ತಂದೆ ಚಿಕಿತ್ಸೆಗೆ ಸಹಾಯ ಮಾಡಿ; ಯುವತಿ ಮನವಿಗೆ ಗಂಭೀರ್ ಸ್ಪಂದನೆ!

Published : Sep 16, 2019, 06:39 PM IST
ತಂದೆ ಚಿಕಿತ್ಸೆಗೆ ಸಹಾಯ ಮಾಡಿ; ಯುವತಿ ಮನವಿಗೆ ಗಂಭೀರ್ ಸ್ಪಂದನೆ!

ಸಾರಾಂಶ

ತಂದೆಯ ಚಿಕಿತ್ಸೆಗೆ ಸಹಾಯ ಮಾಡಿ ಎಂಬ ಮನವಿಗೆ ಗೌತಮ್ ಗಂಭೀರ್ ಸ್ಪಂದಿಸಿದ್ದಾರೆ. ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡುವಂತೆ ಯುವಿಗೆ ಮನವಿ ಮಾಡಿದ್ದಾಳೆ. 

ನವದೆಹಲಿ(ಸೆ.16): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ,  ಶಾಸಕ ಗೌತಮ್ ಗಂಭೀರ್ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿದ್ದಾರೆ. ನೆರವು ಕೇಳಿದವರಿಗೆ ಗಂಭೀರ್ ತಕ್ಷಣ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ತಂದೆಯ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಯುವತಿಯ ಮನವಿಗೆ ಗಂಭೀರ್ ಸ್ಪಂದಿಸಿದ್ದಾರೆ. ಈ ಮೂಲಕ ಮತ್ತೆ ಗಂಭೀರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದನ್ನೂ ಓದಿ: ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!

ಉನ್ನತಿ ಮದನ್ ಅನ್ನೋ ಯುವತಿ, ಸರಣಿ ಟ್ವೀಟ್ ಮೂಲಕ ಗಂಭೀರ್ ಬಳಿ ಸಹಾಯ ಯಾಚಿಸಿದ್ದಳು. ತನ್ನ ತಂದೆಯನ್ನು ಚಿಕಿತ್ಸೆಗೆಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದೆ. ಆದರೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಅನ್ನೋ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ್ದಾರೆ. ಇತರ ಹಲವು ಸರ್ಕಾರಿ ಆಸ್ಪತ್ರೆಗೆ ತಂದೆಯನ್ನು ಕರೆದುಕೊಂಡು ಹೋಗಿದ್ದೇನೆ. ಆದರೆ ಯಾರೂ ಕೂಡ ಚಿಕಿತ್ಸೆ ನೀಡುತ್ತಿಲ್ಲ. ತಂದೆಗೆ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ ಗಂಭೀರ್ ಎಂದು ಟ್ವೀಟ್ ಮಾಡಿದ್ದರು.

 

ಇದನ್ನೂ ಓದಿ: ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

ಬಳಿಕ ತಂದೆಯ ಚಿಕಿತ್ಸೆ ನಿಲ್ಲಿಸಲಾಗಿದೆ. ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನನ್ನಲ್ಲಿ ಹಣವಿಲ್ಲ. ತಂದೆಗೆ ನಾನು ಮತ್ತು ನನ್ನ 11 ವರ್ಷದ ತಮ್ಮ ಇಬ್ಬರೆ ಊರುಗೋಲು.  ಗಂಭೀರ್ ನನಗೆ ಸಹಾಯ ಮಾಡಿ. ಏಮ್ಸ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿ ಎಂದು ಟ್ವಿಟರ್ ಮೂಲಕ ಮನವಿ ಮಾಡಿದ್ದಳು.

ಯುವಿಯ ಮನವಿ ನೋಡಿದ ಗಂಭೀರ್, ಟ್ವೀಟ್ ಮೂಲಕ ತಕ್ಷಣವೇ ನಿಮ್ಮ ದೂರವಾಣಿ ಸಂಖ್ಯೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಉನ್ನತಿ ತನ್ನ ಮೊಬೈಲ್ ನಂಬರ್ ಟ್ವೀಟ್ ಮೂಲಕ ನೀಡಿದ್ದಾರೆ. ಇದೀಗ ಉನ್ನತಿ ತಂದೆ ಶೀಘ್ರವೇ ಚೇತರಿಸಿಕೊಳ್ಳಲಿ ಅನ್ನೋ ಪ್ರಾರ್ಥನೆಗಳು ಟ್ವಿಟರ್ ಮೂಲಕ ಬರುತ್ತಿವೆ.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್