'ಗಂಭೀರ'ನಾದ ಗೌತಮ್: ಈ ರಹಸ್ಯ ತಿಳಿದರೆ ಗೌತಮ್'ಗೆ ಪತ್ನಿಯಿಂದ ಹೊಡೆತ ಬೀಳುವುದು ಗ್ಯಾರಂಟಿ

Published : Apr 11, 2017, 08:25 AM ISTUpdated : Apr 11, 2018, 12:45 PM IST
'ಗಂಭೀರ'ನಾದ ಗೌತಮ್: ಈ ರಹಸ್ಯ ತಿಳಿದರೆ ಗೌತಮ್'ಗೆ ಪತ್ನಿಯಿಂದ ಹೊಡೆತ ಬೀಳುವುದು ಗ್ಯಾರಂಟಿ

ಸಾರಾಂಶ

KKR ತಂಡದ ನಾಯಕ ಗೌತಮ್ ಗಂಭೀರ್ ಇತ್ತೀಚೆಗೆ ಬಹಳ ಗಂಭೀರವಾಗಿದ್ದಾರೆ. IPLನ ಆರಂಭಿಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ಗುಜರಾತ್ ಲಯನ್ಸ್'ನ್ನು 10 ವಿಕೆಟ್'ಗಳಿಂದ ಸೋಲಿಸಿದ್ದರು. ಈ ಪಂದ್ಯದಲ್ಲಿ ಗೌತಮ್ ನಾಯಕತ್ವ ಉತ್ತಮವಾಗಿ ನಿಭಾಯಿಸಿದ್ದರು. ಹೀಗಿರುವಾ ಅವರ 'ಗಂಭಿರತೆ'ಗೆ ಮ್ಯಾಚ್ ಕಾರಣವಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಹಾಗಾದ್ರೆ ಅವರ ಚಿಂತೆಗೆ ಕಾರಣವೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಮುಂಬೈ(ಎ.11): KKR ತಂಡದ ನಾಯಕ ಗೌತಮ್ ಗಂಭೀರ್ ಇತ್ತೀಚೆಗೆ ಬಹಳ ಗಂಭೀರವಾಗಿದ್ದಾರೆ. IPLನ ಆರಂಭಿಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ಗುಜರಾತ್ ಲಯನ್ಸ್'ನ್ನು 10 ವಿಕೆಟ್'ಗಳಿಂದ ಸೋಲಿಸಿದ್ದರು. ಈ ಪಂದ್ಯದಲ್ಲಿ ಗೌತಮ್ ನಾಯಕತ್ವ ಉತ್ತಮವಾಗಿ ನಿಭಾಯಿಸಿದ್ದರು. ಹೀಗಿರುವಾ ಅವರ 'ಗಂಭಿರತೆ'ಗೆ ಮ್ಯಾಚ್ ಕಾರಣವಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಹಾಗಾದ್ರೆ ಅವರ ಚಿಂತೆಗೆ ಕಾರಣವೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ವಾಸ್ತವವಾಗಿ ಇತ್ತೀಚೆಗೆ ಅವರನ್ನು ಕಾಡುತ್ತಿರುವುದು ಪತ್ನಿಯ ಭಯ. ಯಾಕೆಂದರೆ ಗೌತಮ್ ತನ್ನ ಪತ್ನಿಯಿಂದ ಬಹುದೊಡ್ಡ ರಹಸ್ಯ ಮುಚ್ಚಿಟ್ಟಿದ್ದರು. ಹೀಗಾಗಿ ಪತ್ನಿಗೆ ಈ ವಿಚಾರ ತಿಳಿದರೆ ತನ್ನನ್ನು ಹೊಡೆದೇ ಬಿಡುತ್ತಾಳೆ ಎಂಬ ಚಿಂತೆ ಗೌತಮ್'ನನ್ನು ಕಾಡುತ್ತಿದೆ. ಈ ವಿಚಾರವನ್ನು ಗೌತಮ್ ಹಿಂದೂಸ್ಥಾನ್ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ, 'ನನಗೆ ಡಾನ್ಸ್ ಇಷ್ಟವಾಗುವುದಿಲ್ಲ. ಹೀಗಾಗಿಯೇ ಪಂದ್ಯದ ಬಳಿಕ ನಡೆಯುವ ಪಾರ್ಟಿಗಳಲ್ಲಾಗಲೀ, ಪ್ಯಾಮಿಲಿ ಕಾರ್ಯಕ್ರಮಗಳಲ್ಲಾಗಲೀ ನಾನು ಡ್ಯಾನ್ಸ್ ಮಾಡುವುದಿಲ್ಲ' ಎಂದಿದ್ದಾರೆ.

ಮುಂದೆ ಮಾತನಾಡಿದ ಗೌತಮ್ 'ನನ್ನ ಪತ್ನಿ ನತಾಶಾಳಿಗೂ ನನ್ನನ್ನು ಡಾನ್ಸ್ ಫ್ಲೋರ್ ಮೇಲೆ ಕರೆತರಲು ಈವರೆಗೂ ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬೇರೆ ವಿಧಿ ಇಲ್ಲದೆ ಡಾನ್ಸ್ ಮಾಡಲೇಬೇಕಾಯಿತು ಹೀಗಾಗಿಯೇ ಪತ್ನಿಯ ಕೋಪ ನೆನೆದು ನನಗೆ ಭಯವಾಗಲಾರಂಭಿಸಿದೆ. ನಾನೊಬ್ಬ ಪಂಜಾಬಿ, ನನಗೆ ಹಾಡುಗಳು ಇಷ್ಟವಾಗುತ್ತವೆ ಆದರೆ ಡಾನ್ಸ್ ಮಾಡುವುದಿಲ್ಲ. ಪಂದ್ಯದ ಬಳಿಕ ನಡೆಯುವ ಕಾರ್ಯಕ್ರಮಗಳಿಗೆ ಖುದ್ದು ಶಾರುಖ್ ಡಾನ್ಸ್ ಮಾಡಲು ಕರೆದಿದ್ದರೂ ನಾನು ಮಾಡಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು' ಎಂದಿದ್ದಾರೆ.

'ನಾನು ಸ್ಪಾನ್ಸ್ರ್'ನ ಶೂಟಿಂಗ್ ವೇಳೆ ಡಾನ್ಸ್ ಮಾಡಿದ್ದೇನೆ. ಇದಕ್ಕಾಗಿ ನನ್ನ ಪತ್ನಿ ನನ್ನನ್ನು ಹೊಡೆಯುತ್ತಾಳೆ ಎಂಬುವುದೂ ನನಗೆ ತಿಳಿದಿದೆ. ಯಾಕೆಂದರೆ ಆಕೆಯ ತಮ್ಮನ ಮದುವೆಗೆ ಡಾನ್ಸ್ ಮಾಡಲು ಆಕೆ ಒತ್ತಾಯಿಸಿದ್ದರೂ ನಾನು ನಿರಾಕರಿಸಿದ್ದೆ ಈ ವೇಳೆ ಆಕೆಗೆ ತುಂಬಾ ಕೋಪ ಬಂದಿತ್ತಲ್ಲದೆ, ಸಿಕ್ಕಾಪಟ್ಟೆ ಬೈದಿದ್ದಳು. ಹೀಗಿರುವಾಗ ನಾನು ಡಾನ್ಸ್ ಮಾಡಿದ ವಿಚಾರ ತಿಳಿದು ನನ್ನ ಕ್ಲಾಸ್ ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ' ಎಂದಿದ್ದಾರೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಕೇವಲ 12 ಜನರಲ್ಲಿ ಮಾತ್ರ ಇರುವ ಅಪರೂಪದ ವಾಚ್‌ ಮೆಸ್ಸಿಗೆ ಗಿಫ್ಟ್ ಕೊಟ್ಟ ಅನಂತ್ ಅಂಬಾನಿ!
ಐಪಿಎಲ್ ಹರಾಜು: ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗ ಪ್ರಶಾಂತ್‌ಗೆ 14.2 ಕೋಟಿ ಸಂಬಳ!