
ಬೆಂಗಳೂರು(ಆ.26): ಪ್ರತಿ ಪಂದ್ಯ, ಪ್ರತಿ ಸರಣಿಯಲ್ಲಿ ಶತಕದ ಮೇಲೆ ಶತಕ. ದೇಸಿ ಕ್ರಿಕೆಟ್‌ನಲ್ಲಿ ಪ್ರಸಕ್ತ ವರ್ಷದಲ್ಲಿ 2000 ರನ್ ಸಾಧನೆ. ಇಷ್ಟಾದರು ಟೀಂ ಇಂಡಿಯಾದಲ್ಲಿ ಮಾತ್ರ ಅವಕಾಶವಿಲ್ಲ. ಇದು ಪ್ರತಿಭಾನ್ವಿತ ಬ್ಯಾಟ್ಸ್‌ಮನ್, ಕನ್ನಡಿಗ ಮಯಾಂಕ್ ಅಗರ್ವಾಲ್ ಪರಿಸ್ಥಿತಿ.
ಇಂಡಿಯಾ ಬಿ ತಂಡ ಪ್ರತಿನಿಧಿಸುತ್ತಿರುವ ಮಯಾಂಕ್ ಅಗರ್ವಾಲ್ ಮತ್ತೆ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಇಂಡಿಯಾ ಎ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಮಯಾಂಕ್ 114 ರನ್ ಸಿಡಿಸೋ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.
ಭರ್ಜರಿ ಫಾರ್ಮ್‌ನಲ್ಲಿರುವ ಮಯಾಂಕ್ ಅಗರ್ವಾಲ್ ಪ್ರಸಕ್ತ ವರ್ಷದಲ್ಲಿ 2000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಮಯಾಂಕ್ ಅದ್ಬುತ ಪ್ರದರ್ಶನ ನೀಡುತ್ತಿದ್ದರೂ, ಆಯ್ಕೆ ಸಮಿತಿ ಮಾತ್ರ ತಿರುಗಿ ನೋಡುತ್ತಿಲ್ಲ.
ಇಂಗ್ಲೆಂಡ್ ವಿರುದ್ದದ ಅಂತಿಮ 2 ಟೆಸ್ಟ್ ಪಂದ್ಯಕ್ಕೆ ಮಯಾಂಕ್ ಜೊತೆಗಿದ್ದ ಪೃಥ್ವಿಶಾ ಹಾಗೂ ಹನುಮಾ ವಿಹಾರಿಗೆ ಅವಕಾಶ ಸಿಕ್ಕಿದೆ. ಆದರೆ ಮಯಾಂಕ್ ಮತ್ತೆ ಕಾಯಬೇಕಿದೆ. ಹೀಗಾಗಿ ಮಯಾಂಕ್ ಅಗರ್ವಾಲ್‌ಗೆ ಅವಕಾಶ ನೀಡಿ ಎಂದು ಸಾಮಾಜಿ ಜಾಲತಾಣದಲ್ಲಿ ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.