ಫಿಫಾ ವಿಶ್ವಕಪ್ ಟೂರ್ನಿಗೂ ಮುನ್ನ ಎದುರಾಯ್ತು ಸಂಕಷ್ಠ

 |  First Published Jun 8, 2018, 5:30 PM IST

ಫಿಫಾ ವಿಶ್ವಕಪ್ ಟೂರ್ನಿ ಆಯೋಜನೆಗೆ ಕೆಲದಿನಗಳಿರುವಾಗಲೇ, ರಶ್ಯಾ ಪ್ರಾಣಿ ಪ್ರೀಯರಿಂದ ಪ್ರತಿಭಟನೆ ಎಚ್ಚರಿಕೆ ರವಾನೆಯಾಗಿದೆ. ರಶ್ಯಾ ಫುಟ್ಬಾಲ್ ಉದ್ಘಾಟನೆಗೆ ಸಜ್ಜಾಗುತ್ತಿರುವಾಗಲೇ, ಇತ್ತ ಪ್ರಾಣಿ ಪ್ರೀಯರ ಪ್ರತಿಭಟನೆ ಆಯೋಜಕರಿಗೆ ತಲೆನೋವಾಗಿದೆ.


ರಶ್ಯಾ(ಜೂನ್.8): ಫಿಫಾ ಫುಟ್ಬಾಲಾ ವಿಶ್ವಕಪ್ ಟೂರ್ನಿಗೆ ಇನ್ನೇನು ಕೆಲ ದಿನಗಳು ಬಾಕಿ ಇರುವಾಗಲೇ ಸಂಕಷ್ಟ ಎದುರಾಗಿದೆ.  ಫಿಫಾ ವಿಶ್ವಕಪ್ ಫುಟ್ಬಾಲ್ ಆಯೋಜನೆಗೊಳ್ಳುತ್ತಿರುವ ರಶ್ಯಾದ 11 ನಗರಗಳಲ್ಲಿರುವ ಬಿದಿ ನಾಯಿಗಳನ್ನ ಕೊಲ್ಲಲು ಫಿಫಾ ಆಯೋಜಕರು ಸಜ್ಜಾಗಿದ್ದಾರೆ. ಆದರೆ ಫಿಫಾ ಆಯೋಜಕರ ನಿರ್ಧಾರಕ್ಕೆ ಪ್ರಾಣಿ ಪ್ರೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಫಿಫಾ ಆಯೋಜಕರ ನಿರ್ಧಾರದಿಂದ ಸಿಟ್ಟಿಗೆದ್ದಿರುವ ಪ್ರಾಣಿ ಪ್ರೀಯರು ಇದೀಗ ಅಭಿಯಾನ ಆರಂಭಿಸಿದ್ದಾರೆ. ಬಿದಿ ನಾಯಿಗಳನ್ನ ಕೊಲ್ಲಬೇಡಿ ಅಭಿಯಾನದಡಿ ಸುಮಾರು 19.5 ಲಕ್ಷ ಸಹಿ ಸಂಗ್ರಹಿಸಿದ್ದಾರೆ.

Latest Videos

ಬಿದಿ ನಾಯಿಗಳಿಗೆ ರಶ್ಯಾ ಅಧಿಕಾರಿಗಳು ವಿಷ ಹಾಕಿ ಕೊಲ್ಲುತ್ತಿದ್ದಾರೆ. ಕ್ರೀಡೆಗಾಗಿ ಅಪಾಯವಿಲ್ಲದ ನಾಯಿಗಳನ್ನ ನಿರ್ದಯವಾಗಿ ಕೊಲ್ಲುತ್ತಿರುವುದು ಸರಿಯಲ್ಲ ಎಂದು ನಗರ ಪ್ರಾಣಿ ರಕ್ಷಣಾ ಸಂಘದ ಅಧ್ಯಕ್ಷ ಎಕಟೆರಿನಾ ಡಿಮಿಟ್ರಿವಿಯಾ ಹೇಳಿದ್ದಾರೆ.

click me!