ಸ್ಕಾಟ್ಲೆಂಡ್‌ನ ಗ್ಲಾಸ್‌ಗೋನಲ್ಲಿ 2026ರ ಕಾಮನ್ವೆಲ್ತ್‌ ಗೇಮ್ಸ್‌ ಆಯೋಜನೆ?

By Kannadaprabha News  |  First Published Sep 17, 2024, 1:51 PM IST

2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಆತಿಥ್ಯವನ್ನು ವಹಿಸಲು ಸ್ಕಾಟ್ಲೆಂಡ್ ಮುಂದಾಗಿದೆ. ಸ್‌ಗೋನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯಲಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಆಗಲಿದೆ ಎಂದು ವರದಿಯಾಗಿದೆ


ಲಂಡನ್‌: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿದ ಬಳಿಕ, ಇದೀಗ ಆತಿಥ್ಯ ವಹಿಸಲು ಸ್ಕಾಟ್ಲೆಂಡ್‌ ಮುಂದೆ ಬಂದಿದೆ.

ಆ ದೇಶದ ರಾಜಧಾನಿ ಗ್ಲಾಸ್‌ಗೋನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯಲಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ತಿಳಿದುಬಂದಿದೆ. 2014ರಲ್ಲಿ ಗ್ಲಾಸ್‌ಗೋ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆತಿಥ್ಯ ವಹಿಸಿತ್ತು. ಆಗ ಬಳಕೆಯಾಗಿದ್ದ ಕ್ರೀಡಾ ಸಂಕೀರ್ಣಗಳನ್ನೇ 2026ರಲ್ಲೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Tap to resize

Latest Videos

undefined

ಆತಿಥ್ಯದಿಂದ ಹಿಂದೆ ಸರಿದರೂ, ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌ (ಸಿಜಿಎಫ್‌)ಗೆ ವಿಕ್ಟೋರಿಯಾ ಸರ್ಕಾರ 256 ಅಮೆರಿಕನ್‌ ಡಾಲರ್‌ ಪರಿಹಾರ ನೀಡಿದೆ. 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕೇವಲ 10ರಿಂದ 13 ಕ್ರೀಡೆಗಳಷ್ಟೇ ಇರಲಿವೆ ಎಂದು ತಿಳಿದುಬಂದಿದೆ.

ಹೊಸ ಕುಸ್ತಿ ಲೀಗ್‌ ಘೋಷಿಸಿದ ಸಾಕ್ಷಿ ಮಲಿಕ್!

ನವದೆಹಲಿ: ಒಲಿಂಪಿಕ್ಸ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಹೊಸ ಕುಸ್ತಿ ಲೀಗ್‌ವೊಂದನ್ನು ಆರಂಭಿಸುವುದಾಗಿ ಸೋಮವಾರ ಘೋಷಿಸಿದ್ದಾರೆ. ಭಾರತದ ಯುವ ಕುಸ್ತಿಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಈ ಲೀಗ್‌ ವೇದಿಕೆಯಾಗಲಿದೆ ಎಂದು ಸಾಕ್ಷಿ ತಿಳಿಸಿದ್ದಾರೆ. 

RCB, ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತಾಡಿದ ಕನ್ನಡಿಗ ಕೆ ಎಲ್ ರಾಹುಲ್

ಮಾಜಿ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತೆ ಗೀತಾ ಫೋಗಟ್‌ ಹಾಗೂ ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚು ವಿಜೇತ ಅಮನ್‌ ಶೆರಾವತ್‌, ಸಾಕ್ಷಿಗೆ ಬೆಂಬಲ ನೀಡಲಿದ್ದಾರೆ. ಈ ಲೀಗ್‌ಗೆ ಇನ್ನಷ್ಟೇ ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ)ನಿಂದ ಮಾನ್ಯತೆ ದೊರೆಯಬೇಕಿದೆ.

ಚೆಸ್ ಒಲಿಂಪಿಯಾಡ್: ಭಾರತಕ್ಕೆ ಐದನೇ ಜಯ

ಬುಡಾಪೆಸ್ಟ್ (ಹಂಗೇರಿ): ಇಲ್ಲಿ ನಡೆಯುತ್ತಿರುವ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತೀಯ ತಂಡಗಳು ಗೆಲುವಿನ ಓಟ ಮುಂದುವರಿಸಿವೆ. 5ನೇ ಸುತ್ತಿನಲ್ಲಿ ಭಾರತ ಪುರುಷರ ತಂಡ ಅಜರ್‌ಬೈಜಾನ್ ವಿರುದ್ಧ 3-1ರ ಗೆಲುವು ಸಾಧಿಸಿತು. ಡಿ.ಗುಕೇಶ್ ಹಾಗೂ ಅರ್ಜುನ್ ಎರಿಗೈಸಿ ತಮ್ಮ ಎದುರಾಳಿಗಳನ್ನು ಸೋಲಿಸಿದರೆ, ಆರ್ ಪ್ರಜ್ಞಾನಂದ ಹಾಗೂ ವಿದಿತ್ ಗುಜರಾತಿ ಡ್ರಾ ಸಾಧಿಸಿದರು. 

ಇನ್ನು, ಮಹಿಳಾ ತಂಡ ಕಜಕಸ್ತಾನ ವಿರುದ್ಧ 2.5-1.5ರಲ್ಲಿ ಜಯ ಪಡೆಯಿತು. ಡಿ. ಹರಿಕಾ ಆಘಾತಕಾರಿ ಸೋಲುಂಡರೆ, ವಂತಿಕಾ ಅಗರ್ವಾಲ್ ಹಾಗೂ ಆರ್. ವೈಶಾಲಿ ಗೆಲುವು ಪಡೆದರು. ದಿವ್ಯಾ ದೇಶ್ ಮುಖ್ ಡ್ರಾ ಸಾಧಿಸಿದರು. 5ನೇ ಸುತ್ತಿನ ಬಳಿಕ ಭಾರತ ಪುರುಷ ಹಾಗೂ ಮಹಿಳಾ ತಂಡಗಳೆರಡೂ, ತಲಾ 10 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್ ಎಷ್ಟು ಶ್ರೀಮಂತ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ರಾಷ್ಟ್ರೀಯ ಕಿರಿಯರ ಹಾಕಿ: ಸೆಮೀಸ್‌ಗೆ ಕರ್ನಾಟಕ

ಜಲಂಧರ್: 14ನೇ ರಾಷ್ಟ್ರೀಯ ಕಿರಿಯರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಸೋಮವಾರ ನಡೆದ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ರಾಜ್ಯ ತಂಡ ಮಧ್ಯಪ್ರದೇಶ ವಿರುದ್ಧ ಶೂಟೌಟ್‌ನಲ್ಲಿ 5-4 ಗೋಲುಗಳ ಗೆಲುವು ಸಾಧಿಸಿತು. ನಿಗದಿತ ಸಮಯಕ್ಕೆ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದ ಕಾರಣ, ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. 

ಇನ್ನು ಮಣಿಪುರವನ್ನು 3-2ರಲ್ಲಿ ಸೋಲಿಸಿದ ಉತ್ತರ ಪ್ರದೇಶ, ಜಾರ್ಖಂಡನ್ನು ಶೂಟೌಟ್‌ನಲ್ಲಿ 3-1ರಲ್ಲಿ ಸೋಲಿಸಿದ ಹರ್ಯಾಣ, ಒಡಿಶಾವನ್ನು ಶೂಟೌಟ್‌ನಲ್ಲಿ 4-3ರಲ್ಲಿ ಸೋಲಿಸಿದ ಪಂಜಾಬ್ ಅಂತಿಮ 4 ರ ಸುತ್ತಿಗೇರಿದವು. ಬುಧವಾರ ಸೆಮೀಸ್‌ನಲ್ಲಿ ಕರ್ನಾಟಕಕ್ಕೆ ಉ.ಪ್ರದೇಶ ಎದುರಾಗಲಿದೆ. ಹರ್ಯಾಣ ಹಾಗೂ ಪಂಜಾಬ್ ಮತ್ತೊಂದು ಸೆಮೀಸ್ ನಲ್ಲಿ ಸೆಣಸಲಿವೆ. ಗುರುವಾರ ಫೈನಲ್ ನಡೆಯಲಿದೆ.

click me!