
ಬೆಂಗಳೂರು(ಏ.11): ಎಬಿ ಡಿವಿಲಿಯರ್ಸ್ ಕ್ರಿಕೆಟ್ ಜಗತ್ತು ಕಂಡ ಅದ್ಭುತ ಪ್ರತಿಭೆ. ಎಬಿಡಿ ಯಾವುದೇ ತಂಡದ ಪರವಾಗಿ ಆಡಿದರೂ ಆತನನ್ನು ಇಷ್ಟಪಡದ ಕ್ರಿಕೆಟ್ ಅಭಿಮಾನಿಯೇ ಇಲ್ಲವೇನೋ. ಎದುರಾಳಿ ತಂಡದ ಆಟಗಾರರಿಂದಲೂ ಶಹಬ್ಬಾಶ್ ಹೇಳಿಸಿಕೊಳ್ಳುವ ವರ್ತನೆ ತೋರುವುದು ದಕ್ಷಿಣ ಆಫ್ರಿಕಾ ತಂಡದ ಆಟಗಾರನ ಮತ್ತೊಂದು ಸ್ಷೆಷಾಲಿಟಿ.
ಎಬಿಡಿ ಒಂದೊಮ್ಮೆ ಆರ್ಭಟಿಸಲು ಪ್ರಾರಂಭಿಸದರೆ ಮುಗಿದೇ ಹೋಯ್ತು... ಬರಿ ಬೌಂಡಿರಿ, ಸಿಕ್ಸರ್'ಗಳದ್ದೇ ಸುರಿಮಳೆ. ಇಂತಹ ಸಾಕಷ್ಟು ಸ್ಮರಣೀಯ ಪಂದ್ಯಗಳನ್ನಾಡಿರುವ ಎಬಿಡಿ, 10ನೇ ಆವೃತ್ತಿ ಕಿಂಗ್ಸ್ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಅಕ್ಷರಶಃ ಆರ್ಭಟಿಸಿ ಬಿಟ್ಟರು. ಒಂದೆಡೆ ವಿಕೆಟ್ ಉರುಳುತ್ತಿದ್ದಾಗ ಮಂದಗತಿಯ ಆಟಕ್ಕೆ ಮೊರೆಹೋದ ಎಬಿಡಿ ಒಂದು ಹಂತದಲ್ಲಿ 28 ಎಸೆತಗಳಲ್ಲಿ ಕೇವಲ 31 ರನ್ ಬಾರಿಸಿದ್ದರು.
ಆದರೆ ಕೊನೆಯ 18 ಎಸೆತಗಳಲ್ಲಿ ಎಬಿಡಿ ಸಿಡಿಸಿದ್ದು ಬರೋಬ್ಬರಿ 58ರನ್. ಅವರ ಈ ಅಮೋಘ ಇನ್ನಿಂಗ್ಸ್'ನಲ್ಲಿ 3 ಬೌಂಡರಿ ಹಾಗೂ 9 ಸಿಕ್ಸರ್'ಗಳೂ ಸೇರಿದ್ದವು.. ಹೀಗಿತ್ತು ಕಿಂಗ್ಸ್ ಇಲೆವನ್ಸ್ ತಂಡವನ್ನು ಎಬಿಡಿ ಕಂಗಾಲು ಮಾಡಿದ ಪರಿ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.