ಕ್ರಿಕೆಟ್ ದೇವರೆದುರು ಆಂಜನೇಯನಾದ ಸೆಹ್ವಾಗ್..!

Published : Jun 11, 2018, 07:55 PM ISTUpdated : Jun 11, 2018, 07:57 PM IST
ಕ್ರಿಕೆಟ್ ದೇವರೆದುರು ಆಂಜನೇಯನಾದ ಸೆಹ್ವಾಗ್..!

ಸಾರಾಂಶ

ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ವಿಶ್ವದ ಸ್ಫೋಟಕ ಆರಂಭಿಕ ಜೋಡಿ ಎಲ್ಲವರಿಗೂ ಗೊತ್ತೇ ಇದೆ. ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಉತ್ತಮ ಸ್ನೇಹಿತರಾಗಿರುವ ಈ ಜೋಡಿ ಕ್ರಿಕೆಟ್ ನಿವೃತ್ತಿಯ ಬಳಿಕವೂ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ.

ಬೆಂಗಳೂರು[ಜೂ.11]: ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ವಿಶ್ವದ ಸ್ಫೋಟಕ ಆರಂಭಿಕ ಜೋಡಿ ಎಲ್ಲವರಿಗೂ ಗೊತ್ತೇ ಇದೆ. ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಉತ್ತಮ ಸ್ನೇಹಿತರಾಗಿರುವ ಈ ಜೋಡಿ ಕ್ರಿಕೆಟ್ ನಿವೃತ್ತಿಯ ಬಳಿಕವೂ ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ.

ಸದಾ ಒಂದಿಲ್ಲೊಂದು ವಿಚಾರದಲ್ಲಿ ಟ್ವಿಟರ್’ನಲ್ಲಿ ಸದ್ದು ಮಾಡುವ ವಿರೇಂದ್ರ ಸೆಹ್ವಾಗ್ ಈ ಬಾರಿ ರಾಮ-ಹನುಮಂತನ ಭಂಗಿಯ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ. ಸಚಿನ್ ನಿಂತು ನಗುತ್ತಿದ್ದರೆ, ಸೆಹ್ವಾಗ್ ಮಂಡಿಯೂರಿ ಗದೆ ರೀತಿಯ ವಸ್ತು ಹಿಡಿದು ಆಂಜನೇಯನಂತೆ ಫೋಸ್ ನೀಡಿದ್ದಾರೆ. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗಷ್ಟೇ ನಡದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿನ್-ಸೆಹ್ವಾಗ್ ಜೋಡಿ ಸಾಕಷ್ಟು ರೋಚಕ ಮಾಹಿತಿಯನ್ನು ಹಂಚಿಕೊಂಡಿತ್ತು. ಈ ವೇಳೆ ಸಚಿನ್ ಸೆಹ್ವಾಗ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಹಾರ್ಟ್‌ಬೀಟ್ 175ಕ್ಕೆ ಹೋಗಿತ್ತು!' ಇಂಗ್ಲೆಂಡ್ ಎದುರಿನ ಹೈವೋಲ್ಟೇಜ್ ಪಂದ್ಯದ ಆ ಕ್ಷಣ ನೆನಪಿಸಿಕೊಂಡ ಸೂರ್ಯಕುಮಾರ್ ಯಾದವ್!
ಮ್ಯಾನ್ ಆಫ್‌ ದಿ ಮ್ಯಾಚ್ ನನಗಲ್ಲ, ಈ ಕ್ರಿಕೆಟಿಗನಿಗೆ ಸಿಗಬೇಕಿತ್ತು! ಮತ್ತೆ ಫ್ಯಾನ್ಸ್ ಹೃದಯ ಗೆದ್ದ ಸಂಜು ಸ್ಯಾಮ್ಸನ್!