ಎಂ ಎಸ್ ಧೋನಿ ಹೆಸರಲ್ಲಿ ಅಮೆರಿಕ ಮಹಿಳೆಗೆ ವಂಚನೆ

By Web DeskFirst Published Sep 3, 2018, 11:19 AM IST
Highlights

ಟೀಂ ಇಂಡಿಯಾ ನಾಯಕ ಎಂ ಎಸ್ ಧೋನಿ ಹೆಸರಲ್ಲಿ ಅಮೆರಿಕಾ ಮಹಿಳೆಗೆ ಬರೋಬ್ಬರಿ 60 ಲಕ್ಷ ರೂಪಾಯಿ ವಂಚಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಅಷ್ಟಕ್ಕೂ ಅಮೆರಿಕಾ ಮಹಿಳೆಗೆ ಧೋನಿ ಹೆಸರಲ್ಲಿ ವಂಚಿಸಿದ್ದು ಯಾರು? ಏನಿದು ಪ್ರಕರಣ? ಇಲ್ಲಿದೆ.

ಪಾಟ್ನ(ಸೆ.03): ಈಗಿನ ಕಾಲದಲ್ಲಿ ಒಂದು ಕ್ಷಣ ಮೈಮೆರತರೆ ಸಾಕು, ಮರುಕ್ಷಣದಲ್ಲೇ ಮೋಸ ಹೋಗಿರುತ್ತೀರಿ. ಇದೀಗ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ  ಮಹಿಳೆ ಇದೇ ರೀತಿ ಮೋಸ ಹೋಗಿದ್ದಾರೆ. ಅದು ಕೂಡ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಹೆಸರಲ್ಲಿ ಈ ಮಹಿಳೆಗೆ ಮೋಸ ಮಾಡಲಾಗಿದೆ.

ಅಮೆರಿಕಾ ಮಹಿಳೆಗೆ ಮೋಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿರೋ ವ್ಯಕ್ತಿ ಬಿಹಾರದ ಜ್ಯೋತಿ ರಂಜನ್.  ಜ್ಯೋತಿ ರಂಜನ್ ಹಾಗೂ ಅಮೆರಿಕಾದಲ್ಲಿ ಉದ್ಯೋಗದಲ್ಲಿರುವ ಭಾರತೀಯ ಮಹಿಳೆ 2016ರಿಂದ ಪರಿಚಯಸ್ಥರಾಗಿದ್ದಾರೆ.  

ಬಿಹಾರದಲ್ಲಿ ಇಂಟೆಲಿವರ್ ಟೆಕ್ನಾಲಜಿ ಪ್ರವೇಟ್ ಲಿಮಿಟೆಡ್ ಕಂಪೆನಿ ಹೊಂದಿದ್ದು, ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ಈ ಕಂಪೆನಿಗೆ ರಾಯಭಾರಿ ಎಂದು ಜ್ಯೋತಿ ರಂಜನ್, ಅಮೇರಿಕ ಮಹಿಳೆಗೆ ನಂಬಿಸಿದ್ದಾನೆ. ಬಳಿಕ ಸುಮಾರು 60 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾನೆ.

ಜ್ಯೋತಿ ರಂಜನ್ ಈ ರೀತಿ ಹಲವರಿಗೆ ಮೋಸ ಮಾಡಿರುವುದು ತಿಳಿಯುತ್ತಿದ್ದಂತೆ, ಅಮೆರಿಕದಲ್ಲಿ ಉದ್ಯೋಗಿಯಾಗಿರಿವು ಈ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪಾಟ್ನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತಕ್ಷಣವೆ ಕಾರ್ಯಪ್ರವೃತ್ತರಾದ ಪೊಲೀಸರು ಜ್ಯೋತಿ ರಂಜನ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಹಲವು ಮಾಹಿತಿಗಳು ಹೊರಬಂದಿದೆ. ಜ್ಯೋತಿ ರಂಜನ್ ಹೇಳುತ್ತಿರುವ ಕಂಪೆನಿಯೇ ಇಲ್ಲ. ಜೊತೆಗೆ ಎಂ ಎಸ್ ಧೋನಿ ಸೇರಿದಂತೆ ಬಿಹಾರದ ಇತರ ಕ್ರಿಕೆಟಿಗರ ಹೆಸರಲ್ಲಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
 

click me!