19 ವರ್ಷದ ಹಿಮಾ ದಾಸ್ ಮತ್ತೊಂದು ದಾಖಲೆ ಬರೆದಿದ್ದಾರೆ. 200ಮೀ ಓಟದಲ್ಲಿ ಹಿಮಾ ದಾಸ್ ಚಿನ್ನದ ಪದಕ ಬಾಚಿಕೊಂಡಿದ್ದಾರೆ.
ಪೊಲೆಂಡ್(ಜು.08): ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಮತ್ತೆ ದಾಖಲೆ ಬರೆದಿದ್ದಾರೆ. 19 ವರ್ಷದ ಹಿಮಾ ದಾಸ್ ಒಂದು ವಾರದಲ್ಲಿ 2ನೇ ಚಿನ್ನದ ಪದಕ ಗೆದ್ದಿದ್ದಾರೆ. ಪೊಲೆಂಡ್‌ನಲ್ಲಿ ನಡೆಯುತ್ತಿರು ಕುಂತೊ ಅಥ್ಲೆಟಿತ್ಸ್ ಕೂಟದ 200ಮೀ ವಿಭಾಗದಲ್ಲಿ ಹಿಮಾ ದಾಸ್ ಚಿನ್ನದ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ಕುಂಟೋ ಅಥ್ಲೆಟಿಕ್ಸ್: ಚಿನ್ನ ಗೆದ್ದ ಭಾರತದ ಮೊಹಮ್ಮದ್ ಅನಾಸ್!
ಕಳೆದ ಕೆಲ ತಿಂಗಳುಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹಿಮಾ ದಾಸ್, 200 ಮೀ ಓಟದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. 23.97 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಹಿಮಾ ದಾಸ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 200ಮೀ ವಿಭಾಗದಲ್ಲಿ ಹಿಮಾದಾಸ್‌ಗೆ ಇದು 2ನೇ ಚಿನ್ನದ ಪದಕ.
ಪುರುಷರ 200ಮೀ ಓಟದಲ್ಲಿ ಭಾರತದ ದಾಖಲೆ ವೀರ ಮೊಹಮ್ಮದ್ ಅನಾಸ್ ಚಿನ್ನದ ಪದಕ ಗೆದ್ದಿದ್ದಾರೆ. ಪೊಲೆಂಡ್ ಕುಂತೊ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದವರಿದಿದೆ.