ಏಷ್ಯನ್ ಗೇಮ್ಸ್ 2018: 100 ಮೀಟರ್ ಓಟದಲ್ಲಿ ಭಾರತಕ್ಕೆ ಬೆಳ್ಳಿ

By Web DeskFirst Published Aug 26, 2018, 7:57 PM IST
Highlights

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತ ಮತ್ತೆ ಪದಕ ಗೆದ್ದುಕೊಂಡಿದೆ.  8ನೇ ದಿನದ ಕ್ರೀಡಾಕೂಟದಲ್ಲಿ ಭಾರತೀಯರ ಪ್ರದರ್ಶನ ಹೇಗಿತ್ತು? ಯಾವ ಕ್ರೀಡೆಗಳಲ್ಲಿ ಭಾರತ ಪದಕ ಗೆದ್ದುಕೊಂಡಿದೆ? ಇಲ್ಲಿದೆ.

ಜಕರ್ತಾ(ಆ.26): ಏಷ್ಯನ್ ಗೇಮ್ಸ್ ಕ್ರೀಡಾಕೂಟದ 8ನೇ ದಿನ ಓಟದಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಮಹಿಳಾ 100 ಮೀಟರ್ ಓಟದಲ್ಲಿ ಭಾರತದ ದ್ಯುತಿ ಚಾಂದ್ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ.

 

News Flash: SILVER Medal for Dutee Chand (100m) clocking 11.32s
Yupeeeeee
Proud of you pic.twitter.com/GfU1pYhY69

— India@AsianGames2018 (@India_AllSports)

 

ಮಹಿಳೆಯರ 100 ಮೀಟರ ಓಟವನ್ನ ದ್ಯುತಿ ಚಾಂದ್ 11.32 ಸೆಕುಂಡ್‌ಗಳಲ್ಲಿ ಗುರಿ ತಲುಪೋ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಈ ಮೂಲಕ ಭಾರತ 10ನೇ ಬೆಳ್ಳಿ ಪದಕ ಸಂಪಾದಿಸಿತು. 

ಪುರುಷರ 10ಸಾವಿರ ಮೀಟರ್‌ನಲ್ಲಿ ಲಕ್ಷ್ಣಣ್ ಗೋವಿಂದನ್ ಕಂಚಿನ ಪದಕ ಗೆದ್ದಿದ್ದರು. ಆದರೆ ಲಕ್ಷ್ಮಣ್ ಅನರ್ಹಗೊಂಡ ಕಾರಣ, ಭಾರತ ಕಂಚಿನ ಪದಕದಿಂದ ವಂಚಿತವಾಯಿತು. 

ಭಾರತ 7 ಚಿನ್ನ, 10 ಬೆಳ್ಳಿ, 19 ಕಂಚಿನೊಂದಿಗೆ ಒಟ್ಟು 36 ಪದಕ ಗೆದ್ದು 9ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಚೀನಾ 76 ಚಿನ್ನ, 59 ಬೆಳ್ಳಿ ಹಾಗೂ 37 ಕಂಚಿನೊಂದಿಗೆ ಒಟ್ಟು 172 ಪದಕ ಗೆದ್ದಿದೆ

click me!