ಆಗ ಬಾಲಿವುಡ್​ ನಟಿ, ಈಗ ಜರ್ಮನ್​ ಬ್ಯೂಟಿ: ವಿರಾಟ್​ ಕೊಹ್ಲಿ ರಾತ್ರಿಯ 'Like' ಸೃಷ್ಟಿಸಿದೆ ಹಲ್​ಚಲ್​

Published : Apr 18, 2026, 05:54 PM IST
Virat Kohli and German influencer LizLaz

ಸಾರಾಂಶ

ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಯು ಜರ್ಮನ್ ಪ್ರಭಾವಿಯೊಬ್ಬರ ಫೋಟೋವನ್ನು ಲೈಕ್ ಮಾಡಿ, ನಂತರ ಅನ್‌ಲೈಕ್ ಮಾಡಿದ್ದು ರಾತ್ರೋರಾತ್ರಿ ವೈರಲ್ ಆಗಿದೆ. ಈ ಹಿಂದೆ ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದಾಗಲೂ ಇದೇ ರೀತಿ ವಿವಾದ ಸೃಷ್ಟಿಯಾಗಿತ್ತು. ಈ ಘಟನೆಯ ಬಗ್ಗೆ ಸ್ವತಃ ಜರ್ಮನ್ ನಟಿ ಬೇಸರ ವ್ಯಕ್ತಪಡಿಸಿದ್ದು, ನೆಟ್ಟಿಗರು ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಕ್ರಿಕೆಟಿಗ ವಿರಾಟ್​ ಕೊಹ್ಲಿ, ಇದೀಗ ಲೈಕ್​ನಿಂದ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಇದೇನು ಉದ್ದೇಶಪೂರ್ವಕವೋ, ಆಕಸ್ಮಿಕವೋ ಗೊತ್ತಿಲ್ಲ, ಒಟ್ಟಿನಲ್ಲಿ ಬ್ಯೂಟಿಗಳ ಫೋಟೋಗೆ ಲೈಕ್​ ಮಾಡಿ, ಕೊನೆಗೆ ಅದು ವೈರಲ್​ ಆಗುತ್ತಲೇ ಸಮಜಾಯಿಷಿ ಕೊಡುವುದು ನಡೆದೇ ಇದೆ. 2025 ರಲ್ಲಿ, ನಟಿ ಮತ್ತು ಪ್ರಭಾವಿ ಅವ್ನೀತ್ ಕೌರ್ ಅವರ ಫೋಟೋವನ್ನು ಅವರ ಖಾತೆಯು ಲೈಕ್ ಮಾಡಿದಾಗಲೂ ಭಾರಿ ಸದ್ದು ಆಗಿತ್ತು. ಇದು ವ್ಯಾಪಕ ಚರ್ಚೆಯನ್ನು ಉಂಟು ಹಾಕಿತ್ತು. ಆ ಸಮಯದಲ್ಲಿ, ಕೊಹ್ಲಿ ಸ್ಪಷ್ಟೀಕರಣವನ್ನು ನೀಡುತ್ತಾ, "ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಾಗಿ ಸಂವಹನವನ್ನು ನೋಂದಾಯಿಸಿರಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡಬಾರದೆಂದು ನಾನು ವಿನಂತಿಸುತ್ತೇನೆ. ನಿಮ್ಮ ತಿಳಿವಳಿಕೆಗೆ ಧನ್ಯವಾದಗಳು ಎಂದಿದ್ದರು.

ಜರ್ಮನ್​ ಬ್ಯೂಟಿ

ಆದರೆ ಬಾಲಿವುಡ್​ ನಟಿಯ ಬಳಿಕ, ಈಗ ಸೀದಾ ಲೈಕ್​ ಮಾಡಿದ್ದು ಜರ್ಮನಿಯ ಬ್ಯೂಟಿಗೆ. ಹಾಗೆಂದು ಫೋಟೋ ನೋಡಿ ಲೈಕ್​ ಮಾಡಲೇಬಾರದು ಎಂದೇನಿಲ್ಲ. ಆದರೆ, ಸೆಲೆಬ್ರಿಟಿಗಳು ಇಂಥ ವಿಷ್ಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ರಾತ್ರಿಯ ಸಮಯದಲ್ಲಿ ಮೊಬೈಲ್​ ಸ್ಕ್ರೋಲ್​ ಮಾಡುವಾಗ ಬ್ಯೂಟಿಗಳ ಫೋಟೋ ಕಂಡರೆ ಅಕಸ್ಮಾತ್​ ಲೈಕ್ ಮೇಲೆ ಕೈಹೋಗದಂತೆ ನೋಡಿಕೊಳ್ಳಬೇಕು. ಆದರೆ ಈ ಬಾರಿಯೂ ಒಂದು ಎಡವಟ್ಟೋ, ಉದ್ದೇಶಪೂರ್ವಕವೋ ಗೊತ್ತಿಲ್ಲ. ಜರ್ಮನ್ ಪ್ರಭಾವಿ ಲಿಜ್‌ಲಾಜ್ ಅವರ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಿಂದ 'ಲೈಕ್' ಬಂದಿದೆ.

ರಾತ್ರೋರಾತ್ರಿ ವೈರಲ್​

ಕೊಹ್ಲಿ ಅಂಥೋರು ಲೈಕ್​ ಮಾಡಿದ್ರೆ ಕೇಳಬೇಕಾ, ಅವರು ಅದನ್ನು ಯಾವಾಗಲಾದ್ರೂ ಡಿಲೀಟ್​ ಮಾಡಬಹುದು ಅರ್ಥಾತ್​ ಅನ್​ಲೈಕ್​ ಮಾಡಬಹುದು ಎಂದುಕೊಂಡೇ, ಜಾಣ ನೆಟ್ಟಿಗರು ಅದರ ಸ್ಕ್ರೀನ್​ಷಾಟ್​ ತೆಗೆದು ಷೇರ್ ಮಾಡಿದ್ದೇ ಮಾಡಿದ್ದು. ಕೊನೆಗೆ ಆಗಿದ್ದೂ ಹಾಗೆ, ರಾತ್ರಿ ಲೈಕ್​ ಮಾಡಿದ ಕೊಹ್ಲಿ, ಬೆಳಿಗ್ಗೆ ಅನ್​ಲೈಕ್​ ಮಾಡಿಬಿಟ್ಟಿದ್ದರು. ಇದರ ಬಗ್ಗೆ ಖುದ್ದು ನಟಿಯೇ ತುಂಬಾ ನೊಂದು ನುಡಿದಿದ್ದಾರೆ. ಕೊಹ್ಲಿ ನನ್ನ ಫೋಟೋ ಲೈಕ್​ ಮಾಡಿದಾಗ ತುಂಬಾ ಖುಷಿಯಾಯಿತು. ಆದರೆ ಆ ಖುಷಿ ಬೆಳಗಾಗುವುದರಲ್ಲಿ ಇರಲಿಲ್ಲ. ಏಕೆಂದರೆ ಅವರು ಅನ್​ಲೈಕ್​ ಮಾಡಿಬಿಟ್ಟಿದ್ದರು ಎಂದು ನೊಂದು ನುಡಿದಿದ್ದಾರೆ.

ತುಂಬಾ ಬೇಸರ

ಅದು ಹೇಗೆ ಇಷ್ಟು ದೊಡ್ಡ ಸುದ್ದಿಯಾಯಿತು ಎಂದು ನನಗೆ ತಿಳಿದಿಲ್ಲ. ಏಕೆಂದರೆ ನನಗೆ ಅವರ ಬಗ್ಗೆ ಸ್ವಲ್ಪ ಬೇಸರವಾಯಿತು. ಜನರು ಅದನ್ನು ಇಷ್ಟು ಬೇಗ ಹೇಗೆ ಗಮನಿಸಿದರೋ ಗೊತ್ತಿಲ್ಲ. ಅದನ್ನು ನೋಡಿಯೇ ಬಹುಶಃ ಅವರು unlike ಮಾಡಿರಬಹುದು. ಅದೇನೇ ಇದ್ದರೂ ನನ್ನ ಫೋಟೋಗೆ ಲೈಕ್​ ಮಾಡಿದ್ದಕ್ಕೆ, ಅದಕ್ಕೆ ಕೃತಜ್ಞನಾಗಿದ್ದೇನೆ ಮತ್ತು ಅವರ ಬೆಂಬಲವನ್ನು ಪ್ರಶಂಸಿಸುತ್ತೇನೆ ಎಂದಿದ್ದಾರೆ. ರಾತ್ರಿ ಬೆಳಗಾಗುತ್ತಲೇ ಹಲವಾರು ಸಂದೇಶಗಳು ಬಂದಿದ್ದವು. ನನಗೆ ಶಾಕ್​ ಆಗಿ ಹೋಯ್ತು. ಕೆಲವರು ಕೆಟ್ಟದ್ದಾಗಿ ಮಾತನಾಡಿದ್ದು ನೋಡಿ ಬೇಸರವಾಯ್ತು ಎಂದಿದ್ದಾರೆ ನಟಿ.

ಎರಡು ಮಕ್ಕಳಾದ ಮೇಲೆ ಅನುಷ್ಕಾ ಮೇಲೆ ಬೇಸರ ಆಗಿರಬೇಕು, ಅದಕ್ಕೆ ರಾತ್ರಿಯೆಲ್ಲಾ ಬ್ಯೂಟಿಗಳ ಫೋಟೋ ನೋಡ್ತಾ ಇರ್ತಾರೆ ಎಂದು ಕೆಲವರು ಹೇಳಿದ್ರೆ, ಈ ಬಾರಿ ಹಿಂದಿನದ್ದೇ ಸುಳ್ಳನ್ನು ಹೇಳಬೇಡಿ, ಹೊಸ ಸುಳ್ಳು ಹೇಳಿ. ಇಲ್ಲದಿದ್ದರೆ ಯಾರೂ ನಂಬಲ್ಲ ಎಂದಿದ್ದಾರೆ ನೆಟ್ಟಿಗರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತಿವೇಗದ ಐಪಿಎಲ್ 1000 ರನ್! ಸಾಲ್ಟ್, ಹೆಡ್ ದಾಖಲೆ ಮುರಿದ ಟಿಮ್ ಡೇವಿಡ್‌ಗೆ ಎರಡನೇ ಸ್ಥಾನ!
ಆ ಇಬ್ಬರು ಬೌಲರ್‌ಗಳಿಗೆ ಸಂಬಳ ಕೊಟ್ಟು ಮನೆಗೆ ಕಳಿಸಿ! ಮುಂಬೈ ಇಂಡಿಯನ್ಸ್‌ ವೇಗಿಗಳ ಮೇಲೆ ಕಿಡಿಕಾರಿದ ಮಾಜಿ ಕ್ರಿಕೆಟಿಗ