ಫ್ರೆಂಚ್‌ ಓಪನ್‌ಗೆ ಮಳೆ ಕಾಟ!

Published : Jun 06, 2019, 11:19 AM IST
ಫ್ರೆಂಚ್‌ ಓಪನ್‌ಗೆ ಮಳೆ ಕಾಟ!

ಸಾರಾಂಶ

ಬುಧವಾರ ಜೋಕೋವಿಚ್‌, 5ನೇ ಶ್ರೇಯಾಂಕಿತ ಜರ್ಮನಿಯ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಸೆಣಸಬೇಕಿತ್ತು. ಹಾಲೆಪ್‌ಗೆ ಅಮೆರಿಕದ ಅಮಾಂಡ ಅನಿಸಿಮೊವಾ ವಿರುದ್ಧ ಪಂದ್ಯವಿತ್ತು. ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಗುರುವಾರಕ್ಕೆ ಮುಂದೂಡಲಾಗಿದ್ದು, ಪಂದ್ಯಗಳು 2 ಗಂಟೆ ಮುಂಚಿತವಾಗಿಯೇ ಆರಂಭಗೊಳ್ಳಲಿದೆ. 

ಪ್ಯಾರಿಸ್‌(ಜೂ.06): ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನ ಆಯೋಜಕರ ತಲೆಬಿಸಿ ಹೆಚ್ಚಾಗಿದೆ. ಬುಧವಾರ ಇಡೀ ದಿನ ಮಳೆ ಸುರಿದ ಕಾರಣ, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಸಿಮೋನಾ ಹಾಲೆಪ್‌ ಹಾಗೂ ಪುರುಷರ ಸಿಂಗಲ್ಸ್‌ನ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ರ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಸೇರಿ ನಿಗದಿಯಾಗಿದ್ದ ಎಲ್ಲಾ ಪಂದ್ಯಗಳನ್ನು ರದ್ದುಗೊಳಿಸಬೇಕಾಯಿತು.

ಬುಧವಾರ ಜೋಕೋವಿಚ್‌, 5ನೇ ಶ್ರೇಯಾಂಕಿತ ಜರ್ಮನಿಯ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಸೆಣಸಬೇಕಿತ್ತು. ಹಾಲೆಪ್‌ಗೆ ಅಮೆರಿಕದ ಅಮಾಂಡ ಅನಿಸಿಮೊವಾ ವಿರುದ್ಧ ಪಂದ್ಯವಿತ್ತು. ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಗುರುವಾರಕ್ಕೆ ಮುಂದೂಡಲಾಗಿದ್ದು, ಪಂದ್ಯಗಳು 2 ಗಂಟೆ ಮುಂಚಿತವಾಗಿಯೇ ಆರಂಭಗೊಳ್ಳಲಿದೆ. 

ಸೆಮಿಫೈನಲ್‌, ಫೈನಲ್‌ ಪ್ರವೇಶಿಸುವ ನೆಚ್ಚಿನ ಟೆನಿಸಿಗರು ಎನಿಸಿರುವ ಜೋಕೋವಿಚ್‌, ಹಾಲೆಪ್‌ ಸತತ 3 ದಿನ ಪಂದ್ಯಗಳನ್ನಾಡುವ ಸಾಧ್ಯತೆ ಇದೆ. ಒಂದೊಮ್ಮೆ ಅನಿವಾರ್ಯವೆನಿಸಿದರೆ ಮಹಿಳಾ ಸಿಂಗಲ್ಸ್‌ ಫೈನಲ್‌ ಪಂದ್ಯವನ್ನು ಶನಿವಾರದ ಬದಲು ಭಾನುವಾರ ನಡೆಸುವುದಾಗಿ ಟೂರ್ನಿ ನಿರ್ದೇಶತಕ ಗಯ್‌ ಫರ್ಗೆಟ್‌ ಹೇಳಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Playoffs: ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?