ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!

Published : Aug 06, 2019, 05:48 PM IST
ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!

ಸಾರಾಂಶ

ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮಾತ್ರವಲ್ಲ, ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡ ಮೂಗು ತುರಿಸಿದ್ದಾರೆ. ಹಲವು ಬಾರಿ ಕಾಶ್ಮೀರ ಕುರಿತು ಟ್ವೀಟ್ ಮಾಡಿ  ವಿವಾದ ಸೃಷ್ಟಿಸಿರುವ ಆಫ್ರಿದಿ ಇದೀಗ ಆರ್ಟಿಕಲ್ 370 ರದ್ದು ಕುರಿತು ಟ್ವೀಟ್ ಮಾಡಿದ್ದಾರೆ. ಆದರೆ ಇದಕ್ಕೆ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.   

ನವದೆಹಲಿ(ಆ.06): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಇವರಿಬ್ಬರ ಸಮರ ಮಾತ್ರ ಮುಗಿದಿಲ್ಲ. ಅನ್ ಫೀಲ್ಡ್‌ನಲ್ಲಿ ಸ್ಲೆಡ್ಜಿಂಗ್ ಮೂಲಕ ಗಮನಸೆಳೆದಿದ್ದ ಈ ಬದ್ಧವೈರಿಗಳು, ವಿದಾಯದ ಬಳಿಕ ಟ್ವಿಟರ್ ಮೂಲಕ ಗುದ್ದಾಟ ನಡೆಸುತ್ತಿದ್ದಾರೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿದ ಭಾರತದ ನಿರ್ಧಾರಕ್ಕೆ ಅಫ್ರಿದಿ ಮೂಗು ತುರಿಸಿದ್ದಾರೆ. ಇದಕ್ಕೆ ಸಂಸದ ಗಂಭೀರ್ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಗೌತಮ್ ಗಂಭೀರ್ ಮೂರ್ಖ-ನೂತನ ಸಂಸದನ ತಿವಿದ ಶಾಹಿದ್ ಆಫ್ರಿದಿ!

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಶಾಹಿದ್ ಅಫ್ರಿದಿ ಮತ್ತೆ ಕಾಶ್ಮೀರ ಖ್ಯಾತೆ ತೆಗೆದಿದ್ದಾರೆ. ನಮ್ಮೆಲ್ಲರಿಗೆ ಸ್ವಾತಂತ್ರ್ಯವಿರುವಂತೆ,  ಕಾಶ್ಮೀರಿಗರಿಗೆ ವಿಶ್ವಸಂಸ್ಥೆ ನಿರ್ಣಣಯದ ಪ್ರಕಾರ ಅವರ ಹಕ್ಕುಗಳನ್ನು ನೀಡಬೇಕು. ಇತಂಹ ಸಮಸ್ಯೆಗಳನ್ನು ಪರಿಹರಿಸಲು ಇರುವ ವಿಶ್ವಸಂಸ್ಥೆ ಯಾಕೆ ನಿದ್ದೆಮಾಡುತ್ತಿದೆ. ಅಪ್ರಚೋದಿತ ದಾಳಿ, ಹತ್ಯೆ, ಅಪರಾಧಗಳು ಕಾಶ್ಮೀರದಲ್ಲಿ ತಾಂಡವವಾಡುತ್ತಿದೆ. ಮಾನವೀಯತೆಯ ವಿರುದ್ದ ನಡೆಯುತ್ತಿರುವ ದಾಳಿ ಇದು. ತಕ್ಷಣವೇ ಅಮೆರಿಕಾ ಮಧ್ಯಪ್ರವೇಶಿಸಬೇಕು ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ಮಾನಸಿಕ ಚಿಕಿತ್ಸೆ ಕೊಡಿಸುತ್ತೇನೆ, ಭಾರತಕ್ಕೆ ಬನ್ನಿ: ಅಫ್ರಿದಿಗೆ ಗಂಭೀರ್ ಆಹ್ವಾನ

ಅಫ್ರಿದಿ ಟ್ವೀಟ್ ಮಾಡಿದ ಬೆನ್ನಲ್ಲೇ, ಗಂಭೀರ್ ತಿರುಗೇಟು ನೀಡಿದ್ದಾರೆ. ಶಾಹಿದ್ ಅಫ್ರಿದಿ ಮತ್ತೆ ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮಾನವೀಯತೆಯ ವಿರುದ್ಧ ಅಪ್ರಚೋದಿತ ದಾಳಿ, ಅಪರಾಧಗಳು ನಡೆಯುತ್ತಿವೆ ನಿಜ. ಈ ವಿಚಾರವನ್ನು ಪ್ರಸ್ತಾಪಿಸಿರುವುದಕ್ಕೆ ಮೆಚ್ಚುಗೆ ಇದೆ. ಆದರೆ ಈ ಎಲ್ಲಾ ಹತ್ಯೆ, ದಾಳಿಗಳು ನಡೆಯುತ್ತಿರುವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಎಂದು ಹೇಳಲು ಅಫ್ರಿದಿ ಮರೆತಿದ್ದಾರೆ. ಆದರೆ ಹೆದರಬೇಡಿ, ಶೀಘ್ರದಲ್ಲೇ pok ಸಮಸ್ಯೆಯನ್ನೂ ಬಗೆಹರಿಸುತ್ತೇವೆ ಎಂದು ಗಂಭೀರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಈ ಹಿಂದೆಯೂ ಶಾಹಿದ್ ಅಫ್ರಿದಿ ಖ್ಯಾತೆ ತೆಗೆದಿದ್ದಾರೆ. ಕಾಶ್ಮೀರದಲ್ಲಿನ ಹತ್ಯೆ, ಪಾಕಿಸ್ತಾನಕ್ಕೆ ಕಾಶ್ಮೀರವನ್ನು ನಿರ್ವಹಿಸಲು ಸಾಧ್ಯವೇ ಅನ್ನೋ ಟ್ವೀಟ್  ವಿವಾದಕ್ಕೂ ಕಾರಣವಾಗಿತ್ತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!