ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ವೀಡನ್ ಹಾಗೂ ಮೆಕ್ಸಿಕೋ ತಂಡ ಗ್ರೂಪ್ ಏಫ್ ನಿಂದ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಆದರೆ ಇವರಿಬ್ಬರ ಹೋರಾಟದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಕಣ್ಣೀರಿನೊಂದಿಗೆ ಟೂರ್ನಿಗೆ ವಿದಾಯ ಹೇಳಿತು.
ರಷ್ಯಾ(ಜೂ.27): ಫಿಫಾ ವಿಶ್ವಕಪ್ ಟೂರ್ನಿಯ ಮೆಕ್ಸಿಕೋ ವಿರುದ್ಧದ ಪಂದ್ಯದಲ್ಲಿ ಸ್ವೀಡನ್ 3-0 ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ನಾಕೌಟ್ ಸ್ಟೇಜ್‌ಗೆ ಎಂಟ್ರಿಕೊಟ್ಟಿದೆ. ಸ್ವೀಡನ್ ವಿರುದ್ಧ ಸೋಲುಂಡ ಮೆಕ್ಸಿಕೋ ಕೂಡ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಮೊದಲಾರ್ಧದಲ್ಲಿ ಉಭಯ ತಂಡಗಳು ಅತ್ಯುತ್ತಮ ಹೋರಾಟ ನೀಡಿತು. ಆದರೆ ಗೋಲು ಮಾತ್ರ ದಾಖಲಾಗಲಿಲ್ಲ. ಹೀಗಾಗಿ ಫಸ್ಟ್ ಹಾಫ್ ಗೋಲಿಲ್ಲದೆ ಅಂತ್ಯವಾಯಿತು. ಇನ್ನು ದ್ವಿತಿಯಾರ್ಧಲ್ಲಿ ಸ್ವೀಡನ್ ಆರ್ಭಟ ಶುರುವಾಯಿತು. 50ನೇ ನಿಮಿಷದಲ್ಲಿ ಲುಡ್ವಿಗ್ ಅಗಸ್ಟಿನ್ಸನ್ ಗೋಲು ಬಾರಿಸಿ 1-0 ಮುನ್ನಡೆ ಸಾಧಿಸಿತು.
undefined
ಆಂಡ್ರೆಯಾಸ್ ಗ್ರಾನ್ಕ್ವಿಸ್ಟ್ 62ನೇ ನಿಮಿಷದಲ್ಲಿ ಗೋಲು ಬಾರಿಸೋ ಮೂಲಕ ಸ್ವೀಡನ್ 2-0 ಅಂತರದ ಮುನ್ನಡೆ ಪಡೆದುಕೊಂಡಿತು. ಮೊದಲೇ ಹಿನ್ನಡೆಯಲ್ಲಿದ್ದ ಮೆಕ್ಸಿಕೋ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ತಂಡದ ಎಡ್ಸೆನ್ ಅಲ್ವೆರೆಜ್ ಸ್ವಯಂ ಗೋಲು ಸಿಡಿಸಿ, ಸ್ವೀಡನ್ ಮುನ್ನಡೆಯನ್ನ 3-0 ಅಂತರಕ್ಕೆ ಏರಿಸಿದರು. ಈ ಮೂಲಕ ಸ್ವೀಡನ್ 3-0 ಅಂತರದ ಭರ್ಜರಿ ಗೆಲುವು ಸಾಧಿಸಿತು..