10ನೇ ಬಾರಿ ಕ್ವಾರ್ಟರ್‌ಗೇರಿ ಜೋಕೋವಿಚ್‌ ದಾಖಲೆ!

Published : Jun 04, 2019, 10:29 AM IST
10ನೇ ಬಾರಿ ಕ್ವಾರ್ಟರ್‌ಗೇರಿ ಜೋಕೋವಿಚ್‌ ದಾಖಲೆ!

ಸಾರಾಂಶ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸತತ 10 ವರ್ಷ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ನೋವಾಕ್‌ ಜೋಕೋವಿಚ್‌ ನಿರ್ಮಿಸಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ...

ಪ್ಯಾರಿಸ್‌(ಜೂ.04): ನೋವಾಕ್‌ ಜೋಕೋವಿಚ್‌ ಸೋಮವಾರ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸತತ 10 ವರ್ಷ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆದರು. ವಿಶ್ವ ನಂ.1, ಸರ್ಬಿಯಾದ ಜೋಕೋವಿಚ್‌ 4ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ ವಿರುದ್ಧ 6-3,6-2,6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಒಂದೇ ಸಮಯದಲ್ಲಿ ಎಲ್ಲಾ 4 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವತ್ತ ಜೋಕೋವಿಚ್‌ ದಾಪುಗಾಲಿರಿಸಿದ್ದಾರೆ. ಒಟ್ಟಾರೆ ಫ್ರೆಂಚ್‌ ಓಪನ್‌ನಲ್ಲಿ ಜೋಕೋವಿಚ್‌ಗಿದು 13ನೇ ಕ್ವಾರ್ಟರ್‌ ಫೈನಲ್‌ ಪಂದ್ಯವಾಗಲಿದೆ.

ನಡಾಲ್‌ಗೆ ನಿಶಿಕೋರಿ ಸವಾಲು: 7ನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಕೇ ನಿಶಿಕೋರಿ, 4ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಬೆನೋಯಿ ಪೇರ್‌ ವಿರುದ್ಧ 6-2, 6-7, 6-2,6-7,7-5 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಅಂತಿಮ ಸೆಟ್‌ನಲ್ಲಿ 3-5 ಗೇಮ್‌ಗಳಿಂದ ಹಿಂದಿದ್ದ ನಿಶಿಕೋರಿ ಸತತ 4 ಗೇಮ್‌ಗಳನ್ನು ಗೆದ್ದು ಪಂದ್ಯ ವಶಪಡಿಸಿಕೊಂಡರು. ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ ಆಟಗಾರ ಹಾಲಿ ಚಾಂಪಿಯನ್‌ ರಾಫೆಲ್‌ ನಡಾಲ್‌ ವಿರುದ್ಧ ಸೆಣಸಲಿದ್ದಾರೆ.

ಕ್ವಾರ್ಟರ್‌ಗೆ ಕೀಸ್‌, ಬಾರ್ಟಿ

ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ನವೊಮಿ ಒಸಾಕ ಹಾಗೂ ಸೆರೆನಾ ವಿಲಿಯಮ್ಸ್‌ ವಿರುದ್ಧ ಗೆದ್ದು ಅಚ್ಚರಿ ಮೂಡಿಸಿದ್ದ ಆಟಗಾರ್ತಿಯರ ಓಟ ಮುಕ್ತಾಯಗೊಂಡಿತು. ಒಸಾಕ ವಿರುದ್ಧ ಗೆದ್ದಿದ್ದ ಚೆಕ್‌ ಗಣರಾಜ್ಯದ ಕ್ಯಾತರೀನಾ ಸಿನಿಯಾಕೊವಾ, 14ನೇ ಶ್ರೇಯಾಂಕಿತೆ ಅಮೆರಿಕದ ಮ್ಯಾಡಿಸನ್‌ ಕೀಸ್‌ ವಿರುದ್ಧ 2-6, 4-6 ಸೆಟ್‌ಗಳಲ್ಲಿ ಸೋಲುಂಡರು. ಸತತ 2ನೇ ಬಾರಿಗೆ ಕೀಸ್‌ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ಗೇರಿದರು.

ಸೆರೆನಾ ವಿರುದ್ಧ ಗೆದ್ದಿದ್ದ ಅಮೆರಿಕದ ಸೋಫಿ ಕೆನಿನ್‌, 8ನೇ ಶ್ರೇಯಾಂಕಿತೆ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ವಿರುದ್ಧ 3-6, 6-3, 0-6 ಸೆಟ್‌ಗಳಲ್ಲಿ ಸೋಲುಂಡರು. ಕ್ವಾರ್ಟರ್‌ ಫೈನಲ್‌ನಲ್ಲಿ ಕೀಸ್‌ ಹಾಗೂ ಬಾರ್ಟಿ ಎದುರಾಗಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಹೀರೋ, ಈ ಬಾರಿಯ ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಝೀರೋ ಆಗಿದ್ದೇಕೆ?
ಟೂರ್ನಿಯಲ್ಲಿ ಏಳನೇ ಸೋಲು ಕಾಣುತ್ತಿದ್ದಂತೆಯೇ ಅಚ್ಚರಿ ಹೇಳಿಕೆ ಕೊಟ್ಟ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ!