
1986ರ ಫಿಫಾ ವಿಶ್ವಕಪ್ ಹಲವು ವಿಚಾರಗಳಿಗೆ ಫುಟ್ಬಾಲ್ ಅಭಿಮಾನಿಗಳ ಮನದಲ್ಲಿ ಸದಾ ಉಳಿಯಲಿದೆ. ಮೆಕ್ಸಿಕೊ 1970ರ ಬಳಿಕ 2ನೇ ಬಾರಿಗೆ ಆತಿಥ್ಯ ವಹಿಸಿತು. ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 3-2 ಗೋಲುಗಳಿಂದ ಗೆಲುವು ಸಾಧಿಸಿದ ಅರ್ಜೆಂಟೀನಾ, 2ನೇ ಪ್ರಶಸ್ತಿ ಜಯಿಸಿತು.
1974ರಲ್ಲಿ ತಂಡ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. ಈ ವಿಶ್ವಕಪ್’ನಲ್ಲಿ ಅರ್ಜೆಂಟೀನಾ ತಂಡವನ್ನು ಡಿಗೂ ಮರಡೋನಾ ಮುನ್ನಡೆಸಿದ್ದರು. ಮರಡೋನಾರ ‘ಹ್ಯಾಂಡ್ ಆಫ್ ಗಾಡ್’ ಹಾಗೂ ಶತಮಾನದ ಗೋಲು ದಾಖಲಾಗಿದ್ದು ಇದೇ ವಿಶ್ವಕಪ್‌ನಲ್ಲಿ. ಈ ಆವೃತ್ತಿಯಲ್ಲೂ 24 ತಂಡಗಳು ಆಡಿದ್ದವು. ಕೆನಡಾ, ಡೆನ್ಮಾರ್ಕ್,ಇರಾಕ್ ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದವು. ಪಂದ್ಯಾವಳಿ ವೀಕ್ಷಿಸಲು ಕ್ರೀಡಾಂಗಣಗಳಿಗೆ ಒಟ್ಟು 23.9 ಲಕ್ಷ ಪ್ರೇಕ್ಷಕರು ಆಗಮಿಸಿದ್ದರು.
ಒಟ್ಟು 5 ಗೋಲು ದಾಖಲಿಸಿದ ಮರಡೋನಾ, ಇನ್ನೂ 5 ಗೋಲುಗಳಿಗೆ ನೆರವು ನೀಡಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಪಾತ್ರರಾದರು. ಕ್ರೀಡಾಂಗಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸುವ ‘ಮೆಕ್ಸಿಕನ್ ವೇವ್’ ಮೊದಲ ಬಾರಿಗೆ ಪರಿಚಿತಗೊಂಡಿದ್ದು ಇದೇ ವಿಶ್ವಕಪ್‌ನಲ್ಲಿ. 1986ರಲ್ಲಿ ಅರ್ಜೆಂಟೀನಾಗೆ 2ನೇ ವಿಶ್ವಕಪ್ ಪ್ರಶಸ್ತಿ
* ವರ್ಷ: 1986
* ಚಾಂಪಿಯನ್: ಅರ್ಜೆಂಟೀನಾ
* ರನ್ನರ್-ಅಪ್: ಪಶ್ಚಿಮ ಜರ್ಮನಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.