ಟೀಮ್ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಮತ್ತೊಂದು ಶಾಕ್

Published : Jun 11, 2018, 06:41 PM IST
ಟೀಮ್ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಮತ್ತೊಂದು ಶಾಕ್

ಸಾರಾಂಶ

ಪತ್ನಿ ಜೊತೆಗಿನ ಕಿತ್ತಾಟದಿಂದ ಮಾನಸಿಕವಾಗಿ ನೊಂದಿರುವ ಟೀಮ್ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ, ಬಿಸಿಸಿಐ ಆಯ್ಕೆ ಸಮಿತಿ ಶಾಕ್ ನೀಡಿದೆ. ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಶಮಿಗೆ ಇದೀಗ ಬಾರಿ ಹಿನ್ನಡೆಯಾಗಿದೆ.  

ಬೆಂಗಳೂರು(ಜೂನ್.11): ವೈಯುಕ್ತಿ ಕಾರಣಗಳಿಂದ ಮಾನಸಿಕವಾಗಿ ನೊಂದಿರುವ ಟೀಮ್ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಮತ್ತೊಂದು ಆಘಾತ ಎದುರಾಗಿದೆ. ಜೂನ್.14 ರಿಂದ ಆರಂಭಗೊಳ್ಳಲಿರುವ ಅಫ್ಘಾನಿಸ್ತಾನ ವಿರುದ್ಧಧ ಏಕೈಕ ಟೆಸ್ಟ್ ಪಂದ್ಯದಿಂದ ಮೊಹಮ್ಮದ್ ಶಮಿಯನ್ನ ಕೈಬಿಡಲಾಗಿದೆ.

ತಂಡಕ್ಕೆ ಆಯ್ಕೆಯಾಗೋ ಕ್ರಿಕೆಟಿಗರು ಯೋ-ಯೋ ಫಿಟ್ನೆಸ್ ಟೆಸ್ಟ್ ಪಾಸ್ ಆಗಲೇಬೇಕಿದೆ. ಆದರೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಯೋ-ಯೋ ಫಿಟ್ನೆಸ್ ಟೆಸ್ಟ್‌ನಲ್ಲಿ ಶಮಿ ಪಾಸ್ ಆಗಿಲ್ಲ.  ಹೀಗಾಗಿ ಅನುಭವಿ ವೇಗಿ ಶಮಿಯನ್ನ ಟೀಮ್ಇಂಡಿಯಾ ಆಯ್ಕೆ ಸಮಿತಿ ಕೈಬಿಟ್ಟಿದೆ. 

ಮೊಹಮ್ಮದ್ ಶಮಿ ಸ್ಥಾನಕ್ಕೆ ದೆಹಲಿ ವೇಗಿ ನವದೀಪ್ ಸೈನಿ ಆಯ್ಕೆಯಾಗಿದ್ದಾರೆ. 2017-18ರ ರಣಜಿ ಟ್ರೋಫಿಯಲ್ಲಿ ನವದೀಪ್ ಸೈನಿ 8 ಪಂದ್ಯದಲ್ಲಿ 34 ವಿಕೆಟ್ ಕಬಳಿಸಿ ಮಿಂಚಿದ್ದರು. ಸೈನಿ ಜೊತೆಗೆ ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ವಿದರ್ಭ ವೇಗಿ ರಜನೀಶ್ ಗುರ್ಬಾನಿ ಟೀಮ್ಇಂಡಿಯಾ ಟ್ರೈನಿಂಗ್ ಸೆಶನ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಸೂಚಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಎಲ್ಲವೂ ಸರಿ ಇಲ್ವಾ? ₹10 ಕೋಟಿ ಆಟಗಾರನ ದಿಢೀರ್ ನಿವೃತ್ತಿಗೆ ಇದೇ ಕಾರಣ!
ರನ್ ಔಟ್ ವಿವಾದ, 21 ವರ್ಷದ ಅಂಪೈರ್ ಚಾಕುವಿನಿಂದ ಇರಿದು ಬರ್ಬರ ಹತ್ಯೆ!