ಫಿಫಾ ವಿಶ್ವಕಪ್: ಇಂಗ್ಲೆಂಡ್ ಫೈನಲ್ ಕನಸಿಗೆ ಬ್ರೇಕ್ ಹಾಕುತ್ತಾ ಕ್ರೊವೇಷಿಯಾ..?

 |  First Published Jul 11, 2018, 9:59 AM IST

1998ರಲ್ಲಿ ಕೊನೆ ಬಾರಿಗೆ ಸೆಮಿಫೈನಲ್‌ನಲ್ಲಿ ಆಡಿದ್ದ ಕ್ರೊವೇಷಿಯಾ, ಚೊಚ್ಚಲ ಬಾರಿಗೆ ವಿಶ್ವಕಪ್ ಫೈನಲ್ ಅನುಭವವನ್ನು ಪಡೆಯಲು ತವಕಿಸುತ್ತಿದೆ. ಆದರೆ ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ವಿಶ್ವಕಪ್ ಟೂರ್ನಿಯಲ್ಲಿ ಮುಂದೆ ಸಾಗುತ್ತಿರುವ ಕ್ರೊವೇಷಿಯಾಗೆ ಇಂಗ್ಲೆಂಡ್ ತಂಡದಿಂದ ಕಠಿಣ ಸವಾಲು ಎದುರಾಗಲಿದೆ. ಕ್ರೊವೇಷಿಯಾ ನಾಕೌಟ್ ಹಂತದ ಎರಡೂ ಪಂದ್ಯಗಳನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದಿದೆ. ಡೆನ್ಮಾರ್ಕ್ ಹಾಗೂ ರಷ್ಯಾ ವಿರುದ್ಧ ಕೂದಲೆಳೆಯ ಅಂತರದಲ್ಲಿ ಜಯಿಸಿ, ಸೆಮೀಸ್‌ನಲ್ಲಿ ಸ್ಥಾನ ಪಡೆದಿದೆ.


ಮಾಸ್ಕೋ[ಜು.11]: 28 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್, ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ 52 ವರ್ಷಗಳ ನಂತರ ಫೈನಲ್‌ಗೇರಲು ಕಾತರಿಸುತ್ತಿದೆ. 1966ರಲ್ಲಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್, ಆ ಬಳಿಕ ಪ್ರಶಸ್ತಿ ಸುತ್ತಿಗೇರಿಲ್ಲ. ಈ ವರ್ಷ ‘ಕಪ್ ನಮ್ದೇ’ ಎನ್ನುತ್ತಿರುವ ಇಂಗ್ಲಿಷ್ ತಂಡ, ಇಂದು ಇಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾವನ್ನು ಎದುರಿಸಲಿದೆ.

1998ರಲ್ಲಿ ಕೊನೆ ಬಾರಿಗೆ ಸೆಮಿಫೈನಲ್‌ನಲ್ಲಿ ಆಡಿದ್ದ ಕ್ರೊವೇಷಿಯಾ, ಚೊಚ್ಚಲ ಬಾರಿಗೆ ವಿಶ್ವಕಪ್ ಫೈನಲ್ ಅನುಭವವನ್ನು ಪಡೆಯಲು ತವಕಿಸುತ್ತಿದೆ. ಆದರೆ ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ವಿಶ್ವಕಪ್ ಟೂರ್ನಿಯಲ್ಲಿ ಮುಂದೆ ಸಾಗುತ್ತಿರುವ ಕ್ರೊವೇಷಿಯಾಗೆ ಇಂಗ್ಲೆಂಡ್ ತಂಡದಿಂದ ಕಠಿಣ ಸವಾಲು ಎದುರಾಗಲಿದೆ. ಕ್ರೊವೇಷಿಯಾ ನಾಕೌಟ್ ಹಂತದ ಎರಡೂ ಪಂದ್ಯಗಳನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದಿದೆ. ಡೆನ್ಮಾರ್ಕ್ ಹಾಗೂ ರಷ್ಯಾ ವಿರುದ್ಧ ಕೂದಲೆಳೆಯ ಅಂತರದಲ್ಲಿ ಜಯಿಸಿ, ಸೆಮೀಸ್‌ನಲ್ಲಿ ಸ್ಥಾನ ಪಡೆದಿದೆ. 2 ಬಾರಿ ಅದೃಷ್ಟ ಲೂಕಾ ಮೋಡ್ರಿಚ್ ತಂಡದ ಕೈಹಿಡಿದೆ. ಆದರೆ ಇಂಗ್ಲೆಂಡ್‌ನಿಂದ ಎದುರಾಗುವ ಸವಾಲು ವಿಭಿನ್ನ. ಹ್ಯಾರಿ ಕೇನ್, ಆಶ್ಲೆ ಯಂಗ್, ಜಾನ್ ಸ್ಟೋನ್ಸ್, ಜೆಸ್ಸಿ ಲಂಗಾರ್ಡ್, ಎರಿಕ್ ಡೈಯರ್, ಡೆಲೆ ಅಲಿ ಹೀಗೆ ಘಟಾನುಘಟಿಗಳ ದಂಡೇ ಇದೆ.

Latest Videos

undefined

ಕ್ರೊವೇಷಿಯಾ ವಿಶ್ವದ ಇಬ್ಬರು ಶ್ರೇಷ್ಠ ಮಿಡ್ ಫೀಲ್ಡರ್‌ಗಳಾದ ಮೋಡ್ರಿಚ್, ಇವಾನ್ ರಟಿಕಿಚ್’ರನ್ನು ಹೊಂದಿದೆ. ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿದ್ದ ತಂಡ, ನಾಕೌಟ್
ನಲ್ಲಿ ಅದೃಷ್ಟದ ಬೆನ್ನೇರಿ ಸವಾರಿ ಮಾಡಿತ್ತು. ಪೆನಾಲ್ಟಿ ಶೂಟೌಟ್ ಹೊರತು ಪಡಿಸಿ ತಂಡ ಒಟ್ಟು 10 ಗೋಲು ದಾಖಲಿಸಿದೆ. ಮತ್ತೊಂದೆಡೆ ಇಂಗ್ಲೆಂಡ್ 11 ಗೋಲು ಗಳಿಸಿದೆ. ಇಂಗ್ಲೆಂಡ್ ಗೋಲ್ ಕೀಪರ್ ಪಿಕ್‌ಫೋರ್ಡ್ ಕೇವಲ 4 ಗೋಲು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಕ್ರೊವೇಷಿಯಾ ಸಹ ಶೂಟೌಟ್ ಹೊರತುಪಡಿಸಿ ಕೇವಲ 4 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಎರಡೂ ತಂಡಗಳ ಅಂಕಿ-ಅಂಶ ಒಂದೇ ರೀತಿ ಇದ್ದು, ಸಮಬಲದ ಪೈಪೋಟಿ ನಿರೀಕ್ಷೆ ಮಾಡಬಹುದಾಗಿದೆ.

ಇಂಗ್ಲೆಂಡ್ ಮೇಲೆ ಪಂಟರ್‌ಗಳ ದುಡ್ಡು!: 2ನೇ ಸೆಮೀಸ್‌ನಲ್ಲಿ ಕ್ರೊವೇಷಿಯಾಗಿಂತ ಇಂಗ್ಲೆಂಡ್ ಮೇಲೆ ಬುಕ್ಕಿಗಳು ಹೆಚ್ಚು ವಿಶ್ವಾಸ ಇರಿಸಿದ್ದಾರೆ ಎನ್ನಲಾಗಿದೆ. ಇಂಗ್ಲೆಂಡ್ ಇಲ್ಲಿ ತನಕ ಬರಲಿದೆ
ಎಂದು ಯಾರೂ ಊಹಿಸಿರಲಿಲ್ಲ. ಆದರೆ ತಂಡದ ಪ್ರದರ್ಶನ ಅತಿಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಟೀವಿ ರೇಟಿಂಗ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಯುರೋಪ್‌ನ ಬೆಟ್ಟಿಂಗ್ ವೆಬ್’ಸೈಟ್‌ಗಳಲ್ಲಿ ಇಂಗ್ಲೆಂಡ್ ಗೆಲ್ಲಲಿದೆ ಎಂದು ಬೆಟ್ ಕಟ್ಟುತ್ತಿರುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. 

click me!