ವಿಶ್ವಕಪ್ 2019: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್- 2 ಬದಲಾವಣೆ ಮಾಡಿದ ಪಾಕ್!

By Web DeskFirst Published Jun 3, 2019, 2:56 PM IST
Highlights

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಲೀಗ್ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ.  ಟಾಸ್ ಗೆದ್ದಿರುವ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳು ಬದಲಾವಣೆ ಮಾಡಿದೆ. 

ನಾಟಿಂಗ್‌ಹ್ಯಾಮ್(ಜೂ.03): ವಿಶ್ವಕಪ್ ಲೀಗ್ ಟೂರ್ನಿ ಆರಂಭದಲ್ಲೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. 6ನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತ ಪಾಕ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ.

 

England bring in Mark Wood in place of Liam Plunkett, while Pakistan replace Imad Wasim and Haris Sohail with Asif Ali and Shoaib Malik. pic.twitter.com/1CgcN3Cuhq

— Cricket World Cup (@cricketworldcup)

 

ಹ್ಯಾರಿಸ್ ಸೊಹೈಲ್ ಹಾಗೂ ಇಮಾದ್ ವಾಸಿಮ್ ಬದಲು ಹಿರಿಯ ಆಲ್ರೌಂಡರ್ ಶೋಯೆಬ್ ಮಲಿಕ್ ಹಾಗೂ ಆಸಿಫ್ ಆಲಿ ಪಾಕ್ ತಂಡ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಲಿಯಾಮ ಪ್ಲಂಕೆಟ್ ಬದಲು ಮಾರ್ಕ್ ವುಡ್ ತಂಡ ಸೇರಿಕೊಂಡಿದ್ದಾರೆ.

click me!