French Open Badminton: ಕಿದಂಬಿ ಶ್ರೀಕಾಂತ್, ಲಕ್ಷ್ಯ ಸೆನ್‌ಗೆ ಸೋಲಿನ ಶಾಕ್

By Kannadaprabha News  |  First Published Oct 26, 2023, 10:10 AM IST

ಸೇನ್‌ ವಿಶ್ವ ನಂ.44, ಫ್ರಾನ್ಸ್‌ನ ಅರ್ನಾಡ್‌ ಮೆರ್ಕೆಲೆಗೆ 15-21, 18-21ರಲ್ಲಿ ಶರಣಾದರು. ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.


ರೆನ್ನೆಸ್‌(ಫ್ರಾನ್ಸ್‌): ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್‌ ಹಾಗೂ ಕಿದಂಬಿ ಶ್ರೀಕಾಂತ್‌ ತಮ್ಮ ಕಳಪೆ ಪ್ರದರ್ಶನ ಮುಂದುವರಿಸಿದ್ದು, ಫ್ರೆಂಚ್ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ. ಮಾಜಿ ವಿಶ್ವ ನಂ.1 ಶ್ರೀಕಾಂತ್‌ ವಿಶ್ವ ನಂ.25, ಫ್ರಾನ್ಸ್‌ನ ಟೊಮಾ ಪೊಪೊವ್‌ ವಿರುದ್ಧ 17-21, 15-21ರಲ್ಲಿ ಪರಾಭವಗೊಂಡರು.

ಈ ವರ್ಷ 16ನೇ ಟೂರ್ನಿಯಲ್ಲಿ 8ನೇ ಬಾರಿಗೆ ಅವರು ಮೊದಲ ಸುತ್ತಲ್ಲೇ ನಿರ್ಗಮಿಸಿದರು. ಇನ್ನು ಸೇನ್‌ ವಿಶ್ವ ನಂ.44, ಫ್ರಾನ್ಸ್‌ನ ಅರ್ನಾಡ್‌ ಮೆರ್ಕೆಲೆಗೆ 15-21, 18-21ರಲ್ಲಿ ಶರಣಾದರು. ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.

Latest Videos

undefined

ಏಷ್ಯನ್‌ ಶೂಟಿಂಗ್‌ ಕೂಟ: ಸ್ಕೀಟ್‌ ಚಿನ್ನ ಗೆದ್ದ ಭಾರತ

ಚಾಂಗ್ವೊನ್‌(ದ.ಕೊರಿಯಾ): ಇಲ್ಲಿ ನಡೆಯುತ್ತಿರುವ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದ್ದು, 4 ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಬುಧವಾರ ಅನಂತ್‌ಜೀತ್‌ ಸಿಂಗ್‌, ಗುರ್ಜೋತ್‌ ಹಾಗೂ ಅಂಗದ್‌ವೀರ್‌ ಸಿಂಗ್‌ ಅವರಿದ್ದ ಪುರುಷರ ಸ್ಕೀಟ್‌ ತಂಡಕ್ಕೆ ಚಿನ್ನ ಒಲಿಯಿತು. ತಂಡ ಒಟ್ಟು 358 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಇನ್ನು, 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಸರಬ್‌ಜೋತ್‌ ಸಿಂಗ್‌-ಸುರಭಿ ರಾವ್‌ ಬೆಳ್ಳಿ ಜಯಿಸಿದರು. ಕಿರಿಯರ ವಿಭಾಗದಲ್ಲಿ ಶುಭಂ ಬಿಸ್ಲಾ-ಸೈನ್ಯಂ ಜೋಡಿ 10 ಮೀ. ಏರ್‌ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಕಂಚು ಪಡೆದರು.

World Cup 2023: ಆಸೀಸ್‌ ಪ್ರಹಾರಕ್ಕೆ ಬೆಚ್ಚಿದ ನೆದರ್ಲೆಂಡ್‌, ವಿಶ್ವಕಪ್‌ ಇತಿಹಾಸದಲ್ಲೇ ದೊಡ್ಡ ಗೆಲುವು!

ರಾಷ್ಟ್ರೀಯ ಗೇಮ್ಸ್‌: ರಾಜ್ಯ ನೆಟ್‌ಬಾಲ್‌ ತಂಡಕ್ಕೆ ಬೆಳ್ಳಿ

ಪಣಜಿ: ಇಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಮತ್ತೊಂದು ಪದಕ ಲಭಿಸಿದೆ. ಬುಧವಾರ ನಡೆದ ಮಹಿಳೆಯರ ನೆಟ್‌ಬಾಲ್‌ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ ಫೈನಲ್‌ನಲ್ಲಿ ಹರ್ಯಾಣ ವಿರುದ್ದ 52-58 ಅಂಕಗಳ ವೀರೋಚಿತ ಸೋಲು ಎದುರಾಯಿತು. ಸದ್ಯ ಕರ್ನಾಟಕ ಕೂಟದಲ್ಲಿ 4 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಕ್ಕೆ 2 ಚಿನ್ನ, 1 ಕಂಚು ಲಭಿಸಿತ್ತು. ಮಹಾರಾಷ್ಟ್ರ 3 ಚಿನ್ನ ಸೇರಿ 12 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

'ಬಾಬರ್ ಅಜಂರನ್ನು ನಾಯಕತ್ವದಿಂದ ಕೆಳಗಿಳಿಸಿ ಈತನಿಗೆ ಪಟ್ಟ ಕಟ್ಟಿ': ಪಾಕ್ ತಂಡದಲ್ಲಿ ಹೊಸ ಕಂಪನ

ಇಂದು ಕೂಟಕ್ಕೆ ಮೋದಿ ಚಾಲನೆ

ಕ್ರೀಡಾಕೂಟದ ಕೆಲ ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿದ್ದರೂ, ಅಧಿಕೃತ ಉದ್ಘಾಟನೆ ಗುರುವಾರ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಫಟೋರ್ಡಾದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೇಮ್ಸ್‌ಗೆ ಚಾಲನೆ ನೀಡಲಿದ್ದಾರೆ. ಸರ್ಫಿಂಗ್ ಪಟು ಕಾಟ್ಯಾ ಕೊಯೆಲೋ ಕ್ರೀಡಾಕೂಟದ ಟಾರ್ಚ್‌ ಪ್ರಧಾನಿಗೆ ಹಸ್ತಾಂತರಿಸಲಿದ್ದಾರೆ. ಸುಮಾರು 5 ಗಂಟೆಗಳ ಕಾಲ ಸಮಾರಂಭ ನಡೆಯಲಿದೆ.
 

click me!