
ಜೈಪುರ(ಸೆ.03): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತರೂ, ನಾಯಕ ವಿರಾಟ್ ಕೊಹ್ಲಿ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೊಹ್ಲಿ ಮೇಲಿನ ಅಭಿಮಾನಿಗಳ ಪ್ರೀತಿ ಬಾಲಿವುಡ್ ಸುಯಿ ಧಾಗ ಚಿತ್ರದ ಪ್ರಮೋಶನ್ ವೇಳೆಯೂ ಕಂಡು ಬಂತು.
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಬಹು ನಿರೀಕ್ಷಿತ ಚಿತ್ರ ಸುಯಿ ಧಾಗ್ ಚಿತ್ರದ ಪ್ರಮೋಶನ್‌ಗಾಗಿ ಜೈಪುರಕ್ಕೆ ತೆರಳಿದ್ದರು. ಸ್ಟೇಜ್ ಮೇಲೆ ಬಂದ ಅನುಷ್ಕಾ ಹಾಗೂ ಚಿತ್ರದ ನಾಯಕ, ನಟ ವರುಣ್ ಧವನ್‌ಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು.
ಚಿತ್ರದ ಪ್ರಮೋಶನ್ ಕುರಿತು ಅನುಷ್ಕಾ ಮಾತನಾಡು ಮೈಕ್ ಹಿಡಿಯುತ್ತಿದ್ದಂತೆ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗಿದರು. ಅಭಿಮಾನಿಗಳ ಕೂಗಾಟಕ್ಕೆ ಅನುಷ್ಕಾಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ.
ಅಭಿಮಾನಿಗಳ ನಿಧಾನವಾಗಿ ಶಾಂತವಾಗುತ್ತಿದ್ದಂತೆ ಅನುಷ್ಕಾ ಶರ್ಮಾ ಎಲ್ಲರಿಗೂ ಕೊಹ್ಲಿ ಮೇಲೆ ಪ್ರಿತಿ ಇದೆ, ನನಗೂ ಇದೆ. ಎಲ್ಲರಿಗೂ ಕೊಹ್ಲಿಯ ನೆನಪಾಗುತ್ತಿದೆ. ನನಗೂ ಆಗುತ್ತಿದೆ ಎಂದು ಅನುಷ್ಕಾ ಮಾತು ಮುಗಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.