ಫಿಫಾ ವಿಶ್ವ ರಾರಯಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಫಿಫಾ ವಿಶ್ವ ರಾರಯಂಕಿಂಗ್‌ನ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಗ್ರಸ್ಥಾನ 2 ತಂಡಗಳಿಗೆ ಹಂಚಿಕೆಯಾಗಿದೆ.
ಲುಸಾನ್ನೆ, [ಸೆ.21]: ಫಿಫಾ ವಿಶ್ವ ರಾರಯಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಫಿಫಾ ವಿಶ್ವ ರಾರಯಂಕಿಂಗ್‌ನ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಗ್ರಸ್ಥಾನ 2 ತಂಡಗಳಿಗೆ ಹಂಚಿಕೆಯಾಗಿದೆ.
ಗುರುವಾರ ಬಿಡುಗಡೆಯಾದ ಫಿಫಾ ವಿಶ್ವ ರಾರಯಂಕಿಂಗ್ ಪಟ್ಟಿಯ ಅಗ್ರ ಸ್ಥಾನವನ್ನು ವಿಶ್ವ ಚಾಂಪಿಯನ್ ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಜಂಟಿಯಾಗಿ ಹಂಚಿಕೊಂಡಿವೆ. ಬೆಲ್ಜಿಯಂ ಮತ್ತು ಫ್ರಾನ್ಸ್ ತಂಡಗಳು ತಲಾ 1729 ಅಂಕಗಳನ್ನು ಹೊಂದಿವೆ.
ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್, ಬೆಲ್ಜಿಯಂ ತಂಡವನ್ನು ಸೋಲಿಸಿ ಫೈನಲ್‌ಗೇರಿತ್ತು. ಬ್ರೆಜಿಲ್(1663), ಕ್ರೊವೇಷಿಯಾ(1634) ಮತ್ತು ಉರಗ್ವೆ(1632) ಕ್ರಮವಾಗಿ ನಂತರದ 3 ಸ್ಥಾನಗಳನ್ನು ಪಡೆದಿವೆ. ಇನ್ನು ಭಾರತ 1244 ಪಾಯಿಂಟ್ಸ್‌ಗಳೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ 97ನೇ ಸ್ಥಾನದಲ್ಲಿದೆ,