ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಲ್ಲಿ ಇಗಾ, ರಬೈಕೆನಾ ಶುಭಾರಂಭ
2021ರ ಚಾಂಪಿಯನ್ ಬಾರ್ಬೊರಾ ಕ್ರೇಜಿಕೋವಾಗೆ ಸೋಲು
ವಿಶ್ವ ನಂ.1 ಸ್ವಿಯಾಟೆಕ್, ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ವಿರುದ್ಧ ವಿರುದ್ಧ ಜಯಭೇರಿ
ಪ್ಯಾರಿಸ್(ಜೂ.01): ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಹಾಗೂ 4ನೇ ಶ್ರೇಯಾಂಕಿತೆ ಎಲೈನಾ ರಬೈಕೆನಾ ಶುಭಾರಂಭ ಮಾಡಿದ್ದಾರೆ. ಆದರೆ 2021ರ ಚಾಂಪಿಯನ್ ಬಾರ್ಬೊರಾ ಕ್ರೇಜಿಕೋವಾ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದ್ದಾರೆ.
ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.1 ಸ್ವಿಯಾಟೆಕ್, ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ವಿರುದ್ಧ ವಿರುದ್ಧ 6-4, 6-0 ಅಂತರದಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲಿ ಇಗಾ ಅಮೆರಿಕದ ಕ್ಲೈರ್ ಲಿಯು ವಿರುದ್ಧ ಆಡಲಿದ್ದಾರೆ. ಇನ್ನು ಹಾಲಿ ವಿಂಬಲ್ಡನ್ ಚಾಂಪಿಯನ್, ಕಜಕಸ್ತಾನದ ರಬೈಕೆನಾ ಚೆಕ್ ಗಣರಾಜ್ಯದ ಬ್ರೆಂಡಾ ಪ್ರುವಿರ್ಟೋವಾ ಅವರನ್ನು 6-4, 6-2 ಅಂತರದಲ್ಲಿ ಮಣಿಸಿದರು. ಆದರೆ 13ನೇ ಶ್ರೇಯಾಂಕಿತೆ ಕ್ರೇಜಿಕೋವಾ ಉಕ್ರೇನ್ನ ಲೆಸಿಯಾ ತ್ಸುರೆಂಕೊ ವಿರುದ್ಧ 2-6, 4-6 ಸೆಟ್‌ಗಳಲ್ಲಿ ಪರಾಭವಗೊಂಡರು.
undefined
ಸಿಟ್ಸಿಪಾಸ್ 3ನೇ ಸುತ್ತಿಗೆ: ಪುರುಷರ ಸಿಂಗಲ್ಸ್ನಲ್ಲಿ 2021ರ ರನ್ನರ್-ಅಪ್, ಗ್ರೀಕ್‌ನ ಸ್ಟೆಫಾನೊಸ್ ಸಿಟ್ಸಿಪಾಸ್ ಸ್ಪೇನ್‌ನ ಕ್ಯಾರ್ಬಲೆಸ್ ಬೀನಾ ವಿರುದ್ಧ ಗೆದ್ದು 3ನೇ ಸುತ್ತಿಗೇರಿದರು. 3ನೇ ಶ್ರೇಯಾಂಕಿತ ಅಮೆರಿಕದ ಜೆಸ್ಸಿಕಾ ಪೆಗುಲಾ ಮಹಿಳಾ ಸಿಂಗಲ್ಸ್ನಲ್ಲಿ 3ನೇ ಸುತ್ತು ತಲುಪಿದರು.
ಸಾಕೇತ್-ಯೂಕಿ 2ನೇ ಸುತ್ತಿಗೆ ಲಗ್ಗೆ!
ಪುರುಷರ ಡಬಲ್ಸ್ನಲ್ಲಿ ಕಣಕ್ಕಿಳಿದಿದ್ದ ಭಾರತ ತಾರಾ ಜೋಡಿ ಸಾಕೇತ್ ಮೈನೇನಿ ಹಾಗೂ ಯೂಕಿ ಭಾಂಬ್ರಿ 2ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಬುಧವಾರ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಎನ್ಜೋ ಕೊಯುಕಾಡ್-ಆರ್ಥರ್ ರಿಂಡೆರ್ನೆಕ್ ವಿರುದ್ಧ 6-3, 6-2 ಸೆಟ್ಗಳಿಂದ ಜಯಗಳಿಸಿದರು. ಆದರೆ ಜೀವನ್ ಹಾಗೂ ಶ್ರೀರಾಮ್ ಬಾಲಾಜಿಗೆ ಮೊದಲ ಸುತ್ತಿನಲ್ಲೇ ಸೋಲು ಎದುರಾಯಿತು. ಈ ಜೋಡಿ ಬೆಲಾರುಸ್ನ ಇಲ್ಯಾ ಇವಾಷ್ಕಾ-ಆಸ್ಪ್ರೇಲಿಯಾದ ಅಲೆಕ್ಸಿ ಪೋಪಿರಿನ್ ವಿರುದ್ಧ 6-3, 6-4 ನೇರ ಸೇಟ್‌ಗಳಿಂದ ಪರಾಭವಗೊಂಡಿತು.
French Open: ಜೋಕೋವಿಚ್ 2ನೇ ಸುತ್ತಿಗೆ ಲಗ್ಗೆ
ರಾಜಕೀಯ ಹೇಳಿಕೆ: ಮತ್ತೆ ವಿವಾದದಲ್ಲಿ ಜೋಕೋವಿಚ್
ಪ್ಯಾರಿಸ್: 22 ಗ್ರ್ಯಾನ್‌ಸ್ಲಾಂಗಳ ಒಡೆಯ, ಸರ್ಬಿಯಾದ ನೋವಾಕ್ ಜೋಕೋವಿಚ್ ರಾಜಕೀಯ ವಿಚಾರದ ಮೂಲಕ ಫ್ರೆಂಚ್ ಓಪನ್ನಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಟೆನಿಸ್ ವಿಶ್ವ ಫೆಡರೇಶನ್(ಐಟಿಎಫ್) ಹಾಗೂ ಫ್ರಾನ್ಸ್ ಕ್ರೀಡಾ ಸಚಿವಾಲಯದಿಂದ ಎಚ್ಚರಿಕೆಗೆ ಗುರಿಯಾಗಿದ್ದಾರೆ. ಕೊಸೊವೊ ಪ್ರದೇಶ 2008ರಲ್ಲೇ ಸರ್ಬಿಯಾದಿಂದ ಸ್ವತಂತ್ರಗೊಂಡರೂ, ಇದನ್ನು ಸರ್ಬಿಯಾ ಒಪ್ಪುತ್ತಿಲ್ಲ ಮತ್ತು ಆಗಾಗ ಘರ್ಷಣೆಗಳು ನಡೆಯುತ್ತಲೇ ಇದೆ.
ಈ ಬಗ್ಗೆ ತಮ್ಮ ಮೊದಲ ಸುತ್ತಿನ ಗೆಲುವಿನ ಬಳಿಕ ಜೋಕೋ ಕ್ಯಾಮರಾದಲ್ಲಿ ‘ಕೊಸೊವೊ ಸರ್ಬಿಯಾದ ಹೃದಯವಿದ್ದಂತೆ. ಹಿಂಸೆ ನಿಲ್ಲಿಸಿ’ ಎಂದು ಬರೆದಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಜೋಕೋ ಟೆನಿಸ್ ನಿಯಮ ಮೀರಬಾರದು. ರಾಜಕೀಯಗಳಿಂದ ದೂರವಿರಬೇಕು ಎಂದು ಐಟಿಎಫ್ ತಾಕೀತು ಮಾಡಿದೆ.