ಫಿಫಾ ವಿಶ್ವಕಪ್ 2018: ಸೌ.ಕೊರಿಯಾ ವಿರುದ್ಧ ಸೋಲು-ಕಣ್ಣೀರಿನೊಂದಿಗೆ ಜರ್ಮನಿ ವಿದಾಯ

First Published Jun 27, 2018, 10:42 PM IST
Highlights

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಜರ್ಮನಿ  ಲೀಗ್ ಹಂತದಿಂದಲೇ ಹೊರಬಿದ್ದಿದೆ. ಸೌತ್ ಕೊರಿಯಾ ವಿರುದ್ಧ ಗೆಲುವಿಗಾಗಿ ಹೋರಾಟ ನಡೆಸಿದ ಜರ್ಮನಿ ಕಣ್ಣೀರಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಈ ರೋಚಕ ಹೋರಾಟ ಹೇಗಿತ್ತು. ಇಲ್ಲಿದೆ ಹೈಲೈಟ್ಸ್.

ರಷ್ಯಾ(ಜೂ.27): ಫಿಫಾ ವಿಶ್ವಕಪ್ ಟೂರ್ನಿಯ ಹಾಲಿ ಚಾಂಪಿಯನ್ ಜರ್ಮನಿ ಲೀಗ್ ಹಂತದಿಂದಲೇ ಹೊರಬಿದ್ದಿದೆ. ಈ ಮೂಲಕ ಕಳೆದ ಬಾರಿ ಚಾಂಪಿಯನ್ ಆಗಿ ಮೆರೆದಿದ್ದ ಜರ್ಮನಿ ಈ ಬಾರಿ ನಾಕೌಟ್ ಹಂತಕ್ಕೂ ಪ್ರವೇಶಿಸದೇ ಕಣ್ಣೀರಿನೊಂದಿಗೆ ಟೂರ್ನಿಗೆ  ವಿದಾಯ ಹೇಳಿದೆ.

ಸೌತ್ ಕೊರಿಯಾ ವಿರುದ್ಧ ನಡೆದ ರೋಚಕ ಹೋರಾಟದಲ್ಲಿ ಜರ್ಮನಿ ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ಪಟ್ಟಿತು. ಆದರೆ ಮೊದಲಾರ್ಧಲ್ಲಿ ಗೋಲು ದಾಖಲಾಗಲಿಲ್ಲ. ಇಷ್ಟೇ ಅಲ್ಲ ಕೊರಿಯಾ ತಂಡಕ್ಕೂ ಗೋಲು ಬಿಟ್ಟುಕೊಡಲಿಲ್ಲ. 

ದ್ವಿತಿಯಾರ್ಧದಲ್ಲಿ ಸೌತ್ ಕೊರಿಯಾ ಆಕ್ರಮಣ ತಡೆದ ಜರ್ಮನಿ ಗೋಲು ಬಿಟ್ಟುಕೊಡದಂತೆ ಎಚ್ಚರವಹಿಸಿತು. ಆದರೆ ಹೆಚ್ಚುವರಿ ಸಮಯದಲ್ಲಿ ಸೌತ್ ಕೊರಿಯಾ ಗೋಲು ಬಾರಿಸೋ ಮೂಲಕ ಜರ್ಮನಿಗೆ ಆಘಾತ ನೀಡಿತು. 90+2 ನೇ ನಿಮಿಷದಲ್ಲಿ ಕಿಮ್ ಯೊಂಗ್ ಗೋಲು ಬಾರಿಸೋ ಮೂಲಕ 1-0 ಮುನ್ನಡೆ ತಂದುಕೊಟ್ಟರು. ಸನ್ ಹೆಂಗ್ ಮಿನ್ 90+6ನೇ ನಿಮಿಷದಲ್ಲಿ ಗೋಲು ಬಾರಿಸಿ ಸೌತ್ ಕೋರಿಯಾ ತಂಡಕ್ಕೆ 2-0 ಅಂತರದ ರೋಚಕ ಗೆಲುವು ತಂದುಕೊಟ್ಟರು.

ಸೌತ್ ಕೊರಿಯಾ ವಿರುದ್ಧದ ಸೋಲಿನೊಂದಿಗೆ ಜರ್ಮನಿ ಟೂರ್ನಿಯಿಂದ ಹೊರಬಿತ್ತು. 2014ರಲ್ಲಿ ಚಾಂಪಿಯನ್ ತಂಡ ಜರ್ಮನಿ ಸೋಲು ಅನುಭವಿಸುತ್ತಿದ್ದಂತೆ, ಮೈದಾನದಲ್ಲೇ ಕಣ್ಣೀರಿಟ್ಟಿತು. ಸೋಲಿನೊಂದಿಗೆ ಫಿಫಾ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿತು.

click me!