ಭಾರತ-ಐರ್ಲೆಂಡ್ ಟಿ20: ಐರ್ಲೆಂಡ್ ತಂಡಕ್ಕೆ 209 ರನ್ ಟಾರ್ಗೆಟ್

First Published Jun 27, 2018, 9:30 PM IST
Highlights

ಭಾರತ-ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೊತೆಯಾಟ ಹೇಗಿದೆ? ಭಾರತದ ಸ್ಕೋರ್ ಏಷ್ಟು? ಇಲ್ಲಿದೆ.

ಡಬ್ಲಿನ್(ಜೂ.27): ಡಬ್ಲಿನ್‌ನಲ್ಲಿ ನಡೆಯಯುತ್ತಿರುವ ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ  ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ನಿಗಧಿತ 20- ಓವರ್‌ಗಳಲ್ಲಿ 208 ರನ್ ಸಿಡಿಸಿದೆ. ಈ ಮೂಲಕ ಐರ್ಲೆಂಡ್ ತಂಡಕ್ಕೆ 209 ರನ್ ಟಾರ್ಗೆಟ್ ನೀಡಿದೆ.. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಐರ್ಲೆಂಡ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಶಿಖರ್ ಧವನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಭರ್ಜರಿ ಸಿಕ್ಸರ್ ಸಿಡಿಸೋ ಮೂಲಕ ಧವನ್ ಹಾಫ್ ಸೆಂಚುರಿ ಪೂರೈಸಿದರು. ಧವನ್ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 27 ಎಸೆತದಲ್ಲಿ ಧವನ್ ಅರ್ಧಶತಕ ಸಿಡಿಸಿದರು. ಧವನ್‌ಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ ಹಾಫ್ ಸೆಂಚರು ಸಿಡಿಸಿ ಸಂಭ್ರಮಿಸಿದರು. 

ಶತಕದತ್ತ ಮುನ್ನುಗ್ಗುತ್ತಿದ್ದ ಶಿಖರ್ ಧವನ್ 74 ರನ್ ಸಿಡಿಸಿ ಔಟಾದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಧವನ್, ಕೇವಲ 45 ಎಸೆತದಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿದರು. ಬಿರುಸಿನ ಹೊಡೆತಕ್ಕೆ ಯತ್ನಿಸಿದ ಧವನ್ ಕೆವಿನ್ ಒಬ್ರಿಯಾನ್ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ನಾಯಕ ವಿರಾಟ್ ಕೊಹ್ಲಿ ಬದಲು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಸುರೇಶ್ ರೈನಾ ಕೇವಲ 10 ರನ್ ಸಿಡಿಸಿ ಔಟಾದರು.  

ಎಂ ಎಸ್ ಧೋನಿ ಕೇವಲ 11 ರನ್ ಗಳಿಸಿ ಔಟಾದರು. ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರು. ಆದರೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 97 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 3 ರನ್‌ಗಳಿಂದ ಶತಕ ವಂಚಿತರಾದರು. ಆರಂಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ, ಇದೀಗ ದಿಢೀರ್ ವಿಕೆಟ್ ಕಳೆದುಕೊಂಡಿತು.  ಹೀಗಾಗಿ ಟೀಂ ಇಂಡಿಯಾ ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತು.

 

click me!