ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಸುನಿಲ್ ಚೆಟ್ರಿ ಪಡೆ ವಿರೋಚಿತ ಸೋಲು ಅನುಭವಿಸಿ ಭಾರೀ ಒತ್ತಡಕ್ಕೆ ಸಿಲುಕಿತು. 2ನೇ ಚರಣದ ಪಂದ್ಯದಲ್ಲಿ ತಂಡ ಉತ್ತಮ ಗೋಲು ವ್ಯತ್ಯಾಸದೊಂದಿಗೆ ಗೆದ್ದರೆ ಮಾತ್ರ ಅಂತರ ವಲಯ ಫೈನಲ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗಲಿದೆ.
ಬೆಂಗಳೂರು[ಆ.23]: 2018-19ರ ಋುತುವಿನ ಆರಂಭದಲ್ಲೇ ಬೆಂಗಳೂರು ಎಫ್‌ಸಿ ಆಘಾತ ಅನುಭವಿಸಿದೆ. ಎಎಫ್‌ಸಿ ಕಪ್ ಅಂತರ ವಲಯ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯದಲ್ಲಿ ತುರ್ಕ್ಮೆನಿಸ್ತಾನದ ಆಲ್ಟಿನ್ ಅಸರ್ ತಂಡದ ವಿರುದ್ಧ 2-3 ಗೋಲುಗಳ ಸೋಲು ಅನುಭವಿಸಿತು. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಸುನಿಲ್ ಚೆಟ್ರಿ ಪಡೆ ವಿರೋಚಿತ ಸೋಲು ಅನುಭವಿಸಿ ಭಾರೀ ಒತ್ತಡಕ್ಕೆ ಸಿಲುಕಿತು.
2ನೇ ಚರಣದ ಪಂದ್ಯದಲ್ಲಿ ತಂಡ ಉತ್ತಮ ಗೋಲು ವ್ಯತ್ಯಾಸದೊಂದಿಗೆ ಗೆದ್ದರೆ ಮಾತ್ರ ಅಂತರ ವಲಯ ಫೈನಲ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗಲಿದೆ. ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದ 11ನೇ ನಿಮಿಷದಲ್ಲಿ ಆಲ್ಟಿನ್ ತಂಡ ಮುನ್ನಡೆ ಸಾಧಿಸಿತು. ಒರಾಜ್‌ಸಹೆಡೊವ್ ಬಾರಿಸಿದ ಆಕರ್ಷಕ ಗೋಲು, ಬಿಎಫ್‌ಸಿಯನ್ನು ಆತಂಕಕ್ಕೆ ಸಿಲುಕಿಸಿತು. 23ನೇ ನಿಮಿಷದಲ್ಲಿ ಆಲ್ಟಿನ್ ತನ್ನ ಮುನ್ನಡೆಯನ್ನು 2-0 ಗೇರಿಸಿಕೊಂಡಿತು. ಅನ್ನಾದುರ್ದೆವ್ ತಂಡದ ಪರ 2ನೇ ಗೋಲು ಗಳಿಸಿದರು.
46ನೇ ನಿಮಿಷದಲ್ಲಿ ಆಲ್ಟಿನ್ 3ನೇ ಗೋಲು ಬಾರಿಸಿತು. ಒರಾಜ್‌ಸಹೆಡೊವ್ ತಂಡದ ಮುನ್ನಡೆಯನ್ನು 3-0ಗೇರಿಸಿದರು. ರಾಹುಲ್ ಭೇಕೆ 63ನೇ ನಿಮಿಷದಲ್ಲಿ ಅಂತರವನ್ನು 1-3ಕ್ಕಿಳಿಸಿದರೆ, 88ನೇ ನಿಮಿಷದಲ್ಲಿ ಎರಿಕ್ ಪಾರ್ತಲು ಬಿಎಫ್‌ಸಿ ಪರ 2ನೇ ಗೋಲು ಗಳಿಸಿದರು. 90 ನಿಮಿಷಗಳ ಬಳಿಕ ಹೆಚ್ಚುವರಿ 5 ನಿಮಿಷಗಳಲ್ಲಿ ಎಷ್ಟೇ ಪ್ರಯತ್ನಿಸಿದರೂ ಬಿಎಫ್‌ಸಿ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.