ಪ್ರೇಕ್ಷಕರಿಗೆ ಎಬಿಡಿ ರಸದೌತಣ ಸಿಕ್ಕಿತು: ಆದರೆ ಆರ್'ಸಿಬಿ ಗೆಲ್ಲಲಿಲ್ಲ

Published : Apr 10, 2017, 06:01 PM ISTUpdated : Apr 11, 2018, 12:35 PM IST
ಪ್ರೇಕ್ಷಕರಿಗೆ ಎಬಿಡಿ ರಸದೌತಣ ಸಿಕ್ಕಿತು: ಆದರೆ ಆರ್'ಸಿಬಿ ಗೆಲ್ಲಲಿಲ್ಲ

ಸಾರಾಂಶ

ಆರ್'ಸಿಬಿ ನೀಡಿದ್ದ 148 ರನ್ ಮೊತ್ತವನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡದವರು ಕೇಲವ 2 ವಿಕೇಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದರು. ಹಶೀಮ್ ಆಮ್ಲ,ಮ್ಯಾಕ್ಸ್'ವೆಲ್ ಹಾಗೂ ವೊಹ್ರ ತಮ್ಮ ಪಾಲಿನ ಸ್ಫೋಟಕ ಆಟವಾಡಿ 14.3 ಓವರ್'ಗಳಲ್ಲಿ ಗೆಲುವಿನ ಗುರಿ ಮುಟ್ಟಿಸಿ ಪಂಜಾಬ್ ಜಯಕ್ಕೆ ಕಾರಣಕರ್ತರಾದರು.

ಇಂದೋರ್(ಏ.10): ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ'ನ ಪ್ರೇಕ್ಷಕರಿಗಂತು ಸಖತ್ ಮನರಂಜನೆ  ಆರ್'ಸಿಬಿಯ ಸ್ಫೋಟಕ ಬ್ಯಾಟ್ಸ್'ಮೆನ್ ಎಬಿಡಿ ವಿಲಿಯರ್ಸ್ ಸಿಕ್ಸ್'ರ್ ಸುರಿಮಳೆಗಳ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದರು. ಆದರೆ ಫಲಿತಾಂಶ ಮಾತ್ರ ಬೆಂಗಳೂರಿಗರಿಗೆ ದೊರಕಲಿಲ್ಲ.

ಆರ್'ಸಿಬಿ ನೀಡಿದ್ದ 148 ರನ್ ಮೊತ್ತವನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡದವರು ಕೇಲವ 2 ವಿಕೇಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದರು. ಹಶೀಮ್ ಆಮ್ಲ,ಮ್ಯಾಕ್ಸ್'ವೆಲ್ ಹಾಗೂ ವೊಹ್ರ ತಮ್ಮ ಪಾಲಿನ ಸ್ಫೋಟಕ ಆಟವಾಡಿ 14.3 ಓವರ್'ಗಳಲ್ಲಿ ಗೆಲುವಿನ ಗುರಿ ಮುಟ್ಟಿಸಿ ಪಂಜಾಬ್ ಜಯಕ್ಕೆ ಕಾರಣಕರ್ತರಾದರು.

ಎಬಿಡಿಯಿಂದ ಸಿಕ್ಸ'ರ್ ರಸದೌತಣ  

ಮೊದಲೆರಡು ಪಂದ್ಯಗಳಲ್ಲಿ ಎಬಿ ಡಿ ವಿಲಿಯರ್ಸ್‌ ಬ್ಯಾಟಿಂಗ್ ಸೊಬಗನ್ನು ಕಣ್ತುಂಬಿಕೊಳ್ಳುವ ಮಿಸ್ ಮಾಡಿಕೊಂಡ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣವನ್ನೇ ಇಂದು ಉಣಬಡಿಸಿದರು.

ಇಂದೋರ್‌'ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಐಪಿಎಲ್ 10ನೇ ಆವೃತ್ತಿಯ 8ನೇ ಪಂದ್ಯದಲ್ಲಿ ವಿಲಿಯರ್ಸ್‌ ಕಣಕ್ಕಿಳಿದರು. ಆರಂಭಿಕ ಆಘಾತದಿಂದ ತತ್ತರಿಸಿ ಹೋಗಿದ್ದ ಆರ್‌ಸಿಬಿಗೆ ಎಬಿಡಿ (89) ಆಸರೆಯಾದರು. ಕೊನೆವರೆಗೂ ವಿಕೆಟ್ ಕಾಪಾಡಿಕೊಂಡ ದಕ್ಷಿಣ ಆಫ್ರಿಕಾದ ಪ್ರಚಂಡ ಬ್ಯಾಟ್ಸ್‌ಮನ್ ಕಿಂಗ್ಸ್ ಇಲೆವೆನ್ ವೇಗಿಗಳನ್ನು ಮನಬಂದಂತೆ ದಂಡಿಸಿದರು.

ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ವಿಲಿಯರ್ಸ್‌ ಒಂದು ಹಂತದಲ್ಲಿ 28 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ಆದರೆ ಎದುರಿಸಿದ ಕೊನೆ 18 ಎಸೆತಗಳಲ್ಲಿ 58 ರನ್ ಸಿಡಿಸಿ ಆರ್'ಸಿಬಿ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.

ಅಂದಹಾಗೇ ಐಪಿಎಲ್‌'ನಲ್ಲಿ ಎಬಿಡಿಗಿದು 22ನೇ ಅರ್ಧಶತಕ.

ಕೈತಪ್ಪಿತು ಶತಕದ ಅವಕಾಶ! : 2ನೇ ಓವರ್‌'ನ ಆರಂಭದಲ್ಲೇ ಕ್ರೀಸ್‌ಗಿಳಿದು ಇನ್ನಿಂಗ್ಸ್ ಮುಕ್ತಾಯದ ವರೆಗೂ ವಿಕೆಟ್ ಕಾಪಾಡಿಕೊಂಡರೂ ವಿಲಿಯರ್ಸ್‌ಗೆ ಎದುರಿಸಲು ಸಿಕ್ಕಿದ್ದು ಕೇವಲ 46 ಎಸೆತಗಳು ಮಾತ್ರ. ಒಂದು ವೇಳೆ ಅವರಿಗೆ ಹೆಚ್ಚು ಸ್ಟ್ರೈಕ್ ಸಿಕ್ಕಿದ್ದರೆ ಆರ್‌'ಸಿಬಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿತ್ತು. ಅಷ್ಟೇ ಅಲ್ಲ, ಅವರಿಂದ ಐಪಿಎಲ್‌ನಲ್ಲಿ 4ನೇ ಶತಕ ದಾಖಲಾಗಿದ್ದರೂ ಆಶ್ಚರ್ಯವಿರುತ್ತಿರಲಿಲ್ಲ.

ಅತೀ ಕಡಿಮೆ ರನ್ ನೀಡಿದ್ದ (12/1)ಪಂಜಾಬ್'ನ ಬೌಲರ್ ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ' ಪುರಸ್ಕಾರಕ್ಕೆ ಪಾತ್ರರಾದರು

ಸ್ಕೋರ್

ಆರ್'ಸಿಬಿ: 148/4 (20/20)

ಡಿವಿಲಿಯರ್ಸ್: 89(46 ಎಸೆತ, 9 ಸಿಕ್ಸ್'ರ್, 3 ಬೌಂಡರಿ)

ಕಿಂಗ್ಸ್ ಇಲೆವೆನ್ ಪಂಜಾಬ್: 150/2 (14.3/20)

ವೋಹ್ರಾ: 34 (21 ಎಸೆತ, 1 ಸಿಕ್ಸ್'ರ್, 4 ಬೌಂಡರಿ)

ಹಶೀಮ್ ಆಮ್ಲಾ: 58 (38 ಎಸೆತ, 3 ಸಿಕ್ಸ್'ರ್, 4 ಬೌಂಡರಿ)

ಮ್ಯಾಕ್ಸ್'ವೆಲ್: 43(22 ಎಸೆತ, 4 ಸಿಕ್ಸ್'ರ್ ಹಾಗೂ 3 ಬೌಂಡರಿ)

ಫಲಿತಾಂಶ: ಪಂಜಾಬ್'ಗೆ 8 ವಿಕೇಟ್ ಗೆಲುವು

ಪಂದ್ಯ ಶ್ರೇಷ್ಠ: ಅಕ್ಸರ್ ಪಟೇಲ್ (12/1)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!