ಮ್ಯಾಚ್ ಫಿಕ್ಸಿಂಗ್: 6 ಕ್ರಿಕೆಟಿಗರಿಗೆ ಜೈಲು ಶಿಕ್ಷೆ?

Published : Jul 15, 2018, 01:31 PM ISTUpdated : Jul 15, 2018, 04:00 PM IST
ಮ್ಯಾಚ್ ಫಿಕ್ಸಿಂಗ್: 6 ಕ್ರಿಕೆಟಿಗರಿಗೆ ಜೈಲು ಶಿಕ್ಷೆ?

ಸಾರಾಂಶ

ಮ್ಯಾಚ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿರೋ 6 ಕ್ರಿಕೆಟಿಗರು ಇದೀಗ ಜೈಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದಾರೆ. ಆಗಸ್ಟ್ 22ರಂದು ಕಳ್ಳಾಟದ ತೀರ್ಪು ಹೊರಬೀಳಲಿದೆ. ಹಾಗಾದರೆ ಕಳ್ಳಾಟ ನಡೆಸಿದ 6 ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ

ಪ್ರೆಟೋರಿಯಾ(ಜು.15): ಕ್ರಿಕೆಟ್‌ನಿಂದ ಫಿಕ್ಸಿಂಗ್ ಭೂತವನ್ನ ದೂರವಿಡಲು ಐಸಿಸಿ ಅವಿರತ ಪ್ರಯತ್ನ ನಡೆಸುತ್ತಿದೆ. ಆದರೆ ಕೆಲ ಘಟನೆಗಳು ಕ್ರಿಕೆಟ್ ಆಟಕ್ಕೆ ಕಳಂಕ ತರುತ್ತಿದೆ. ಹೀಗೆ ಕಳ್ಳಾಟ ನಡೆಸಿ ಸಿಕ್ಕಿ ಬಿದ್ದಿರೋ 6 ಕ್ರಿಕೆಟಿಗರು ಜೈಲು ಶಿಕ್ಷೆಯ ಭೀತಿಯಲ್ಲಿದ್ದಾರೆ.

 2015ರಲ್ಲಿ ಸೌತ್ಆಫ್ರಿಕಾ ದೇಸಿ ಟೂರ್ನಿಯಲ್ಲಿ ಕಳ್ಳಾಟ ನಡೆಸಿದ ಸೌತ್ಆಫ್ರಿಕಾ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್ ಗುಲಾಮ್ ಬೋಡಿ ಸೇರಿದಂತೆ 6 ಕ್ರಿಕೆಟಿಗರು ಇದೀಗ ಜೈಲು ಶಿಕ್ಷೆಯ ಭೀತಿಯಲ್ಲಿದ್ದಾರೆ.  2015ರಲ್ಲಿ ಸೌತ್ಆಫ್ರಿಕಾದ ದೇಸಿ ಟೂರ್ನಿಯಲ್ಲಿ ಗುಲಾಮ್ ಬೋಡಿ, ಅಲ್ವಿರೋ ಪೀಟರ್ಸನ್, ತಮಿ ಸೊಲೆಕಿಲೆ, ಲೊನ್ವಾಬೋ ಸೊಟ್ಸೊಬೆ,  ಜೀನ್ ಸೈಮೆಸ್, ಪುಮಿ ಮಟ್ಶಿಕ್ವೆ, ಹಾಗೂ ಎಥಿ ಎಮ್‌ಬಾಲಾಟಿ ವಿರುದ್ಧ ಪ್ರಕಣ ದಾಖಲಾಗಿತ್ತು.

ಗುಲಾಮ್ ಬೋಡಿಗೆ ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ 20 ವರ್ಷ ನಿಷೇಧ ಹೇರಿದೆ. ಇದೀಗ ಪೆಟ್ರೋರಿಯಾ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆಗಸ್ಟ್ 22 ರಂದು ಅಂತಿಮ ತೀರ್ಪು ಹೊರಬೀಳೋ ಸಾಧ್ಯತೆ ಇದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Milind Soman: ವರ್ಷ 60, ಆರು ದಿನಗಳ ಅಂತರದಲ್ಲಿ 2 ಐರನ್ಮ್ಯಾನ್! ವಯಸ್ಸು ಕೇವಲ ಸಂಖ್ಯೆ ಎಂದ ಮಿಲಿಂದ್ ಸೋಮನ್
Cricket: ಕೊಹ್ಲಿ ಜೊತೆ ಗಲಾಟೆ, ಬೂಮ್ರಾಗೆ ಸಿಕ್ಸರ್ ಬಾರಿಸಿದ್ದ ಆಸೀಸ್ ಪಂಟರ್‌ಗೆ ಭಾರತದ ವೇಗಿ ತುಷಾರ್ ದೇಶಪಾಂಡೆ ತಕ್ಕ ಶಾಸ್ತಿ!