Hardik Pandya - Natasa Stankovic: ಇದೀಗ ನತಾಶಾ ಅವರೇ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕುವ ಕೆಲಸವನ್ನು ಮಾಡಿದ್ದಾರೆ. ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಲು ನತಾಶಾ ಮಾಡಿರುವ ಕೆಲಸ ಏನು ಗೊತ್ತಾ? ಆ ಕುರಿತ ವರದಿಯೊಂದು ಇಲ್ಲಿದೆ. ಇತ್ತ ನತಾಶಾ ಮಾಡಿದ ಈ ಕೆಲಸದಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು: ಕಳೆದ ಎರಡ್ಮೂರು ವಾರಗಳಿಂದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ (Hardik Pandya - Natasa stankovi) ಡಿವೋರ್ಸ್ ವದಂತಿ ಹೆಚ್ಚು ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ಮುಂದಿನ ಪಾಂಡ್ಯ ಪದ ತೆಗೆಯುವ ಮೂಲಕ ನತಾಶಾ ಡಿವೋರ್ಸ್ ವದಂತಿಗಳಿಗೆ ನಾಂದಿ ಹಾಡಿದ್ದರು. ಇದೀಗ ನತಾಶಾ ಅವರೇ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕುವ ಕೆಲಸವನ್ನು ಮಾಡಿದ್ದಾರೆ. ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಲು ನತಾಶಾ ಮಾಡಿರುವ ಕೆಲಸ ಏನು ಗೊತ್ತಾ? ಆ ಕುರಿತ ವರದಿಯೊಂದು ಇಲ್ಲಿದೆ. ಇತ್ತ ನತಾಶಾ ಮಾಡಿದ ಈ ಕೆಲಸದಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಹಾರ್ದಿಕ್ ಮಡದಿ ಮಾಡಿದ್ದೇನು?
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಡಿವೋರ್ಸ್ ಅಥವಾ ಬ್ರೇಕಪ್ ಸುಳಿವನ್ನು ಸೋಶಿಯಲ್ ಮೀಡಿಯಾದಲ್ಲಿ ನೀಡುತ್ತಾರೆ. ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೆಸರು ಬದಲಾವಣೆ, ಗಂಡ ಅಥವಾ ಬಾಯ್‌ಫ್ರೆಂಡ್ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡುವ ಮೂಲಕ ಬೇರೆ ಆಗುತ್ತಿರುವ ಸುಳಿವು ನೀಡುತ್ತಾರೆ. ಅದೇ ರೀತಿ ನತಾಶಾ ಸಹ ಪಾಂಡ್ಯ ಹೆಸರಿಗೆ ಕೊಕ್ ನೀಡಿದ್ದರು. ಇತ್ತ ಮದುವೆ ಫೋಟೋಗಳನ್ನು ಹೈಡ್ ಮಾಡಿದ್ದರಂತೆ. ಇದೀಗ ಮದುವೆ ಫೋಟೋಗಳನ್ನು ರೀ ಸ್ಟೋರ್ ಮಾಡುವ ಮೂಲಕ ನತಾಶಾ ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್ ಹಾಕಿದ್ದಾರೆ ಎಂದು ವರದಿಯಾಗಿದೆ.
ಸಂಕಷ್ಟಕ್ಕೆ ಸಿಲುಕುತ್ತಾರಾ ಹಾರ್ದಿಕ್ ? ಸರ್ಬಿಯಾ ವಿಚ್ಛೇದನ ನಿಯಮ ಏನು?
ಇನ್ನು ಡಿವೋರ್ಸ್ ಕುರಿತು ಮಾಧ್ಯಮಗಳಲ್ಲಿಯೂ ವರದಿ ಬಿತ್ತರವಾಗುತ್ತಿದ್ರೂ ಹಾರ್ದಿಕ್ ಪಾಂಡ್ಯಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇತ್ತ ನತಾಶಾ ಕ್ಯಾಮೆರಾ ಕಣ್ಣುಗಳಿಗೂ ಕಂಡರೂ ಈ ವಿಷಯದ ಕುರಿತು ಮಾತನಾಡಿಲ್ಲ. ಇತ್ತ ಹಾರ್ದಿಕ್ ಮತ್ತು ನತಾಶಾ ಮಗ ಆಗಸ್ತ್ಯ ಚಿಕ್ಕಪ್ಪ ಕೃನಾಲ್ ಜೊತೆಯಲ್ಲಿರುವ ವಿಡಿಯೋವೊಂದು ವೈರಲ್ ಆಗಿತ್ತು. ಕೃನಾಲ್ ಪಾಂಡ್ಯ ಪತ್ನಿ ಹಂಚಿಕೊಂಡ ಈ ವಿಡಿಯೋಗೆ ನತಾಶಾ ಸಹ ಲೈಕ್ ನೀಡಿದ್ದರು.
ಯಾರು ಈ ನತಶಾ?
ನತಾಶಾ ಸ್ಟಾಂಕೋವಿಕ್ ಸರ್ಬಿಯಾ (Serbia) ಮೂಲದವರು. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನೈಟ್‌ಕ್ಲಬ್‌ವೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮವಾಗಿ ಬದಲಾಗಿತ್ತು. 2019ರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನಾನು ಬೆಸ್ಟ್ ಫ್ರೆಂಡ್ ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಳ್ಳುವ ಮೂಲಕ ಪ್ರೀತಿಯ ಸುಳಿವನ್ನು ಅಭಿಮಾನಿಗಳಿಗೆ ನೀಡಿದ್ದರು. ಇದಾಗಿ ಒಂದು ವರ್ಷದ ಕಳೆದ ನಂತರ ಹೊಸ ವರ್ಷದ ಮೊದಲ ದಿನ ಅಂದ್ರೆ 2020 ಜನವರಿ 1ರಂದು ನ್ಯೂ ಇಯರ್ ಪಾರ್ಟಿಯಲ್ಲಿ ಗೆಳತಿಯ ಮುಂದೆ ಮೊಳಕಾಲೂರಿ ಪ್ರಪೋಸ್ ಮಾಡಿದ್ದರು.
ಪತ್ನಿ ಹೇಳಿದ ಹಾಗೆ, 30 ಕೋಟಿಯ ಮನೆ ಸೇರಿ 90 ಕೋಟಿ ಆಸ್ತಿ ಹೊಂದಿರುವ ಹಾರ್ದಿಕ್ ಪಾಂಡ್ಯ ಬೀದಿಗೆ ಬೀಳ್ತಾರಾ?
ಅದೇ ವರ್ಷ ಮೇನಲ್ಲಿ ಮುದ್ದು ಮಗನನ್ನು ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಬರಮಾಡಿಕೊಂಡಿದ್ದರು. 2023ರ ಫೆಬ್ರವರಿ 14ರಂದು ಮಗನ ಸಮ್ಮುಖದಲ್ಲಿಯೇ ಹಿಂದೂ ಮತ್ತು ಕ್ರಿಶ್ವಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆಯಾದ ವರ್ಷದ ನಂತರವೇ ಇಬ್ಬರ ಡಿವೋರ್ಸ್ ವಿಷಯ ಮುನ್ನೆಲೆಗೆ ಬಂದಿದೆ.