
ಕೋಲ್ಕತ್ತಾ(ಜು.15): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಿನ ಜಗಳ ಮುಗಿಯೋ ಲಕ್ಷಣ ಕಾಣುತ್ತಿಲ್ಲ. ಶಮಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಹಸಿನ್ ಜಹಾನ್ ಇದೀಗ ಬಿಸಿಸಿಐ ವಿರುದ್ಧ ಗರಂ ಆಗಿದ್ದಾರೆ.
ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪವಿದ್ದರೂ, ಬಿಸಿಸಿಐ ಶಮಿಗೆ ಕ್ರಿಕೆಟ್ ಆಡಲು ಅನುಮತಿ ನೀಡಿದೆ. ಇಷ್ಟೇ ಅಲ್ಲ ಶಮಿ ಮೇಲಿನ ಆರೋಪಗಳಿಂದ ಖುಲಾಸೆಗೊಳಿಸಿರೋದಕ್ಕೆ ಪತ್ನಿ ಹಸಿನ್ ತಿರುಗೇಟು ನೀಡಿದ್ದಾರೆ.
ಇದನ್ನು ಓದಿ:ಕ್ರಿಕೆಟಿಗ ಶಮಿ ಜೊತೆಗಿನ ಕಿತ್ತಾಟದ ಬಳಿಕ ಪತ್ನಿ ಹಸಿನ್ ಈಗ ಏನು ಮಾಡುತ್ತಿದ್ದಾರೆ ?
ಶಮಿ ಬೇರೆ ಯುವತಿಯೊಂದಿಗೆ ರಹಸ್ಯ ಮದುವೆಯಾಗಿರೋದಾಗಿ ಪತ್ನಿ ಹಸೀನ್ ಆರೋಪಿಸಿದ್ದರು. ಈ ಘಟನೆ ಬಳಿಕ ಶಮಿ ವಿಚ್ಚೇಧನ ಬಯಸಿದ್ದರು. ಇಷ್ಟಾದ್ದರೂ ಬಿಸಿಸಿಐ ಶಮಿ ಮೇಲಿನ ಆರೋಪಗಳನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹಸಿನಾ ಜಹಾನ್, ಮುಂಬೈ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನು ಓದಿ: ಬಾಲಿವುಡ್‌ಗೆ ಪದಾರ್ಪಣೆ ಮಾಡ್ತಾರ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.