ಭಾರತ ಹಾಕಿ ಆಯ್ಕೆ ಸಮಿತಿಗೆ ಸರ್ದಾರ್‌ ಸಿಂಗ್‌

By Web DeskFirst Published Jan 17, 2019, 1:03 PM IST
Highlights

‘ಭಾರತೀಯ ಹಾಕಿಗೆ ಸೇವೆ ಸಲ್ಲಿಸಲು ಸದಾ ಸಿದ್ಧವಾಗಿದ್ದೇನೆ. ಆಯ್ಕೆಗಾರನ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ. ಸವಾಲನ್ನು ಸಮರ್ಥವಾಗಿ ನಿಭಾಯಿಸಲಿದ್ದೇನೆ ಎನ್ನುವ ನಂಬಿಕೆ ಇದೆ’ ಎಂದು ಸರ್ದಾರ್‌ ಹೇಳಿದ್ದಾರೆ.

ನವದೆಹಲಿ[ಜ.17]: ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್‌ ಸಿಂಗ್‌, ಕರ್ನಾಟಕದ ಬಿ.ಪಿ.ಗೋವಿಂದ ನೇತೃತ್ವದ 13 ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಆಯ್ಕೆ ಸಮಿತಿಗೆ ನೇಮಕಗೊಂಡಿದ್ದಾರೆ. 

ಅಂತಾರಾಷ್ಟ್ರೀಯ ಹಾಕಿಗೆ ಸರ್ದಾರ್​​ ಗುಡ್ ಬೈ

‘ಭಾರತೀಯ ಹಾಕಿಗೆ ಸೇವೆ ಸಲ್ಲಿಸಲು ಸದಾ ಸಿದ್ಧವಾಗಿದ್ದೇನೆ. ಆಯ್ಕೆಗಾರನ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ. ಸವಾಲನ್ನು ಸಮರ್ಥವಾಗಿ ನಿಭಾಯಿಸಲಿದ್ದೇನೆ ಎನ್ನುವ ನಂಬಿಕೆ ಇದೆ’ ಎಂದು ಸರ್ದಾರ್‌ ಹೇಳಿದ್ದಾರೆ. ಆಯ್ಕೆ ಸಮಿತಿಯಲ್ಲಿ ಭಾರತದ ಮಾಜಿ ಆಟಗಾರ, ರಾಜ್ಯದ ಎ.ಬಿ.ಸುಬ್ಬಯ್ಯ ಸಹ ಇದ್ದಾರೆ. ಈ ಆಯ್ಕೆ ಸಮಿತಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳನ್ನು ಆಯ್ಕೆ ಮಾಡಲಿದೆ.

2020ರ ಟೋಕಿಯೋ ಒಲಿಂಪಿಕ್ಸ್’ವರೆಗೆ ಭಾರತ ತಂಡವನ್ನು ಪ್ರತಿನಿಧಿಸಲು ಬಯಸಿದ್ದ ಸರ್ದಾರ್ ಸಿಂಗ್, ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್’ನಲ್ಲಿ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಇದರ ಬೆನ್ನಲ್ಲೇ ಸರ್ದಾರ್ ದಿಢೀರ್ ನಿವೃತ್ತಿ ಘೋಷಿಸಿದ್ದರು.

click me!