ಇಂದು ಇಂಗ್ಲೆಂಡ್ ಹಾಗೂ ಬೆಲ್ಜಿಯಂ ತಂಡಗಳು ಮೂರನೇ ಸ್ಥಾನಕ್ಕಾಗಿ ಕಾದಾಡಲಿವೆ. ಅದೇ ರೀತಿ 2018ರ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕಾಗಿ ಫ್ರಾನ್ಸ್ ಹಾಗೂ ಕ್ರೊವೇಷಿಯಾ ತಂಡಗಳು ಸೆಣಸಲಿವೆ.
ಮಾಸ್ಕೋ[ಜು.14]: ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೋ 2018ರ ಫುಟ್ಬಾಲ್ ವಿಶ್ವಕಪ್, ಇದು ವರೆಗಿನ ಶ್ರೇಷ್ಠ ವಿಶ್ವಕಪ್ ಎಂದು ಬಣ್ಣಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಇನ್ಫ್ಯಾಂಟಿನೋ, ರಷ್ಯಾದಲ್ಲಿ ನಡೆಯುತ್ತಿರುವ ಫುಟ್ಬಾಲ್ ಮಹಾಸಮರದ ಗುಣಮಟ್ಟ ಹಾಗೂ ಪಂದ್ಯಾವಳಿಯನ್ನು ಆಯೋಜಿಸಿರುವ ರೀತಿ ಅತ್ಯಂತ ಶ್ರೇಷ್ಠವಾಗಿದೆ ಎಂದರು. ‘ಈ ಬಾರಿಯ ವಿಶ್ವಕಪ್, ಈ ವರೆಗಿನ ಶ್ರೇಷ್ಠ ವಿಶ್ವಕಪ್ ಆಗಲಿದೆ ಎಂದು ನಾನು ಮೊದಲಿನಿಂದಲೂ ಹೇಳುತ್ತಿದೆ. ಈಗ ಇನ್ನಷ್ಟು ಆತ್ಮವಿಶ್ವಾಸದೊಂದಿಗೆ ಆ ಮಾತನ್ನು ಪುನರುಚ್ಚರಿಸಲು ಇಚ್ಛಿಸುತ್ತೇನೆ. ರಷ್ಯಾ ತನ್ನ ಆತಿಥ್ಯ ಗುಣದಿಂದ ಜಗತ್ತಿನ ಮನ ಗೆದ್ದಿದೆ’ ಎಂದು ಇನ್ಫ್ಯಾಂಟಿನೋ ಹೇಳಿದರು.
ಇಂದು ಇಂಗ್ಲೆಂಡ್ ಹಾಗೂ ಬೆಲ್ಜಿಯಂ ತಂಡಗಳು ಮೂರನೇ ಸ್ಥಾನಕ್ಕಾಗಿ ಕಾದಾಡಲಿವೆ. ಅದೇ ರೀತಿ 2018ರ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕಾಗಿ ಫ್ರಾನ್ಸ್ ಹಾಗೂ ಕ್ರೊವೇಷಿಯಾ ತಂಡಗಳು ಸೆಣಸಲಿವೆ.