
ಡೆಹರಾಡೂನ್(ನ.05): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆ ತಮ್ಮ 30ನೇ ಹುಟ್ಟುಹಬ್ಬವನ್ನ ಆಚಿರಿಸಿದ್ದಾರೆ. ಉತ್ತರಖಂಡದ ಹರಿದ್ವಾರದಲ್ಲಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ತಡ ರಾತ್ರಿ ಕೊಹ್ಲಿ ಹುಟ್ಟು ಹಬ್ಬ ಆಚರಿಸಿದ ಬಳಿಕ ಪತ್ನಿ ಅನುಷ್ಕಾ ಶರ್ಮಾ ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕೊಹ್ಲಿಯನ್ನ ಹುಟ್ಟಿಸಿದ ದೇವರಿಗೆ ಧನ್ಯವಾದ ಎಂದು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಕೊಹ್ಲಿ ಜೊತೆಗಿನ ಫೋಟೋ ಪೋಸ್ಟ್ ಮಾಡಿದ್ದಾರೆ. ಹರಿದ್ವಾರದ ಅನಂತ್‌ಧಾಮ್ ಆಶ್ರಮಕ್ಕೆ ಕೊಹ್ಲಿ ದಂಪತಿ ಇಂದು ಭೇಟಿ ನೀಡಲಿದ್ದಾರೆ. ಇಲ್ಲಿನ ಅನಂತ್ ಬಾಬಾ, ಅನುಷ್ಕಾ ಕುಟುಂಬದ ಆಧ್ಯಾತ್ಮಿಕ ಗುರು ಆಗಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ, ನ.7ರ ವರೆಗೂ ಡೆಹರಾಡುನ್‌ನಲ್ಲೇ ಉಳಿಯಲಿದ್ದು, ಅವರಿಗೆ ವಿಶೇಷ ಭದ್ರತೆ ನೀಡಲಾಗುತ್ತಿದೆ.
ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಆದರೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೊಹ್ಲಿ ತಂಡಕ್ಕೆ ವಾಪಾಸ್ಸಾಗಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.