ಟೀಂ ಇಂಡಿಯಾದ ಅತ್ಯುತ್ತಮ ನಾಯಕ ಯಾರು ಅನ್ನೋ ಚರ್ಚೆಗೆ ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕಲ್ಲ. ಸಂದರ್ಭ ಹಾಗೂ ಸರಣಿಗಳಿಗೆ ಅನುಸಾರವಾಗಿ ಒಬ್ಬೊಬ್ಬರು ಅತ್ಯುತ್ತಮರಾಗಿದ್ದಾರೆ. ಇದೀಗ ಗೌತಮ್ ಗಂಭೀರ್ ತಾನು ಕಂಡ ಅತ್ಯುತ್ತಮ ನಾಯಕ ಯಾರು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ದೆಹಲಿ(ಡಿ.9): ಎಲ್ಲಾ ಮಾದರಿ ಕ್ರಿಕೆಟ್‌ನಿಂದ ವಿದಾಯ ಹೇಳಿದ ಗೌತಮ್ ಗಂಭೀರ್ ಇದೀಗ ಟೀಂ ಇಂಡಿಯಾದ ಒಂದೊಂದೆ ಸ್ಫೋಟಕ ಮಾಹಿತಿ ಬಹಿರಂಗ ಮಾಡುತ್ತಿದ್ದಾರೆ. ಧೋನಿ ನಾಯಕತ್ವ ವಿರುದ್ಧ ಹರಿಹಾಯ್ದು ಗಂಭೀರ್ ಇದೀಗ ಅತ್ಯುತ್ತಮ ನಾಯಕ ಯಾರು ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ.
ಗೌತಮ್ ಗಂಭೀರ್ ಪ್ರಕಾರ ಟೀಂ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಸೌರವ್ ಗಂಗೂಲಿಯೂ ಅಲ್ಲ, ಎಂ.ಎಸ್.ಧೋನಿಯೂ ಇಲ್ಲ. ಅದು ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ ಎಂದು ಗಂಭೀರ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
. slams 's captaincy decisions during 2012 tri-series in Australia. Listen in.
()https://t.co/Nounxo6IKQ pic.twitter.com/WnzoTkeX3g
ಕುಂಬ್ಳೆ ಒಂದು ವರ್ಷ ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದರು. ಕುಂಬ್ಳೆ ನಾಯಕತ್ವದಲ್ಲಿ ಗಂಭೀರ್ 5 ಟೆಸ್ಟ್ ಪಂದ್ಯ ಆಡಿದ್ದಾರೆ. ಕುಂಬ್ಳೆಯಿಂದ ಸಾಕಷ್ಟು ಕಲಿತಿದ್ದೇನೆ. ನಾನು ನೋಡಿದ ನಾಯಕರಲ್ಲಿ ಕುಂಬ್ಳೆ ಗ್ರೇಟ್ ಕ್ಯಾಪ್ಟನ್ ಎಂದಿದ್ದಾರೆ.