ್ಹ ವೃತ್ತಿಜೀವನಕ್ಕೆ ಮತ್ತೊಂದು ಅಧ್ಯಾಯವನ್ನು ಸೇರಿಸುವ ಗುರಿಯನ್ನು ಹೊಂದಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ