ಇಂದಿರಾ-ಅಪ್ಪಾಜಿಯನ್ನೂ ಮೀರಿಸುತ್ತದೆ ಕ್ರಿಕೆಟಿಗ ಓಪನ್ ಮಾಡಿದ ಈ ಕ್ಯಾಂಟಿನ್: ಇಲ್ಲಿ ಎಲ್ಲವೂ ಫ್ರೀ..!

Published : Aug 03, 2017, 02:49 PM ISTUpdated : Apr 11, 2018, 01:04 PM IST
ಇಂದಿರಾ-ಅಪ್ಪಾಜಿಯನ್ನೂ ಮೀರಿಸುತ್ತದೆ ಕ್ರಿಕೆಟಿಗ ಓಪನ್ ಮಾಡಿದ ಈ ಕ್ಯಾಂಟಿನ್: ಇಲ್ಲಿ ಎಲ್ಲವೂ ಫ್ರೀ..!

ಸಾರಾಂಶ

ಸದ್ಯ ಬೆಂಗಳೂರಿನಲ್ಲಿ ಕ್ಯಾಂಟಿನ್​ಗಳದ್ದೇ ಹವಾ. ಇಂದಿರಾ ಕ್ಯಾಂಟಿನ್​'ನ ಹಾವಳಿ ಒಂದು ಕಡೆ ಆದ್ರೆ ಮತ್ತೊಂದು ಕಡೆ ಸದ್ದಿಲ್ಲದೆ ತೆರದಿರುವ ಅಪ್ಪಾಜಿ ಕ್ಯಾಂಟಿನ್​​​. ಆದ್ರೆ ಇವೆರಡರ ಮಧ್ಯೆ ಮತ್ತೊಂದು ಉಚಿತ ಊಟ ನೀಡುವ ಕ್ಯಾಂಟಿನ್​​ ಓಪನ್​ ಆಗ್ತಿದೆ. ಈ ಕ್ಯಾಂಟಿನ್​​ ಉಳಿದ ಕ್ಯಾಂಟಿನ್​​ಗಿಂತ ತುಂಬಾನೇ ವಿಭಿನ್ನ. ಇದರ ಓನರ್​​ ಕೂಡ ನಿಮ್ಮ ಆಶ್ಚರ್ಯಕ್ಕೆ ಕಾರಣನಾಗಲಿದ್ದಾನೆ. ಯಾವುದಪ್ಪ ಆ ಕ್ಯಾಂಟಿನ್​ ಅಂತೀರಾ? ಇಲ್ಲಿದೆ ವಿವರ

ಮುಂಬೈ(ಆ.03): ಸದ್ಯ ಬೆಂಗಳೂರಿನಲ್ಲಿ ಕ್ಯಾಂಟಿನ್​ಗಳದ್ದೇ ಹವಾ. ಇಂದಿರಾ ಕ್ಯಾಂಟಿನ್​'ನ ಹಾವಳಿ ಒಂದು ಕಡೆ ಆದ್ರೆ ಮತ್ತೊಂದು ಕಡೆ ಸದ್ದಿಲ್ಲದೆ ತೆರದಿರುವ ಅಪ್ಪಾಜಿ ಕ್ಯಾಂಟಿನ್​​​. ಆದ್ರೆ ಇವೆರಡರ ಮಧ್ಯೆ ಮತ್ತೊಂದು ಉಚಿತ ಊಟ ನೀಡುವ ಕ್ಯಾಂಟಿನ್​​ ಓಪನ್​ ಆಗ್ತಿದೆ. ಈ ಕ್ಯಾಂಟಿನ್​​ ಉಳಿದ ಕ್ಯಾಂಟಿನ್​​ಗಿಂತ ತುಂಬಾನೇ ವಿಭಿನ್ನ. ಇದರ ಓನರ್​​ ಕೂಡ ನಿಮ್ಮ ಆಶ್ಚರ್ಯಕ್ಕೆ ಕಾರಣನಾಗಲಿದ್ದಾನೆ. ಯಾವುದಪ್ಪ ಆ ಕ್ಯಾಂಟಿನ್​ ಅಂತೀರಾ? ಇಲ್ಲಿದೆ ವಿವರ

ಇಂದಿರಾ ಕ್ಯಾಂಟಿನ್​​ ಮೇಲಾ..! ಅಪ್ಪಾಜಿ ಕ್ಯಾಂಟಿನ್​ ಮೇಲಾ..!

ಸದ್ಯ ಕರ್ನಾಟಕದಲ್ಲಿ ಬರೀ ಕ್ಯಾಂಟಿನ್​​ಗಳದ್ದೇ ಮಾತು. ಕಾಂಗ್ರೆಸ್​ ಇಂದಿರಾ ಕ್ಯಾಂಟಿನ್​​​ ಬಗ್ಗೆ ತಲೆಕೆಡಸಿಕೊಂಡಿದ್ರೆ ಜೆಡಿಎಸ್​​​ ಅಪ್ಪಾಜಿ ಕ್ಯಾಂಟಿನ್​​​ಗೆ ಮೊರೆ ಹೋಗಿದೆ. ಆದ್ರೆ ಈ ಎರಡೂ ಪಕ್ಷಗಳ ಕ್ಯಾಂಟಿನ್​​​​ಗಳು ಜನರಿಗೆ ಎಷ್ಟು ಉಪಯೋಗವಾಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಆಯಾ ರಾಜಕೀಯ ಪಕ್ಷಗಳಿಗೆ ಮಾತ್ರ ವೋಟ್​​​ ಬ್ಯಾಂಕ್​​ ಆಗುತ್ತೆ ಎನ್ನುವ ನಿರೀಕ್ಷೆಯಲ್ಲಿವೆ. ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನುಡಿ ಎಂದು ಬಿಂಬಿತವಾಗಿದೆ.

ಇಂದಿರಾ-ಅಪ್ಪಾಜಿಯನ್ನೂ ಮೀರಿಸುತ್ತೆ ಈ ಕ್ಯಾಂಟಿನ್​​

ಹೌದು, ಇಂದಿರಾ ಕ್ಯಾಂಟಿನ್​ ಮತ್ತು ಅಪ್ಪಾಜಿ ಕ್ಯಾಮಟಿನ್​ ಅನ್ನೂ ಮಿರಿಸುವಂತ ಒಂದು ಹೊಸ ಕ್ಯಾಂಟಿನ್​ ಸದ್ದಿಲ್ಲದೆ ಭಾರತದಲ್ಲಿ ತಲೆ ಎತ್ತಿದೆ. ಇಂದಿರಾ ಮತ್ತು ಅಪ್ಪಾಜಿ ಕ್ಯಾಂಟಿನ್​ನಲ್ಲಿ ಒಂದು ಊಟದ ಬೆಲೆ 10 ರೂಪಾಯಿ ಆದ್ರೆ ಈಗ ಹೊಸದಾಗಿ ಓಪನ್​ ಆಗಿರೋ ಕ್ಯಾಂಟಿನ್​ನಲ್ಲಿ ಎಲ್ಲವೂ ಫ್ರೀ. ನೀವು ಒಂದೂ ರೂಪಾಯಿ ನೀಡದೆ ನಿಮ್ಮ ಹೊಟ್ಟೆಯನ್ನ ತುಂಬಿಸಿಕೊಳ್ಳಬಹುದು.

ಫ್ರೀ ಕ್ಯಾಂಟಿನ್​​ ಶುರುವಾಗಿರೋದಾದ್ರೂ ಎಲ್ಲಿ ಗೊತ್ತಾ..?

ಜನರಿಗೆ ಫ್ರೀಯಾಗಿ ಊಟ ನೀಡೋ ಆ ಕ್ಯಾಂಟಿನ್​ ಎಲ್ಲಿದ್ಯಪ್ಪ. ನಾವೂ ಅಲ್ಲಿನ ರುಚಿ ನೋಡಿಯೇ ಬಿಡುತ್ತೇವೆ ಅಂತ ನೀವು ಕೇಳಬಹುದು. ಆದ್ರೆ ಅದಕ್ಕೂ ಮುನ್ನ ಈ ಉಚಿತ ಕ್ಯಾಂಟಿನ್​​ನ ಮಾಲಿಕನ ಬಗ್ಗೆ ಹೇಳಲೇಬೇಕು. ಈತ ಯಾವುದೇ ರಾಜಕೀಯ ಪಕ್ಷದ ಸದಸ್ಯನಲ್ಲ. ಈತ ಪಬ್ಲಿಸಿಟಿಗಾಗಿಯೂ ಜನರಿಗೆ ಉಚಿತ ಊಟ ನೀಡುತ್ತಿಲ್ಲ ಬದಲಿಗೆ ತನ್ನ ಪ್ರೀತಿಯ ಜನರಿಗೋಸ್ಕರ ತಾನು ದುಡಿದ ಹಣವನ್ನ ಅವರ ಹಸಿವಿಗಾಗಿ ಮುಡುಪಿಟ್ಟ ದೇಶದ ಹೆಮ್ಮೆಯ ಕ್ರಿಕೆಟಿಗ.

ತಾನು ದುಡಿದ ಹಣವನ್ನ ದೇಶದ ಜನರಿಗೆ ಅರ್ಪಿಸಿದ ಕ್ರಿಕೆಟಿಗ ಯಾರು..?

ಹೌದು, ತಾನು ಕ್ರಿಕೆಟ್​​ ಬದುಕಿನಲ್ಲಿ ದುಡಿದ ಹಣವನ್ನೆಲ್ಲಾ ದೇಶದ ಬಡವರಿಗೆ ಅರ್ಪಿಸುತ್ತಿರುವ ಆ ಕ್ರಿಕೆಟಿಗ ಬೇಱರು ಅಲ್ಲ. ಡೆಲ್ಲಿಯ ಡ್ಯಾಷಿಂಗ್​​ ಓಪನರ್​​​ ಗೌತಮ್​ ಗಂಭೀರ್​​.

ಮೈದಾನದ ಒಳಗೆ ಸದಾ ಎಲ್ಲರ ಬಳಿ ಕಿರಿಕ್​ ಮಾಡಿಕೊಳ್ಳುತ್ತಾ ಟೀಂ ಇಂಡಿಯಾದ ಜಗಳಗಂಟ ಅಂತಾನೇ ಕರೆಯಿಸಿಕೊಳ್ಳೋ ಈ ಶಾರ್ಟ್​ ಟೆಂಪರ್​​​ ವ್ಯಕ್ತಿಗೆ ಹೇಗಪ್ಪ ಇಷ್ಟು ಒಳ್ಳೆ ಬುದ್ಧಿ ಬಂತು ಅಂತ ನಿಮಗೆ ಅನಿಸಬಹುದು. ಆದ್ರೆ ನಿಮಗೆ ಒಂದು ವಿಷ್ಯ ಹೇಳಲೇಬೇಕು. ಗೌತಿ ಮೈದಾನದಲ್ಲಿ ಎಷ್ಟು ಅಗ್ರಸ್ಸೀವೋ ಮೈದಾನದ ಆಚೆ ಅಷ್ಟೇ ಸಾಫ್ಟ್​​ ಮನುಷ್ಯ. ತನ್ನ ದೇಶ, ಜನರು ಅಂದ್ರೆ ತನ್ನ ಮನಸು ಕರಗಿ ಹೋಗುತ್ತೆ. ಇದೇ ಕಾರಣಕ್ಕೆ ತಮ್ಮ ಜನರಿಗೋಸ್ಕರ ಗೌತಿ ತಾವು ಇಷ್ಟು ವರ್ಷ ಕ್ರಿಕೆಟ್​​​ನಲ್ಲಿ ದುಡಿದ್ದಿದ್ದನ್ನ ತನ್ನ ಜನರಿಗಾಗಿ ವೆಚ್ಚ ಮಾಡಲು ತಿರ್ಮಾನಿಸಿದ್ದಾರೆ. ಉಚಿತ ಕ್ಯಾಂಟಿನ್​ ಅನ್ನ ತೆರೆದಿದ್ದಾರೆ.

ಗೌತಿಯ ಉಚಿತ ಕ್ಯಾಂಟಿನ್​ ಎಲ್ಲಿದೆ..?

ಅಷ್ಟಕ್ಕೂ ಗೌತಿ ತಮ್ಮ ಉಚಿತ ಕ್ಯಾಂಟಿನ್​ ಅನ್ನ ಶುರು ಮಾಡಿರೋದಾದ್ರೂ ಎಲ್ಲಿ ಗೊತ್ತಾ..? ರಾಷ್ಟ್ರ ರಾಜಧಾನಿ ದೆಹಲಿಯ ಪಟೇಲ್​​ ನಗರದಲ್ಲಿ. ತಮ್ಮ ಹುಟ್ಟೂರಿನ ಬಡ ಜನರ ಹಸಿವನ್ನ ನೀಗಿಸಲು ಗಂಭೀರ್​​​ ಈ ಕ್ಯಾಂಟಿನ್​ ಅನ್ನ ತೆರೆದಿದ್ದಾರೆ.

ಬಡವರಿಗಾಗಿ ಯುವಿ ಹೊಸ ಯೋಜನೆ

ಕೇವಲ ಗೌತಿ ಮಾತ್ರ ಅಲ್ಲ, ಟೀಂ ಇಂಡಿಯಾದ ಮತ್ತೊಬ್ಬ ಸ್ಟಾರ್​​ ಆಟಗಾರ ಯುವರಾಜ್​ ಸಿಂಗ್​ ಕೂಡ ಬಡವರಿಗೆ ಉಚಿತವಾಗಿ ಊಟ ನೀಡಲು ನಿರ್ಧರಿಸಿದ್ದಾರೆ. ಆದ್ರೆ ಯುವಿ ಯಾವುದೇ ಉಚಿತ ಕ್ಯಾಂಟಿನ್​ ಅನ್ನು ತೆರೆದಿಲ್ಲ. ಬದಲಿಗೆ ಪ್ರತಿ ವಾರ ಒಂದೊಂದು ಬಡವರ ಗಲ್ಲಿಗಳಿಗೆ ತೆರಳಿ ತಾವೇ ಅವರಿಗೆ ಊಟವನ್ನ ಬಡಸಿ ಬರ್ತಾರೆ.

ಒಟ್ಟಿನಲ್ಲಿ, ಇರೋದೆಲ್ಲಾ ನನಗೇ ಇರಲಿ ಅಂತ ತಮ್ಮ ಮನೆಯ ಖಜಾನೆಯನ್ನ ತುಂಬಿಸಿಕೊಳ್ತಿರೋ ಈ ಕಾಲದಲ್ಲಿ ಇವರಿಬ್ಬರ ಈ ಸೇವೆ ನಿಜಕ್ಕೂ ಮೆಚ್ಚುವಂತದ್ದು. ಇವರ ಈ ಸಾಧನೆ ಹೀಗೆ ಮುಂದುವರಿಯಲಿ. ಇವರನ್ನ ನೋಡಿ ಬೇರೆಯವರೂ ಕಲಿಯಲಿ ಎಂಬುದೊಂದೆ ನಮ್ಮ ಆಶಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?