ರಣಜಿ ನಾಯಕತ್ವದಿಂದ ಕೆಳಗಿಳಿದ ಗಂಭೀರ್-ಹೊಸ ನಾಯಕನ ಆಯ್ಕೆ!

Published : Nov 05, 2018, 04:37 PM IST
ರಣಜಿ ನಾಯಕತ್ವದಿಂದ ಕೆಳಗಿಳಿದ ಗಂಭೀರ್-ಹೊಸ ನಾಯಕನ ಆಯ್ಕೆ!

ಸಾರಾಂಶ

ದಹೆಲಿ ರಣಜಿ ತಂಡದ ನಾಯಕ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದಾರೆ. ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ದಿಢೀರ್ ನಿರ್ಧಾರಕ್ಕೆ  ಕಾರಣಗಳೇನು? ಇಲ್ಲಿದೆ.

ನವದೆಹಲಿ(ನ.05): ದೆಹಲಿ ರಣಜಿ ತಂಡದ ನಾಯಕತ್ವದಿಂದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಕೆಳಗಿಳಿದಿದ್ದಾರೆ. ಯುವಕರಿಗೆ ಅವಕಾಶ ಹಾಗೂ ಯುವ ನಾಯಕರನ್ನ ಬೆಳೆಸುವ ನಿಟ್ಟಿನಲ್ಲಿ ಗೌತಮ್ ಗಂಭೀರ್ ಈ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಇದೀಗ ದೆಹಲಿ ತಂಡಕ್ಕೆ ಹೊಸ ನಾಯಕನನ್ನ ಆಯ್ಕೆ ಮಾಡಲಾಗಿದೆ.

ಗಂಭೀರ್‌ನಿಂದ ತೆರವಾದ ದೆಹಲಿ ರಣಜಿ ತಂಡದ ನಾಯಕ ಸ್ಥಾನಕ್ಕೆ ಯುವ ಕ್ರಿಕೆಟಿಗ ನಿತೀಶ್ ರಾಣಾ ಆಯ್ಕೆಯಾಗಿದ್ದಾರೆ. ಧ್ರುವ್ ಶೊರೆಯ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ದೆಹಲಿ ಆಯ್ಕೆ ಸಮಿತಿ ಬಳಿಕ ಗಂಭೀರ್ ತಾವು ನಾಯಕತ್ವದಿಂದ ಕೆಳೆಗಿಳಿಯುವುದಾಗಿ ಸೂಚಿಸಿದ್ದರು. ಇಷ್ಟೇ ಅಲ್ಲ, ಯುವಕರಿಗೆ ಅವಕಾಶ ನೀಡೋ ನಿಟ್ಟಿನಲ್ಲಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.

ನೂತನ ನಾಯಕ ನಿತೀಶ್ ರಾಣ 24 ಪ್ರಥಮ ದರ್ಜೆ ಪಂದ್ಯಗಳಿಂದ 1574 ರನ್ ಸಿಡಿಸಿದ್ದಾರೆ. 46.29ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ರಾಣ, 4 ಶತಕ ಹಾಗೂ 6 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ