ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಹೊಸ ದಾಖಲೆ ಬರೆದಿದ್ದಾರೆ. ದಿಗ್ಗಜ ಫುಟ್ಬಾಲ್ ಪಟು ಲಿಯೊನಲ್ ಮೆಸ್ಸಿ ಸಾಧನೆ ಹಿಂದಿಕ್ಕಿ ಇದೀಗ 2ನೇ ಸ್ಥಾನಕ್ಕೇರಿದ್ದಾರೆ.
ಅಹಮ್ಮದಾಬಾದ್(ಜು.08): ತಜಕಿಸ್ತಾನ ವಿರುದ್ಧದ ಇಂಟರ್‌ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಭಾರತ ಮುಗ್ಗರಿಸಿದೆ. ಆದರೆ ನಾಯಕ ಸುನಿಲ್ ಚೆಟ್ರಿ ದಾಖಲೆ ಬರೆದಿದ್ದಾರೆ. 2-4 ಅಂತರದಿಂದ ಸೋಲು ಕಂಡ ಭಾರತಕ್ಕೆ ಸುನಿಲ್ ಚೆಟ್ರಿ ಐತಿಹಾಸಿಕ ಸಾಧನೆ ಸಮಾಧಾನ ತಂದಿದೆ. ತಜಿಕಸ್ತಾನ ವಿರುದ್ಧ 2 ಗೋಲು ಸಿಡಿಸಿದ ಚೆಟ್ರಿ, ಅರ್ಜೆಂಟೀನಾದ ದಿಗ್ಗಜ ಲಿಯೊನಲ್ ಮೆಸ್ಸಿ ದಾಖಲೆ ಪುಡಿ ಮಾಡಿದ್ದಾರೆ.
Everything Sunil Chhetri touches turns to GOAL 🤩⚽ pic.twitter.com/CQ57HL1CRw
— Indian Super League (@IndSuperLeague)undefined
ಇದನ್ನೂ ಓದಿ: ಟೀಂ ಇಂಡಿಯಾಗೆ ಶುಭಹಾರೈಸಿದ ಫುಟ್ಬಾಲ್ ತಂಡ!
ತಜಕಿಸ್ತಾನ ವಿರುದ್ಧದ ಗೋಲಿನ ಮೂಲಕ ಸುನಿಲ್ ಚೆಟ್ರಿ ಒಟ್ಟು 70 ಗೋಲು ಸಿಡಿಸಿದರು. ಈ ಮೂಲಕ ಮೆಸ್ಸಿ ಹಿಂದಿಕ್ಕಿ ಗರಿಷ್ಠ ಗೋಲು ಸಿಡಿಸಿದ ಸಕ್ರೀಯ ಫುಟ್ಬಾಲಿಗರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಪೊರ್ಚುಗಲ್‌ನ ಕ್ರಿಸ್ಟಿಯನೊ ರೋನಾಲ್ಡೋ 88 ಗೋಲಿನ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
With 70 goals in International football Sunil Chhetri is now 13th in all time highest goal scorer in international football. He is 2nd bypassing Messi again among the active footballers. One goal more and he will enter top 10 highest International goalscorer ever. pic.twitter.com/2adYd2xMxw
— Indian Football Team-For World Cup (@IFTWC)We went crazy as Chhetri overtook Messi and sent India ahead😍 pic.twitter.com/qhRHgX3v9B
— indifoot (@indifoot)