
ಮಾಸ್ಕೋ[ಜು.15]: ತೀವ್ರ ಕುತೂಹಲದಿಂದ ಕೂಡಿರುವ 2018ರ ಫಿಫಾ ವಿಶ್ವಕಪ್’ನ ಮೊದಲಾರ್ಧ ಮುಕ್ತಾಯಯದ ವೇಳೆಗೆ ಫ್ರಾನ್ಸ್ 2-1 ಗೋಲುಗಳ ಮುನ್ನಡೆ ಸಾಧಿಸಿದೆ.
ಆರಂಭದಿಂದಲೇ ಕ್ರೊವೇಷಿಯಾ ಹಾಗೂ ಫ್ರಾನ್ಸ್ ಆಕ್ರಮಣಕಾರಿಯಾಟಕ್ಕೆ ಮುಂದಾದವು. ಪಂದ್ಯದ 18ನೇ ನಿಮಿಷದಲ್ಲೇ ಫ್ರಾನ್ಸ್ ಗೋಲುಗಳ ಖಾತೆ ತೆರೆಯಿತು. ಮರಿಯೋ ಮ್ಯಾಂಡ್’ಜೊವಿಕ್ ಫ್ರಾನ್ಸ್ ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದರು. ಆ ಬಳಿಕ ಪ್ರಬಲ ತಿರುಗೇಟು ನೀಡಿದ ಕ್ರೊವೇಷಿಯಾ 10 ನಿಮಿಷಗಳೊಳಗಾಗಿ ಗೋಲು ಬಾರಿಸಿ ಸಮಬಲ ಸಾಧಿಸಿತು. ಕ್ರವೇಷಿಯಾದ ಇವಾನ್ ಪೆರಿಸಿಕ್ 28ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ಆ ಬಳಿಕ ಪೆನಾಲ್ಟಿ ಅವಕಾಶ ಬಳಸಿಕೊಂಡ ಗ್ರೀಜ್’ಮನ್ ಗೋಲು ಸಿಡಿಸಿ ಫ್ರಾನ್ಸ್’ಗೆ 2-1ರ ಮುನ್ನಡೆ ಒದಗಿಸಿಕೊಟ್ಟರು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.