ಟೆನಿಸ್ ಶ್ರೇಯಾಂಕ: ಎರಡು ವಿಭಾಗದಲ್ಲೂ ಅಗ್ರಸ್ಥಾನ ಪಡೆದ ಸ್ಪೇನ್ ಆಟಗಾರರು

By Suvarna Web DeskFirst Published Sep 12, 2017, 2:51 PM IST
Highlights

ಸ್ಪೇನ್ ಆಟಗಾರರಾದ ಎಡಗೈ ಆಟಗಾರ ರಾಫೆಲ್ ನಡಾಲ್ ವಿಶ್ವ ನಂಬರ್ ಒನ್ ಪಟ್ಟ ಕಾಯ್ದುಕೊಂಡರೆ, ಮಹಿಳಾ ಸಿಂಗಲ್ಸ್ ವಿಶ್ವ ನಂ.1 ಸ್ಥಾನವನ್ನು ಗಾರ್ಬೈನ್ ಮುಗುರುಜಾ ಅಲಂಕರಿಸಿದ್ದಾರೆ.

ಬೆಂಗಳೂರು(ಸೆ.12): ಪುರುಷ ಹಾಗೂ ಮಹಿಳಾ ಟೆನಿಸ್ ಸಿಂಗಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಸ್ಪೇನ್ ಆಟಗಾರರೇ ಮೊದಲ ಸ್ಥಾನ ಪಡೆದಿದ್ದಾರೆ.

ಸ್ಪೇನ್ ಆಟಗಾರರಾದ  ಎಡಗೈ ಆಟಗಾರ ರಾಫೆಲ್ ನಡಾಲ್ ವಿಶ್ವ ನಂಬರ್ ಒನ್ ಪಟ್ಟ ಕಾಯ್ದುಕೊಂಡರೆ, ಮಹಿಳಾ ಸಿಂಗಲ್ಸ್ ವಿಶ್ವ ನಂ.1 ಸ್ಥಾನವನ್ನು ಗಾರ್ಬೈನ್ ಮುಗುರುಜಾ ಅಲಂಕರಿಸಿದ್ದಾರೆ. ನೂತನ ಶ್ರೇಯಾಂಕ ಪಟ್ಟಿ ಪ್ರಕಟಗೊಂಡಿದ್ದು, ಜೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೊವಾ ಮೊದಲ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು ಯುಎಸ್ ಓಪನ್ ಪ್ರಶಸ್ತಿ ಗೆದ್ದ ಸ್ಲೋನ್ ಸ್ಟೀಫನ್ಸ್ 83ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.ಪುರುಷರ ಪಟ್ಟಿಯಲ್ಲಿ ಫೆಡರರ್ ಎರಡನೇ ಸ್ಥಾನದಲ್ಲಿದ್ದರೆ, ಮರ್ರೆ 3, ಜ್ವೆರೇವ್ 4ನೇ ಸ್ಥಾನ ಪಡೆದಿದ್ದಾರೆ. ಹಾಗೆಯೇ ಜೋಕೋವಿಚ್ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

click me!